spot_img
Tuesday, March 3, 2026
spot_img

ಕೋಡಿ ಬ್ಯಾರೀಸ್ ನಲ್ಲಿ ರೇಂಜರ್ಸ್ ರೋವರ್ಸ್ ಘಟಕದ ಉದ್ಘಾಟನೆ

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರೋವರ್ಸ್ ರೇಂಜರ್ಸ್ ಘಟಕವನ್ನು ಉದ್ಘಾಟಿಸಲಾಯಿತು,  ಕರ್ನಾಟಕದ ಮುಖ್ಯ ಆಯುಕ್ತರು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಹಾಗೂ ಮಾಜಿ ಕರ್ನಾಟಕ ವಿಧಾನಸಭೆಯ ಸಚಿವ ಪಿಜಿ‌ಆರ್ ಸಿಂಧ್ಯಾ ಉದ್ಘಾಟಕರಾಗಿ ಮಾತನಾಡಿ “ಪ್ರಕೃತಿಯ ಅಧ್ಯಯನವೇ ಈ ಕ್ಯಾಂಪಿನ ಮುಖ್ಯ ಉದ್ದೇಶವಾಗಿದೆ. ನಿರಂತರವಾಗಿ ಪರಿಸರ ಪ್ರಜ್ಞೆಯನ್ನು ಮೂಡಿಸುವೆಡೆಗೆ ಶಿಕ್ಷಣ ನೀಡುತ್ತಿರುವ ಈ ಪರಿಸರದಲ್ಲಿ ಅಧ್ಯಯನ ಮಾಡುವ ಸದಾವಕಾಶ ಸಿಕ್ಕಿದೆ, ಕರ್ನಾಟಕವನ್ನು ಚಿನ್ನದ ನಾಡನ್ನಾಗಿ, ಗಂಧದ ಬೀಡ ನ್ನಾಗಿ ಮತ್ತು ಸದಾ ಕಾಲ ನೀರಿರುವ ನಾಡನ್ನಾಗಿ ಕಟ್ಟುತ್ತೇವೆ ಎಂಬ ಆಶಯವಿದೆ. ಈ ಸುಂದರ ಕಡಲ ತೀರ ಪರಿಸರದಲ್ಲಿ ಪರಿಸರ ಪ್ರಜ್ಞೆಯನ್ನು ಮುಖ್ಯ ಧ್ಯೇಯವಾಗಿಟ್ಟುಕೊಂಡು ಶಿಕ್ಷಣ ನೀಡುತ್ತಿರುವ ಬ್ಯಾರೀಸ್ ಸಂಸ್ಥೆ 38 ತಿಂಗಳುಗಳಿಂದ ಸ್ವಚ್ಚ ಕಡಲ ತೀರ – ಹಸಿರು ಕೋಡಿ ಅಭಿಯಾನದ ಅಡಿ ಪ್ಲಾಸ್ಟಿಕ್ ಮುಕ್ತ ಕಡಲ ತೀರವನ್ನಾಗಿ ಮಾರ್ಪಡಿಸುವಲ್ಲಿ ನಿರಂತರವಾಗಿ ಶ್ರಮಿಸುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಇವರಿಗೆ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಘಟಕದಿಂದ ವಿಶೇಷ ಅಭಿನಂದನೆ ಸಲ್ಲಿಸಿ, ಶುಭಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದ ಬ್ಯಾರೀಸ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾಕ್ಟರ್ ಆಸಿಫ್ ಬ್ಯಾರಿ ಅವರು “ನಮ್ಮ ಸಂಸ್ಥೆ ಈಗಾಗಲೇ ಸ್ಕೌಟ್ಸ್ ಎಂಡ್ ಗೈಡ್ಸ್ ಘಟಕವನ್ನು ಹೊಂದಿದ್ದು, ಇಂದು ಕರ್ನಾಟಕದ ಸ್ಕೌಟ್ಸ್ ಎಂಡ್ ಗೈಡ್ಸ್ ಇದರ ಮುಖ್ಯ ಆಯುಕ್ತರಾದ ಶ್ರೀಯುತ ಪಿಜಿ‌ಆರ್ ಸಿಂಧ್ಯಾ ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರಿಂದ ರೋವರ್ಸ್ ರೇಂಜರ್ಸ್ ಘಟಕವು ಉದ್ಘಾಟನೆಗೊಂಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ. ಈ ಘಟಕದ ಮೂಲಕ ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಉತ್ತಮ ಚಾರಿತ್ರ್ಯ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ಜೀವನ ಉತ್ಸಾಹವನ್ನು ಹೆಚ್ಚಿಸುವಂತಹ ಕಾರ್ಯಗಳಲ್ಲಿ ತೊಡಗಿ” ಎಂದು ನುಡಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ಶೆರಿಗಾರ್ ರೀಫ್ ವಾಚ್ ಇವರು ಕಡಲಾಮೆಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡಿದರು. ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಮುಖ್ಯ ಆಯುಕ್ತರು ಮಾತನಾಡಿ “21 ಜಿಲ್ಲೆಗಳನ್ನು ಪ್ರತಿನಿಧಿಸಿದ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ರೋವರ್ಸ್ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟ ಬ್ಯಾರೀಸ್ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಬ್ಯಾರಿ ಅವರು “ಯುವಜನರು ಜವಾಬ್ದಾರಿ ನಾಗರಿಕರಾಗಿ,ವ್ಯಕ್ತಿಗಳಾಗಿ, ತಮ್ಮ ದೈಹಿಕ ಬೌದ್ಧಿಕ ಭಾವನಾತ್ಮಕ ಸಾಮಾಜಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿ” ಎಂದು ಈ ಸಂದರ್ಭದಲ್ಲಿ ನುಡಿದರು. ಮತ್ತು ಭಾಗವಹಿಸಿದ ಅತಿಥಿಗಣ್ಯರಿಗೆ ಹಾಗೂ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ರೋವರ್ಸ್ ನ 250 ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಡೆಯಿಂದ ಟಿಶರ್ಟ್ ಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಮನ ಶೇಖರ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರು,  ಗುರುರಾಜ್ ಡೆಪ್ಯೂಟಿ ಆರ್.ಎಫ್.ಒ, ಶ್ರೀ. ಪ್ರವೀಣ್ ರೋವರ್ಸ್ ಸ್ಕೌಟ್ಸ್ ಲೀಡರ್, ಶ್ರೀ. ಆನಂದ ಅಡಿಗ ಜಿಲ್ಲಾ ಕಾರ್ಯದರ್ಶಿ ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್, ಶ್ರೀ. ಉದಯ ಭಾಸ್ಕರ್ ಶೆಟ್ಟಿ ಜಿಲ್ಲಾ ತರಬೇತಿ ಆಯುಕ್ತರು, ಶ್ರೀ. ಆರ್.ಟಿ ಭಟ್ ಜಿಲ್ಲಾ ಪದಾಧಿಕಾರಿಗಳು, ಶ್ರೀ. ಮೊಹಮ್ಮದ್ ಮೌಲಾ ಜಿಲ್ಲಾ ಸಾನಿಯಾ ಆಯುಕ್ತರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಿದ್ದಪ್ಪ ಕೆ ಎಸ್ ಪ್ರಾಂಶುಪಾಲರು ಬ್ಯಾರಿಸ್ ಬಿ‌ಎಡ್ ಕಾಲೇಜ್, ಶಬೀನಾ ಪ್ರಾಂಶುಪಾಲರು ಬ್ಯಾರಿಸ್ ಪದವಿ ಕಾಲೇಜ್, ಡಾ. ಫಿರ್ದೋಸ್ ಪ್ರಾಂಶುಪಾಲರು ಬ್ಯಾರೀಸ್ ಡಿ ಎಡ್ ಕಾಲೇಜ್, ಶ್ರೀಮತಿ ಅಶ್ವಿನಿ ಶೆಟ್ಟಿ ಪ್ರಾಂಶುಪಾಲರು ಬ್ಯಾರೀಸ್ ಪಿಯು ಕಾಲೇಜ್ ಹಾಗೂ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್,ಡಾಕ್ಟರ್ ಪೂರ್ಣಿಮಾ ಶೆಟ್ಟಿ ಶೈಕ್ಷಣಿಕ ವಿಭಾಗದ ಮುಖ್ಯಸ್ಥರು,  ಪ್ರವೀಣ್ ಕುಮಾರ್ ಕೆ.ಪಿ ಉಪ ಪ್ರಾಂಶುಪಾಲರು ಹಾಗೂ ದಾಖಲಾತಿ ಅಧಿಕಾರಿಗಳು ಬ್ಯಾರೀಸ್ ಬಿ ಎಡ್ ಕಾಲೇಜ್, ಶ್ರೀಮತಿ ಶ್ರುತಿ, ಶ್ರೀ ಗೌರೀಶ್ ಶೆಟ್ಟಿ, ಶ್ರೀಲೇಖ ರೇಂಜರ್ಸ್ ರೋವರ್ಸ್ ಟ್ರೈನರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಗಣ್ಯರು, ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಡಾ. ಫಿರ್ದೋಸ್ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕಿ ಶ್ರೀಮತಿ ಪ್ರಿಯಾ ರೇಗೊ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಮನಃಶಾಸ್ತ್ರ ಉಪನ್ಯಾಸಕಿ ಲಮಿಸ್ ಲರೈಬ್ ವಂದಿಸಿದರು.

ಈ ಸಂದರ್ಭದಲ್ಲಿ, ಪಿಜಿ‌ಆರ್ ಸಿಂಧಿಯಾ ಸೇರಿದಂತೆ, ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ರೇಂಜರ್ಸ್ ಮತ್ತು ರೋವರ್ಸ್ ಅಧಿಕಾರಿಗಳು, ಎಲ್ಲಾ ವಿದ್ಯಾರ್ಥಿಗಳು, ಕೋಡಿ ಹಸಿರು ಮಸೀದಿಗೆ ಭೇಟಿ ನೀಡಿ ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಉತ್ಪಾದನೆಯ ವಿಶಿಷ್ಟ ವಿನ್ಯಾಸವನ್ನು ಶ್ಲಾಘಿಸಿದರು, ಇದು ಐಜಿಬಿಸಿಯಿಂದ ಗುರುತಿಸಲ್ಪಟ್ಟ ಮೊದಲ ಆನ್-ಸೈಟ್ ನೆಟ್ ಝೀರೋ “ಪ್ರಾರ್ಥನಾ ಸ್ಥಳ” ಇದಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಸಿರು ಮತ್ತು ಸುಸ್ಥಿರ ಜೀವನ ವಿಧಾನವನ್ನು ಬೆಳೆಸಿಕೊಳ್ಳುವಂತೆ  ಪಿಜಿ‌ಆರ್ ಸಿಂಧಿಯಾ ವಿನಂತಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!