spot_img
Tuesday, March 3, 2026
spot_img

ಜನಪದ‌ ಉತ್ಸವ ಜನ ಜಲ್ಸಾ-2025| ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು-ಡಾ. ಕೆ. ವಿದ್ಯಾಕುಮಾರಿ

ಉಡುಪಿ: ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು. ವೈವಿಧ್ಯಮಯ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ನಮ್ಮ ನಾಡಿನ ಹಿರಿಮೆಯನ್ನು ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ‌ಅದನ್ನು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ‌ ಅಭಿಪ್ರಾಯ ಪಟ್ಟರು.

ಇವರು‌ಉಡುಪಿ ಜಿಲ್ಲೆಯ ಲೀಡ್ ಕಾಲೇಜುಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರ‌ಅಧ್ಯಯನಕೇಂದ್ರ‌ಅಜ್ಜರಕಾಡು‌ಇಲ್ಲಿನ ವಿದ್ಯಾರ್ಥಿಕ್ಷೇಮಪಾಲನಾ ಸಮಿತಿ, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕೃತಿಕ ವೇದಿಕೆ ಇದರ ಸಂಯುಕ್ತ‌ಆಶ್ರಯದಲ್ಲಿಕಾಲೇಜು‌ಆವರಣದಲ್ಲಿ‌ಆಯೋಜಿಸಲಾದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಜನಪದ‌ಉತ್ಸವಜನಜಲ್ಸಾ ೨೦೨೫ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾದದ್ದು‌ಎಂದರು.

ಮುಖ್ಯ‌ಅತಿಥಿಯಾಗಿಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಅಪರಜಿಲ್ಲಾಧಿಕಾರಿ‌ ಅಭಿದ್ ಗದ್ಯಾಳ್ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ‌ಒಂದು‌ಉತ್ತಮಗುರಿಯನ್ನು ಹೊಂದಿರಬೇಕು. ಗುರಿ‌ಉತ್ತಮವಾಗಬೇಕಾದರೆ‌ಉತ್ತಮ ಸಂಸ್ಕೃತಿಯನ್ನು ಹೊಂದಿರಬೇಕು. ಗುರು ಹಿರಿಯನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮನ್ನಡೆದರೆ ಮಾತ್ರಜೀವನ ಸುಂದರವಾಗಲು ಸಾಧ್ಯ‌ಎಂದರು.

ಈ ಸಂದರ್ಭದಲ್ಲಿಕಾಲೇಜಿನ ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ‌ಉಡುಗೆ ತೊಡುಗೆಗಳನ್ನು ಉಟ್ಟುಜನಪದ‌ಉತ್ಸವದಲ್ಲಿ ಪಾಲ್ಗೊಂಡರು. ಕಾಲೇಜು ವಿದ್ಯಾರ್ಥಿಗಳು ತಮ್ಮತರಗತಿ ಕೊಠಡಿಗಳಲ್ಲಿ ಜನಪದ ವಸ್ತುಗಳನ್ನು ಇಟ್ಟು‌ಅಲಂಕರಿಸಿದ್ದರು ಹಾಗೂ ಸಾಂಪ್ರದಾಯಿಕರುಚಿಕರತಿಂಡಿ ತಿನಸುಗಳನ್ನು ತಯಾರಿಸಿ ಮಾರಾಟವನ್ನು ಮಾಡಿದರು.

ಕಾರ್ಯಕ್ರಮದ‌ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಪ್ರಸಾದ್ ಕೆ ವಹಿಸಿದ್ದರು. ಸಾಫಲ್ಯಟ್ರಸ್ಟ್‌ನ ನಿರ್ದೇಶಕರಾದ ಶ್ರೀಮತಿ ನಿರುಪಮಾ ಪ್ರಸಾದ್, ಖ್ಯಾತ ಬರಹಗಾರರು ವಸಂತಿ ಶೆಟ್ಟಿ ಬ್ರಹ್ಮವಾರ, ಕಾಲೇಜಿನ ಐಕ್ಯೂ‌ಎಸಿ ಸಂಚಾಲಕರು ಪ್ರೊ. ಶ್ರೀಮತಿ ಅಡಿಗ ಮತ್ತು ವಾಣಿಜ್ಯ ನಿಕಾಯದಡೀನ್ ಶ್ರೀಮತಿ ಗೌರಿ‌ಎಸ್‌ಭಟ್‌ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾ ಸಮಿತಿಯ ಸಂಚಾಲಕರು ಹಾಗೂ ಕಲಾ ನಿಕಾಯದಡೀನ್‌ಆಗಿರುವ ಪ್ರೊ. ನಿಕೇತನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನುಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರ ಕೆ ನಿರೂಪಿಸಿ, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಶ್ರೀಮತಿ ರೇಖಾ‌ಎಸ್.ಎನ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!