spot_img
Monday, March 16, 2026
spot_img

ಕುಡುಬಿ ಜನಾಂಗದ ಹೋಳಿ ಒಂದು ವಿಶಿಷ್ಟ ಆಚರಣೆ-ಎಲ್ಲೆಲ್ಲೂ  ಹೋಳಿ ಹಬ್ಬದ ಸಂಭ್ರಮ

ಬ್ರಹ್ಮಾವರ : ಹೋಳಿ ಹುಣ್ಣಿಮೆ ಕುಡುಬಿ ಮತ್ತು ಮರಾಟಿ ಸಮುದಾಯದ ಒಂದು ವಿಶಿಷ್ಟ ಜಾನಪದ ಆಚರಣೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಈ ಆಚರಣೆಯನ್ನು ಬಲು ಸಡಗರದಿಂದ ಆಚರಿಸುತ್ತಾರೆ ಗೋವಾದ ಶ್ರೀ ಮಲ್ಲಿಕಾರ್ಜುನ ದೇವರು ಕುಡುಬಿ ಜನಾಂಗದ ಆರಾಧ್ಯ ದೇವರಾಗಿದ್ದು ಹೋಳಿ ಹಬ್ಬದ ಸಮಯದಲ್ಲಿ ಮಲ್ಲಿಕಾರ್ಜುನ ದೇವರನ್ನು ಸ್ತುತಿಸಿ ಹಾಡುತ್ತಾರೆ, ವರ್ಷಕ್ಕೊಮ್ಮೆ 5
ದಿನಗಳ ಕಾಲ ಆಚರಿಸುವ ಹೋಳಿ ಕೇವಲ ಜನಪದ ಆಚರಣೆ ಮಾತ್ರ ಆಗಿರದೆ ಕುಡುಬಿ ಸಮುದಾಯದ ಅವರದೇ ವಿಧಿ ವಿಧಾನದ ಭಕ್ತಿ ಪ್ರಧಾನ ಹಬ್‌ಬವೂ ಆಗಿದೆ ಹೋಳಿ ಆಚರಣೆಯ ದನಗಳಲ್ಲಿ ನೆಂಟರಿಷ್ಟ ರು ಒಂದೆಡೆ ಸೇರಿ ನಲಿಯುತ್ತಾರೆ, ಕುಣಿಯುತ್ತಾರೆ ಸಂತೋಷ ಹಂಚಿ ಕೊಳ್ಳುತ್ತಾರೆ. ಆ ಮೂಲಕ ಈ ಮಣ್ಣಿನ ಜನಪದ ಸಂಸ್ಕೃತಿಯನ್ನು ನಮಗೂ ನೆನಪಿಸುತ್ತಾರೆ ಕುಡುಬಿ ಸಮುದಾಯದ ಕೂಡುಕಟ್ಟು ಗಳಲ್ಲಿ ಗುರಿಕಾರರ ಮುಂದಾಳತ್ವದಲ್ಲಿ ನಡೆಯುವ ಈ ಆಚರಣೆ ಗುಮ್ಮಟೆ ಗಳನ್ನೂ ಬಳಸಿಕೊಂಡು ತಮ್ಮ ಧಾರ್ಮಿಕ ಚೌಕಟ್ಟಿಗೆ ಧಕ್ಕೆ ಬರದಂತೆ ವೇಷಭೂಷಣ ಧರಿಸಿ ಸ್ವ ಜಾತಿಯ ಸಮುದಾಯ ತಂಡಗಳು ಗ್ರಾಮ ದೇವರ ಸನಧಿಗೆ ಬಂದು ಸೇವೆ ಪ್ರಾರಂಭಿಸಿ ಅಲ್ಲಿಂದ ತಂಡಗಳನ್ನು ರಚಿಸಿಕೊಂಡು ಬರೀ ಕಾಲ್ನಡಿಗೆಯಲ್ಲೇ ನಡೆದು ತಮ್ಮ ಆಡುಭಾಷೆಯಲ್ಲಿ ಹಾಡುಗಳನ್ನು ಹಾಡಿಕೊಂಡು ತಮ್ಮ ಸಮುದಾಯ
ಮತ್ತು ಆಹ್ವಾನಿತರ ಮನೆಗಳಿಗೆ ತೆರಳಿ ಸುಂದರವಾಗಿ ನರ್ತಿಸುತ್ತಾರೆ ಕೋಲಾಟ ಕುಣಿಯುತ್ತಾರೆ ಪ್ರದರ್ಶನ ನೀಡಿದ ಮನೆಯಿಂದ ಅಕ್ಕಿ ಕಾಯಿ ಕಾಣಿಕೆಯನ್ನು ಪಡೆದು ಒಳಿತಾಗಲೆಂದು ಹರಸುತ್ತಾರೆ.ಉಡುಪಿ ಜಿಲ್ಲೆಯ ಕೊಕ್ಕರ್ಣೆ,ನಾಲ್ಕೂರು ಗೋಳಿಯಂಗಂಡಿ ಬೆಳೆ ಹಾಲಾಡಿ ಯಡ್ತಾಡಿ, ಮಂದಾರ್ತಿ ನಡೂರು ಈ ಭಾಗದಲ್ಲಿ ಹೆಚ್ಚಾಗಿ ಈ ಆಚರಣೆ ಕಂಡು ಬರುತ್ತದೆ.
ನಡೂರು ಕಂಡಿಕೆ ಹೋಳಿ ಕೂಡುಕಟ್ಟು:
ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕು, ಕಾಡೂರು ಗ್ರಾಮ ಪಂಚಾಯತ್,ನ ನಡೂರು ಗ್ರಾಮದ ನೆಕ್ಕರ್ಕ,  ಕಂಡಿಕೆ ಹೋಳಿ ಕೂಡುಕಟ್ಟು   ಉಡುಪಿ ಜಿಲ್ಲೆಯ 46ಕೂಡುಕಟ್ಟುಗಳಲ್ಲಿ  ಒಂದು. ಈ ಕೂಡು ಕಟ್ಟಿನವರು  ಹಿರಿಯರು ತಲೆ-ತಲಾಂತರಗಳಿಂದ ಯಾವುದೇ ಆಡಚಣೆ ಇಲ್ಲದೇ, ಪ್ರತಿ ವರ್ಷ ಹೋಳಿ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.
.ಈ ಹೋಳಿ ಕೂಡುಕಟ್ಟಿನಲ್ಲಿ ಶೀನ ನಾಯ್ಕ ನೆಕ್ಕರ್ಕ ಇವರು ಗುರಿಕಾರರ ಮನೆಯವರಾಗಿದ್ದು , ಬಸವ ನಾಯ್ಕ ಹೊಸ್ಮಕ್ಕಿ ಮಂದಾರ್ತಿ ಇವರು ಹೋಳಿ ಕೂಡುಕಟ್ಟಿನ ಯಜಮಾನರ ಹಕ್ಕನ್ನು ಹೊಂದಿರುತ್ತಾರೆ ಹಾಗು ಗೋಪಾಲ ನಾಯ್ಕ ಕಂಡಿಕೆ ಇವರು ಗುಮ್ಮಟೆ ಹಕ್ಕುದಾರರಾಗಿರುತ್ತಾರೆ . ಕಂಡಿಕೆ, ಬರದಕಲ್ಲು, ಮಂದಾರ್ತಿ ,ಹೊಸ್ಮಕ್ಕಿ, ನೆಕ್ಕರ್ಕ, ಮೂಡುಬೆಟ್ಟು, ಕೂರಾಡಿ, ಕಲ್ಲಾಂಟಿ ಪ್ರದೇಶವು  ಕಂಡಿಕೆ ಹೋಳಿ ಕೂಡು ಕಟ್ಟು ವ್ಯಾಪ್ತಿಯಲ್ಲಿ ಬರುತ್ತದೆ , ಇವರೆಲ್ಲರೂ ಏಕಾದಶಿಯ ದಿನ ಬೆಳಗಿನ ಜಾವಕ್ಕೂ ಮುನ್ನವೇ ನೆಕ್ಕರ್ಕ ಹೋಳಿ
ಕೂಡು ಕಟ್ಟು ಗುರಿಕಾರರಾದ ದಿ.ಗಂಗ ನಾಯ್ಕರ ಮಗನಾದ ಶೀನ ನಾಯ್ಕರ ಮನೆಗೆ ಬಂದು ಪ್ರಥಮ ದಿನದ ಹೋಳಿ ಹಬ್ಬದ ಹಾಡುಗಳು ಮೂಲಕವೇ ವಿಧಿ-ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ ನಂತರ ಉಳಿದ ಗ್ರಾಮಗಳಿಗೆ ತೆರಳುತ್ತಾರೆ.
-ಅಲ್ತಾರು ನಾಗರಾಜ್, ಚಿಗುರು ನಡೂರು. ಉಪನ್ಯಾಸಕರು
ಹೋಳಿ ಹಬ್ಬ ನಮ್ಮ ಸಮುದಾಯದ ದೊಡ್ಡ ಹಬ್ಬ ಮುಂದಿನ ಮಕ್ಕಳಿಗೆ ಈ ಹಬ್ಬದ ಬಗ್ಗೆ ಅರಿವು ಮೂಡಿಸಬೇಕಾದರೆ ಯುವ ಜನಾಂಗದವರು ಹೆಚ್ಚಾಗಿ ಈ ಹಬ್ಬ ದಲ್ಲಿ ಭಾಗವಹಿಸಬೇಕು ನಮ್ಮ ಹಿಂದಿನವರು ಆಚರಿಸಿ ಬೆಳೆಸಿದ ಈ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ ,ಸರಕಾರವು ಕೂಡ ಈ ಹೋಳಿ ಹಬ್ಬಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ .
ಶೀನ ನಾಯ್ಕ ನೆಕ್ಕರ್ಕ, ಗುರಿಕಾರರು ಹೋಳಿ ಕೂಡುಕಟ್ಟು ನಡೂರು ಕಂಡಿಕೆ,
ನಮ್ಮ ಸಮುದಾಯದವರು ನಡೆಸುವ ವಾರ್ಷಿಕ ಹೋಳಿ ಕುಣಿತ ಆಧು ನಿಕತೆಯ ನಡುವೆಯೂ ನಮ್ಮ ಜನಾಂಗದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಗುರಿಕಾರರ ನೇತ್ರತ್ವದಲ್ಲಿ ನಡೆಯುವ ಈ ಹಬ್ಬವು ಪ್ರತಿ ಕೂಡುವಳಿಯ ಗುರಿಕಾರರ ಮನೆಯಲ್ಲಿ ಅಟ್ಟದಲ್ಲಿ ಕಟ್ಟಿರುವ ಗುಮ್ಮಟೆಗಳನ್ನು ತೆಗೆದು ನಮ್ಮದೇ ಆಡುಭಾಷೆಯಲ್ಲಿ ಹಾಡುಗಳ ತರಬೇತಿ ಮಾಡಿಕೊಂಡು ಆ ಮೂಲಕ ಪ್ರತಿಯೊಬ್ಬರೂ ಪಾಲ್ಗೊಳ್ಳುತ್ತೇವೆ ನಮ್ಮ ಹಿಂದಿನವರು ಕಾಪಾಡಿಕೊಂಡು, ಆಚರಿಸಿಕೊಂಡು ಬಂದಿ ರುವ ಈ ಹಬ್ಬವನ್ನು ಮುಂದಿನ ತಲೆಮಾರಿನ ವರೆಗೂ ಮುಂದುವರಿಯ ಬೇಕಾದರೆ ಯುವ ಸಮುದಾಯದವರು ಈ ಹಬ್ಬದಲ್ಲಿ ಪಾಲ್ಗೊಳ್ಳಬೇಕು
-ವಿಶ್ವನಾಥ ನಾಯ್ಕ ಕಂಡಿಕೆ ,ಹೋಳಿ ಕೂಡುಕಟ್ಟು ಸದಸ್ಯ
ಗ್ರಾಮೀಣ ಪರಿಸರದ ಜಾನಪದ ಸಂಸ್ಕೃತಿಯ ನಿಜವಾದ ಚಿತ್ರಣ ಹೋಳಿ ಆಚರಣೆಯಲ್ಲಿ ಕಾಣಸಿಗುತ್ತದೆ. ಆಧುನಿಕತೆಯ ಭರಾಟೆಯ ನಡುವೆ ಈ ಪರಂಪರೆ ಮುಂದುವರೆಯುತ್ತಿರುವುದು ಸಂತಸ ತರುತ್ತದೆ.
-ಮಹೇಶ್ ಕೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಡೂರು ನಡೂರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!