spot_img
Monday, March 16, 2026
spot_img

ಅರಾಟೆ ಪೈಗಳಹಿತ್ಲು ನಾಗಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ಸಂಪನ್ನ

ಗಂಗೊಳ್ಳಿ : ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಪೈಗಳಹಿತ್ಲು ನಾಗಬನದಲ್ಲಿ ಹಾಲಿಟ್ಟು ಸೇವೆ ಹಾಗೂ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ನಾಗಮಂಡಲೋತ್ಸವದ ಪ್ರಯುಕ್ತ ಸೋಮವಾರ ಸರ್ಪಸಂಸ್ಕಾರ, ಸಮಾಪ್ತ್ಯಂಗ ತಿಲಹೋಮ, ಸರ್ವಪ್ರಾಯಶ್ಚಿತ್ತ ತಿಲಹೋಮ, ಬ್ರಾಹ್ಮಣ ವಟು ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ರಾತ್ರಿ ಸರ್ವಪ್ರಾಯಶ್ಚಿತ್ತ ಆಶ್ಲೇಷಾ ಬಲಿ, ರಾಕ್ಷೆಘ್ನ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಮಂಗಳವಾರ ಪಣ್ಣಾಳಿಕೇರ ಗಣಯಾಗ, ಕಲಾತತ್ತ್ವ ಪುರಸ್ಸರ ಪ್ರಧಾನ ಅಧಿವಾಸ ಹೋಮ, ಚತುರ್ವೇದ ಪಾರಾಯಣ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಸಂದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು. ಸುಮಾರು 15 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ ಹಾಲಿಟ್ಟು ಸೇವೆ, ರಾತ್ರಿ ಏಕಪವಿತ್ರ ನಾಗಮಂಡಲೋತ್ಸವ ನಡೆಯಿತು. ಶ್ರೀಧರ ಮಂಜರು ಹಿಲ್ಕೋಡು ಮತ್ತು ಶಂಕರನಾರಾಯಣ ಬಾರಿ ಬೀಜಾಡಿ ನಾಗಪಾತ್ರಿಗಳಾಗಿ ಹಾಗೂ ಗೋಳಿಯಂಗಡಿ ವಾಸುದೇವ ವೈದ್ಯ ಹಾಗೂ ಸಂಗಡಿಗರು ವೈದ್ಯರಾಗಿ ನಾಗಮಂಡಲೋತ್ಸವ ಕಾರ್ಯಕ್ರಮ ಸಂಪನ್ನಗೊಳಿಸಿದರು.

ರೂಪಾ ಮತ್ತು ರಾಜೇಶ ಪೈ ಉಪ್ಪುಂದ ದಂಪತಿ ನೇತೃತ್ವದಲ್ಲಿ ವಿದ್ವಾನ್ ಶ್ರೀಶ ಅಡಿಗ ಹೊಸಾಡು ಪೌರೋಹಿತ್ಯದಲ್ಲಿ ನಾಗಮಂಡಲೋತ್ಸವ ಕಾರ್ಯಕ್ರಮ ನಡೆಯಿತು. ಕುಲಪುರೋಹಿತ ಹರೀಶ್ ಭಟ್ ಉಪ್ಪುಂದ, ಪ್ರಧಾನ ಅರ್ಚಕ ರಾಮಚಂದ್ರ ನಾವಡ ಅರಾಟೆ, ಉಮೇಶ ಪೈ ಉಪ್ಪುಂದ, ಸತೀಶ ಪೈ ಉಪ್ಪುಂದ, ಅರ್ಚಕರು, ಪುರೋಹಿತರು, ಅರಾಟೆ ಪೈ ಕುಟುಂಬಸ್ಥರು, ಸೇವಾದಾರ ಕುಟುಂಬಸ್ಥರು, ಅರಾಟೆ ಗ್ರಾಮಸ್ಥರು, ಭಕ್ತರು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!