spot_img
Wednesday, April 1, 2026
spot_img

ಮಾ.15ರಂದು ಕೆಂಚನೂರಿನಲ್ಲಿ ತೆಂಕು-ಬಡಗಿನ ಪ್ರಚಂಡ ಕೂಡಾಟ : ಸಂಕಲ್ಪ ಸಿದ್ಧಿ

ಕುಂದಾಪುರ: ತೆಂಕು ಬಡಗಿನ ಪ್ರಸಿದ್ಧ ಯಕ್ಷಗಾನ ಮೇಳಗಳಾದ ಹನುಮಗಿರಿ ಮೇಳ ಮತ್ತು ಮೆಕ್ಕೆಕಟ್ಟು ಮೇಳದವರು ಹಾಗೂ ಅತಿಥಿ ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಪ್ರಚಂಡ ಕೂಡಾಟ ಕೆಂಚನೂರು ಯಕ್ಷೆತ್ಸವ-ಸಂಕಲ್ಪ ಸಿದ್ಧಿ ಮಾರ್ಚ್ 15 ಶನಿವಾರ ಸಂಜೆ 7 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಕೆಂಚನೂರು ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.

ಎರಡು ಮೇಳಗಳ ಕಲಾವಿದರು ಮಾತ್ರವಲ್ಲದೆ ಎಂಟು ಅತಿಥಿ ಕಲಾವಿದರು ಭಾಗವಹಿಸಲಿದ್ದಾರೆ. 25 ಬಗೆಯ ವಿಶೇಷ ಆಕರ್ಷಣೆಗಳು ಈ ಯಕ್ಷೆತ್ಸವದಲ್ಲಿ ಇರಲಿದೆ. ಅತ್ಯಂತ ಅಪರೂಪದ ಪೌರಾಣಿಕ ಪ್ರಸಂಗಗಳಾದ ಅವತಾರ ವೇದಿಕೆ, ದ್ರುಪದ ಗರ್ವಭಂಗ, ಬ್ರಹ್ಮ ಸಂಕಲ್ಪ, ಸತ್ವ ಶೈಥಿಲ್ಯ ಎನ್ನುವ ನಾಲ್ಕು ಪ್ರಸಂಗಗಳ ಪ್ರದರ್ಶನ ನಡೆಯಲಿದೆ.

ಅತಿಥಿ ಕಲಾವಿದರಾಗಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಹೊಸಂಗಡಿ ರವೀಂದ್ರ ಶೆಟ್ಟಿ, ಪರಮೇಶ ಭಂಡಾರಿ ಕರ್ಕಿ, ಶಿವಾನಂದ ಕೋಟ, ಪ್ರಕಾಶ ಕಿರಾಡಿ, ಸುನಿಲ್ ಕುಮಾರ್ ಹೊಲಾಡು, ವಿಶ್ವನಾಥ ಹೆನ್ನಾಬೈಲು, ಚಂದ್ರಹಾಸ ಗೌಡ ಹೊಸಪಟ್ನ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಮಾಡಲಾಗುವುದು. ವಾಗ್ಮಿ ದಾಮೋದರ ಶರ್ಮ ಅವರ ಮಾತಿನ ಮೋಡಿಯೂ ಸರಳ ಸಭಾ ಕಾರ್ಯಕ್ರಮದಲ್ಲಿ ಆಸ್ವಾದಿಸಬಹುದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರಾದ ರವಿ ಗಾಣಿಗ ಮಲ್ಲಾರಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!