spot_img
Sunday, February 15, 2026
spot_img

ಬೇಡಿಕೆ ಆಧರಿಸಿ ಬಸವ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಮಾಡಿ | ಕಂತು ಸರಿಯಾಗಿ ಪಾವತಿಸಿ : ರಮೇಶ್‌ ಶೆಟ್ಟಿ ವಕ್ವಾಡಿ

ಜನಪ್ರತಿನಿಧಿ (ಕುಂದಾಪುರ) : ಗ್ರಾಮಪಂಚಾಯತ್ ಗಳಿಗೆ ಬಸವ ವಸತಿ ಯೋಜನೆಯಡಿ ಮಂಜೂರು ಮಾಡಿದ ಮನೆಗಳ ನಿರ್ಮಾಣದ ಕಂತು ಸರಿಯಾಗಿ ಪಾವತಿಯಾಗುತ್ತಿಲ್ಲ. ಸಹಾಯ ಧನವಾಗಿ ಕೇವಲ ಒಂದು ಲಕ್ಷದ ಇಪ್ಪತ್ತು ಸಾವಿರ ನೀಡುತ್ತಿದ್ದರೂ ಈ ರೀತಿ ಬಡವರನ್ನು ಸತಾಯಿಸುತ್ತಿರುವುದು ಸರಿಯಲ್ಲ ಎಂದು ಕುಂದಾಪುರ ವಲಯದ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಸಂಚಾಲಕ ರಮೇಶ್‌ ಶೆಟ್ಟಿ ವಕ್ವಾಡಿ ಹೇಳಿದ್ದಾರೆ.

ಸುಮಾರು ಹತ್ತು ಲಕ್ಷದೊಳಗೆ ಈಗ ಮನೆ ನಿರ್ಮಾಣ ಸಾಧ್ಯವಿಲ್ಲದಿದ್ದರೂ, ಬಡವರು ಸಾಲಸೂಲ ಮಾಡಿ ವಸತಿ ಯೋಜನೆಯ ಅಲ್ಪಮೊತ್ತವನ್ನು ಆಸರೆಯಾಗಿರಿಸಿಕೊಂಡು ಮನೆ ಕಟ್ಟುವ ಕನಸನ್ನು ಕಟ್ಟಿಕೊಂಡಿದ್ದು  ಹಣವು ಪಾವತಿ ಆಗದೇ, ಹಲವಾರು ನಿಯಮಗಳನ್ನು ರೂಪಿಸಿ ಕಂತಿನ ಹಣವನ್ನು ತಡೆಹಿಡಿಯಲಾಗಿದೆ. ಕೂಡಲೇ ಎಲ್ಲಾ ಫಲಾನುಭವಿಗಳ ಬಾಕಿ ಹಣವನ್ನು ಯಾವುದೇ ಸಬೂಬು ಹೇಳದೇ ನೇರ ಬಿಡುಗಡೆಗೊಳಿಸಬೇಕು ಎಂದಿದ್ದಲ್ಲದೇ, ಕುಂದಾಪುರ ತಾಲೂಕಿನ ಹೆಚ್ಚಿನ ಗ್ರಾಮಪಂಚಾಯತ್ ಗಳಲ್ಲಿ ಹೊಸ ಮನೆ ನಿರ್ಮಾಣಕ್ಕೆ ಬೇಡಿಕೆ ಇದ್ದು, ಅದನ್ನು ಗುರುತಿಸಿ ಹೊಸದಾಗಿ ಬಸವ ವಸತಿ ಮನೆಗಳ ಹಂಚಿಕೆ ಮಾಡಬೇಕು ಎಂದು ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!