spot_img
Tuesday, March 31, 2026
spot_img

ವಿಶ್ವದ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ 13 ಭಾರತದ ನಗರಗಳು : ಆಘಾತಕಾರಿ ವರದಿ

ಜನಪ್ರತಿನಿಧಿ (ನವದೆಹಲಿ) : ವಿಶ್ವದ ಅಗ್ರಸ್ಥಾನಗಳಲ್ಲಿರುವ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಹದಿಮೂರು ನಗರಗಳು ಭಾರತದಲ್ಲಿವೆ ಎಂದು ಇಂದು(ಮಂಗಳವಾರ) ಪ್ರಕಟವಾದ ಹೊಸ ವರದಿವೊಂದು ತಿಳಿಸಿದ್ದು, ಅಸ್ಸಾಂನ ಬೈರ್ನಿಹತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಗಾಳಿಯಲ್ಲಿನ ಮಾಲಿನ್ಯಕರ ಅಂಶವನ್ನು ಮಾಪನ ಮಾಡುವ ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ ವಿಶ್ವ ವಾಯು ಗುಣಮಟ್ಟ ವರದಿ 2024ರಲ್ಲಿ ದೆಹಲಿ ಜಾಗತಿಕವಾಗಿ ಅತ್ಯಂತ ಮಲಿನ ರಾಜಧಾನಿಯಾಗಿ ಉಳಿದಿದ್ದು, ಭಾರತ 2024ರಲ್ಲಿ ವಿಶ್ವದ ಐದನೇ ಅತ್ಯಂತ ಮಾಲಿನ್ಯಭರಿತ ದೇಶವಾಗಿದೆ. 2023ರಲ್ಲಿ ಮೂರನೇ ಸ್ಥಾನದಲ್ಲಿ ಭಾರತ ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಭಾರತ 2024 ರಲ್ಲಿ PM2.5 ಸಾಂದ್ರತೆಯಲ್ಲಿ ಶೇಕಡಾ 7 ರಷ್ಟು ಕುಸಿತವನ್ನು ಕಂಡಿದೆ. ಪ್ರತಿ ಘನ ಮೀಟರ್‌ಗೆ ಸರಾಸರಿ 50.6 ಮೈಕ್ರೋಗ್ರಾಂಗಳಷ್ಟು ಇಳಿಕೆಯಾಗಿದೆ. 2023 ರಲ್ಲಿ ಪ್ರತಿ ಘನ ಮೀಟರ್‌ಗೆ 54.4 ಮೈಕ್ರೋಗ್ರಾಂಗಳಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ವಿಶ್ವದ 10 ಅತ್ಯಂತ ಮಾಲಿನ್ಯ ನಗರಗಳ ಪೈಕಿ ಆರು ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ.

ದೆಹಲಿ ನಿರಂತರವಾಗಿ ಹೆಚ್ಚಿನ ಮಾಲಿನ್ಯ ಮಟ್ಟವನ್ನು ದಾಖಲಿಸಿದ್ದು, ವಾರ್ಷಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 91.6 ಮೈಕ್ರೋಗ್ರಾಂಗಳಷ್ಟಿದ್ದು, 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿತ್ತು.

ವಿಶ್ವದ ಅಗ್ರ 20 ಅತ್ಯಂತ ಕಲುಷಿತ ನಗರಗಳಲ್ಲಿರುವ 13 ಭಾರತೀಯ ನಗರಗಳಾಗಿದ್ದು, ಬೈರ್ನಿಹತ್, ದೆಹಲಿ, ಮುಲ್ಲನ್‌ಪುರ(ಪಂಜಾಬ್), ಫರಿದಾಬಾದ್, ಲೋನಿ, ದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ ಮಾಲಿನ್ಯಭರಿತ ನಗರಗಳಾಗಿವೆ.

ವಾಯು ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿದ್ದು, ಇದು ಅಂದಾಜು 5.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ, 2009 ರಿಂದ 2019 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಸಾವುಗಳು PM2.5 ಮಾಲಿನ್ಯದಿಂದ ಸಂಭವಿಸಿವೆ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!