spot_img
Wednesday, April 1, 2026
spot_img

ಡಾ ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು : ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ 

ಉಡುಪಿ: ಡಾ ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಉಡುಪಿ ಇಲ್ಲಿ ಕಾಲೇಜಿನ ಬೋಧಕ
ಸಿಬ್ಬಂದಿಗಳಿಗೆ ಕಾಲೇಜಿನ ಆಂತರಿಕ ಗುಣಮಟ್ಟಕೋಶದ (ಐ. ಕ್ಯೂ. ಎ. ಸಿ) ವತಿಯಿಂದ ಒಂದು ದಿನದ ಅಧ್ಯಾಪಕರ ಅಭಿವೃದ್ಧಿ
ಕಾರ್ಯಕ್ರಮವನ್ನು (ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್) ಆಯೋಜಿಸಲಾಗಿತ್ತು.

ಉಡುಪಿಯ ಖ್ಯಾತ ವಕೀಲರಾದ  ರಾಯನ್  ಫೆರ್ನಾಂಡಿಸ್  ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ  ಮಾನವನ ಬೌದ್ಧಿಕ ಆಸ್ತಿ ಹಕ್ಕುಗಳ (ಇಂಟೆಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ ) ಬಗ್ಗೆ ಉಪನ್ಯಾಸ ನೀಡಿದರು .  ಎರಡನೆಯ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸುಮುಖ್  ಹುನಗುಂದ್ ಅವರು ಅಧ್ಯಾಪಕರಿಗೆ ಸಂಶೋಧನಾ ಲೇಖನಗಳನ್ನು ಬರೆಯುವ ವಿಷಯದಲ್ಲಿ ಉಪನ್ಯಾಸ ನೀಡಿ
ಮಾರ್ಗದರ್ಶನ  ಮಾಡಿದರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಪ್ರಸಾದ್ ಕೆ.  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು.

ಕಾಲೇಜಿನ ಐ. ಕ್ಯೂ. ಎ. ಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು
ಸ್ವಾಗತಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗೌರಿ ಎಸ್. ಭಟ್, ಐಕ್ಯೂಎಸಿ
ಸಹ ಸಂಚಾಲಕರಾದ ಡಾ. ಉಮೇಶ್ ಮಯ್ಯ   ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಬಿ. ಕಾಂ. ನ ಶ್ರೀಪ್ರದಾ  ಮತ್ತು ತಂಡ
ಪ್ರಾರ್ಥಿಸಿದರು.   ವಾಣಿಜ್ಯಶಾಸ್ತ್ರ ಉಪನ್ಯಾಸಕ ಮನೋಜ್ ಹಾಗೂ ಆಂಗ್ಲ ಭಾಷಾ ಉಪನ್ಯಾಸಕಿ ರತ್ನ ಅತಿಥಿಗಳನ್ನು ಪರಿಚಯಿಸಿದರು
ಗ್ರಂಥಪಾಲಕ ಡಾ. ವೆಂಕಟೇಶ್  ಧನ್ಯವಾದ ಸಮರ್ಪಿಸಿದರು.  ಅಂತಿಮ ಬಿ.ಬಿ.ಎ ವಿದ್ಯಾರ್ಥಿನಿ ಶ್ರೀದೇವಿ ಮತ್ತು ಅಂತಿಮ ಗಣಿತಶಾಸ್ತ್ರ
ಎಂ.ಎಸ್ಸಿ ವಿದ್ಯಾರ್ಥಿನಿ ಚೈತ್ರ  ಕಾರ್ಯಕ್ರಮವನ್ನು ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!