spot_img
Monday, March 16, 2026
spot_img

ಗಂಗೊಳ್ಳಿ: ಸುವರ್ಣ ಜಟ್ಟಿಗ ಸ್ಮರಣ ಸಂಚಿಕೆ ಶೃಂಗೇರಿ ಶ್ರೀಗಳಿಂದ ಅನಾವರಣ

ಗಂಗೊಳ್ಳಿ: ಶ್ರೀ ಗ್ರಾಮಜಟ್ಟಿಗ ದೇವಸ್ಥಾನ ಮಲ್ಯರಬೆಟ್ಟು ಗಂಗೊಳ್ಳಿ, ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ (ರಿ.) ಮತ್ತು ಜಟ್ಟಿಗೇಶ್ವರ ಭಜನಾ ಮಂಡಳಿ ಇದರ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಮೂಡಿ ಬಂದ ಸುವರ್ಣ ಜಟ್ಟಿಗ ಸ್ಮರಣ ಸಂಚಿಕೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾ ಚಾರ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ತತ್ಕಾರ ಕಮಲಸಂಜಾತರಾದ ಶ್ರೀ ವಿದುಶೇಖರ ತೀರ್ಥ ಸ್ವಾಮಿಗಳವರ ಅಮೃತ ಹಸ್ತದಿಂದ ಫೆ.20 ಗುರುವಾರದಂದು ಶೃಂಗೇರಿಯ ಗುರು ಭವನದಲ್ಲಿ ಪೂರ್ವಾಹ್ನ 10 ಗಂಟೆಗೆ ಅನಾವರಣಗೊಂಡಿತು.

ತದನಂತರ ಗುರುವರ್ಯರು ಸರ್ವರಿಗೂ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ವಿಭಿನ್ನವಾಗಿ ಮೂಡಿಬಂದ ಸ್ಮರಣ ಸಂಚಿಕೆಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ಗೌರವ ಸಂಪಾದಕರಾದ ಜಿ. ಪುರುಷೋತ್ತಮ ಆರ್ಕಾಟಿ, ಸಂಪಾದಕ ರವಿಕುಮಾರ್ ಗಂಗೊಳ್ಳಿ, ಉಪಸಂಪಾದಕ ಜಿ.ಎನ್ ಸತೀಶ್ ಖಾರ್ವಿ, ಸಂಪಾದಕ ಮಂಡಳಿಯ ಸದಸ್ಯರಾದ ಜಿ. ಸೂರ್ಯಕಾಂತ ಖಾರ್ವಿ, ಜಿ.ರಾಮಪ್ಪ ಖಾರ್ವಿ, ಎಂ.ಸತೀಶ್ ಖಾರ್ವಿ, ಎಂ. ಜನಾರ್ಧನ ಖಾರ್ವಿ, ಎಂ.ನಾಗಪ್ಪಯ್ಯ ಪಟೇಲ್, ಜಿ.ಮಂಜುನಾಥ ವಿ.ಖಾರ್ವಿ, ಬಿ.ಕಾಂ ಮಂಜುನಾಥ ಖಾರ್ವಿ, ಜಿ.ಶಿವಪ್ಪ ಖಾರ್ವಿ ಹಾಗೂ ಸುವರ್ಣ ಮಹೋತ್ಸವದ ಅಧ್ಯಕ್ಷರಾದ ರಾಘವೇಂದ್ರ ಕೊಗ್ಗ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

ಮಾ.25 ರಿಂದ 27 ರ ತನಕ ಗಂಗೊಳ್ಳಿ ಶ್ರೀ ಗ್ರಾಮಜಟ್ಟಿಗ ದೇವಸ್ಥಾನ ಮಲ್ಯರಬೆಟ್ಟು ಇಲ್ಲಿ ನಡೆಯುವ ಸುವರ್ಣ ಸಂಭ್ರಮ ಕಾರ್ಯಕ್ರಮದ ಮಾಹಿತಿ ಪಡೆದ ಸ್ವಾಮಿಗಳು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವದಿಸಿದರು.

350 ವರ್ಷಗಳ ಇತಿಹಾಸವಿರುವ ಜಟ್ಟಿಗ ಸನ್ನಿಧಾನದ ವೈಭವ ಕಾರಣೀಕತೆ ಸ್ಮರಣ ಸಂಚಿಕೆಯಲ್ಲಿ ವಿಶೇಷವಾಗಿ ಮೂಡಿಬಂದಿದ್ದಲ್ಲದೇ ಕೊಂಕಣ ಖಾರ್ವಿ ಸಮಾಜ ನಡೆದುಬಂದ ಹಿನ್ನಲೆ ಗಮನ ಸೆಳೆದಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!