spot_img
Saturday, March 14, 2026
spot_img

ಹರವರಿ: ವಿವಿಧ ಸಾಧಕರಿಗೆ ಸನ್ಮಾನ

ಕುಂದಾಪುರ: ವಂಡ್ಸೆ ಹರವರಿಯ ಶ್ರೀನಿವಾಸ ನಿವಾಸದಲ್ಲಿ ಕಾಳಪ್ಪ ಗಾಣಿಗ ಅವರ ಸೇವೆಯಾಗಿ ಇತ್ತೀಚೆಗೆ ನಡೆದ ಹಾಲಾಡಿ ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಕಲಾವಿದ ಚಂದ್ರಗೌಡ ಗೋಳಿಕೆರೆ, ವಿಶ್ವನಾಥ ಆಚಾರ್ಯ ತೊಂಬಟ್ಟು, ಶಂಕರ ನಾಯ್ಕ ಉಳ್ಳೂರು, ವಿಜಯ ಗಾಣಿಗ ಬೀಜಮಕ್ಕಿ, ನಾಗರಾಜ ದೇವಾಡಿಗ ಆಲೂರು ಹಾಗೂ ಪ್ರಗತಿಪರ ಕೃಷಿಕ ಗುಂಡು ಪೂಜಾರಿ ಹರವರಿ, ಸಮಾಜಸೇವಕ ರವೀಂದ್ರ ಶೆಟ್ಟಿ, ಕಲಾವಿದ ಅಣ್ಣಪ್ಪ ಗಾಣಿಗ ಬೀಜಮಕ್ಕಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ ಬ್ಯಾಂಕ್ ನಿವೃತ್ತ ಸಿನೀಯರ್ ಮೆನೇಜರ್ ಹರವರಿ ವಾಟೆಮನೆ ಪ್ರಭಾಕರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಸಂಜೀವ ಮಡಿವಾಳ ಗುಂಡ್ಮಿ, ಕಾಳಪ್ಪ ಗಾಣಿಗ ಕುಟುಂಬಿಕರು ಉಪಸ್ಥಿತರಿದ್ದರು.

ಶಿಕ್ಷಕರಾದ ರವಿರಾಜ ಶೆಟ್ಟಿ ಚಿತ್ತೂರು ಹಾಗೂ ಉದಯಕುಮಾರ ಶೆಟ್ಟಿ ಚಿತ್ತೂರು ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಗಾಣಿಗ ಹರವರಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!