spot_img
Tuesday, March 17, 2026
spot_img

ಬಹು ಬಂಡವಾಳದ ಸೂಪರ್‌ ಮಾರ್ಕೇಟ್‌ ಗಳಿಂದ ಸ್ಥಳೀಯ ವಹಿವಾಟಿಗೆ ಹೊಡೆತ

ಬಹು ಬಂಡವಾಳಕ್ಕೆ ಅನುಕೂಲ, ಸಣ್ಣ ಬಂಡವಾಳಕ್ಕೆ ಅನಾನುಕೂಲ

ಬಹು ಬಂಡವಾಳಶಾಹಿ ಕಂಪೆನಿಗಳಿಂದ ನಡೆಯಲ್ಪಡುವ ಸೂಪರ್‌ ಮಾರ್ಕೇಟ್‌ ಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿದೆ. ಎಲ್ಲೋ ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ಯಾರೋ ಒಬ್ಬ ಬಹುಕೋಟಿ ಶ್ರೀಮಂತ ಹೂಡಿಕೆದಾರನೋರ್ವ ಮಾಡುವ ಹೋಡಿಕೆಯಡಿಯಲ್ಲಿ ನಡೆಯುವ ಈ ಸೂಪರ್‌ ಮಾರ್ಕೇಟ್‌ಗಳು ಸ್ಥಳೀಯವಾಗಿ ಇರುವ ಪ್ರಾವೀಜ್ಹನ್‌ ಸ್ಟೋರ್‌ಗಳಿಗೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಉಂಟಾಗುತ್ತದೆ.

ಈ ಸೂಪರ್ ಮಾರ್ಕೇಟ್‌ ಪರಿಕಲ್ಪನೆಯಡಿಯಲ್ಲಿ ಎಲ್ಲೂ ಒಂದೇ ಸೂರಿನಡಿಯಲ್ಲಿ ಜನರಿಗೆ ಸುಲಭವಾಗಿ, ಕಡಿಮೆ ದರದಲ್ಲಿ ಸಿಗಬಹುದು, ಆದರೇ, ಇದರ ಪರಿಣಾಮ ಊಹಿಸಿಕೊಂಡರೇ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಬಹುಕೋಟಿ ಕಂಪೆನಿಗಳ ನಡೆಸುವ ಸೂಪರ್‌ ಮಾರ್ಕೇಟ್‌ಗಳಿಂದ ಇಲ್ಲಿ ಸ್ಥಳೀಯವಾಗಿ ನಡೆಯುವ ಸಣ್ಣ ಪುಟ್ಟ ಸೂಪರ್‌ ಮಾರ್ಕೇಟ್‌ಗಳಿಗೂ ಅನಾನುಕೂಲವೇ ಆಗಿದೆ. ಸ್ಥಳೀಯ ಆರ್ಥಕತೆಗೂ ಇದು ದೊಡ್ಡ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ವಿದೇಶಿ ಪರಿಕಲ್ಪನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಬಹುಕೋಟಿ ಬಂಡವಾಳವಿರುವ ಕಂಪೆನಿಗಳಡಿಯಲ್ಲಿ ನಡೆಯುವ ಸೂಪರ್‌ ಮಾರ್ಕೇಟ್‌ಗಳು ಸ್ಥಳೀಐ ಆರ್ಥಿಕತೆಗೆ ದೊಡ್ಡ ಹೊಡೆತ ಎನ್ನುವುದರಲ್ಲಿ ಸಂಶಯವಿಲ್ಲ. ಹಂಚಿ ಹೋಗುವ ಆರ್ಥಿಕ ವ್ಯವಸ್ಥೆ, ಈ ಕಲ್ಪನೆಯಡಿಯಲ್ಲಿ ಒಬ್ಬ ಹೂಡಿಕೆದಾರನ ಪಾಲಾಗುತ್ತದೆ. ದೊಡ್ಡ ಮಟ್ಟದಲ್ಲಿ ವಹುವಾಟು ಇಲ್ಲಿ ಆಗುವುದರಿಂದ ಬಹುಕೋಟಿ ಮಾಲೀಕರು ಹೆಚ್ಚಿನ ಲಾಭ ಗಳಿಸುತ್ತಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಇದರಿಂದ ನಷ್ಟ ಅನುಭವಿಸುತ್ತಾರೆ.

ಬಹು ಬಂಡವಾಳ ಎಂದರೇ ಕೇವಲ ಬಹುಕೋಟಿ ಹೂಡಿಕೆಯ ನೆರವು ಎಂದರೇ ಅದು ತಪ್ಪಾಗುತ್ತದೆ. ಇದು ಬಹುಕೋಟಿ ಬಂಡವಾಳದ ಹೆಸರಿನಲ್ಲಿ ಏಕಸ್ವಾಮ್ಯದ ಧೋರಣೆ. ಆರ್ಥಿಕಾಭಿವೃದ್ಧಿಗೆ ದೊಡ್ಡ ಬಂಡವಾಳವನ್ನು ಮಾಡುವ ಪರಿಪಾಠ ಹಾಗೂ ಆ ಮೂಲಕ ವಹಿವಾಟುಗಳಲ್ಲಿ ಲಾಭ ಗಳಿಕೆಯ ಉದ್ದೇಶದಿಂದ ಬಳಸುವ ಕಾರ್ಯತಂತ್ರವೂ ಹೊಸತಲ್ಲ. ವಿದೇಶಗಳಲ್ಲಿ ಈ ಪರಿಕಲ್ಪನೆ ಬಂದು ಕೆಲವು ದಶಕಗಳೇ ಆಗಿವೆ. ಭಾರತದ ಮಹಾ ನಗರಗಳಿಗೆ ಕಾಲಿಟ್ಟೂ ಕೆಲವು ದಶಕಗಳೇ ಕಳೆದಿವೆ. ಆದರೇ, ಈ ಪರಿಕಲ್ಪನೆ ಈಗ ಸಣ್ಣ ಪುಟ್ಟ ಪಟ್ಟಣಗಳಿಗೂ ಕಾಲಿಡುವ ಮೂಲಕ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದು ಸ್ಥಳೀಯ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುತ್ತದೆ.

ಈ ಬಹು ಬಂಡವಾಳದಲ್ಲಿ ನಡೆಯುವ ಸೂಪರ್‌ ಮಾರ್ಕೇಟ್‌ಗಳು ನೇರ ಹೂಟೆಯೆಂದರೇ, ಬೇರೆ ಬೇರೆ ಕಡೆಗಳಲ್ಲಿ ಶಾಖೆಗಳನ್ನು ತೆರೆದು ಸಂಪೂರ್ಣ ಪ್ರಾವಿಜ್ಹನರಿ ಅಗತ್ಯ ವಸ್ತುಗಳನ್ನು ಹತೋಟಿಗೆ ತೆಗೆದುಕೊಳ್ಳುವುದಾಗಿದೆ. ಚೌಕಾಶಿಗೆ ಅವಕಾಶ ಮಾಡಿಕೊಡದೆ. ಕಡಿಮೆ ಬೆಲೆಯಲ್ಲಿ ವ್ಯಾಪಾರ ವಹಿವಾಟು ನಡೆಸಿ, ಹೆಚ್ಚಿನ ಲಾಭ ಗಳಿಸುವುದು. ಗ್ರಾಹಕನಿಗೆ ಇದು ಅಗ್ಗಕ್ಕೆ ಎಲ್ಲವೂ ದೊರೆಯುತ್ತದೆ ಎಂದನ್ನಿಸಿದರೂ, ಒಂದು ಕೊಳ್ಳುವಲ್ಲಿ, ನಾಲ್ಕು ಕೊಳ್ಳಲು ಗ್ರಾಹಕ ಮುಂದಾಗುತ್ತಾನೆ. ಗ್ರಾಹಕನ ಜೇಬು ಖಾಲಿ ಮಾಡಿ ಕಳುಹಿಸಿ, ಸಂಪೂರ್ಣ ಲಾಭವನ್ನು ಒಬ್ಬ ಹೂಡಿಕೆದಾರ ಎಣಿಸುತ್ತಾನೆ. ದೊಡ್ಡ ಬಂಡವಾಳ ಇಂದು ಎಲ್ಲಾ ಕ್ಷೇತ್ರವನ್ನು ವ್ಯಾಪಿಸಿದೆ.

ಈ ರೀತಿಯ ವ್ಯಾಪಾರ ವಹಿವಾಟಿನಿಂದ ಅಸಮತೋಲ ಅಭಿವೃದ್ಧಿಗೆ ದಾರಿಯಾಗುತ್ತದೆ. ಸಂಪನ್ಮೂಲ ಹಾಗೂ ಮಾರುಕಟ್ಟೆಯ ವ್ಯಾಪಕ ಶೋಷಣೆಗೆ ನೇರ ಕಾರಣವಾಗುತ್ತದೆ, ಏಕಸ್ವಾಮ್ಯದ ಬೆಳವಣಿಗೆ ಹೆಚ್ಚಳವಾಗುತ್ತದೆ, ಭ್ರಷ್ಟಾಚಾರ, ದುಬಾರಿ ಸೌಕರ್ಯ ನಿರ್ವಹಣಾ ವೆಚ್ಚ ಇವೆಲ್ಲವೂ ಸಣ್ಣ ಆರ್ಥಿಕತೆಯ ಮೇಲೆ ವ್ಯತಿರಿಕ್ತವಾಗಿ ನೇರ ಪರಿಣಾಮ ಬೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಂತಹ ವ್ಯವಸ್ಥೆಯಿಂದ ಸ್ಥಳೀಯ ಆರ್ಥಿಕತೆಯ ಮೇಲೆ ನೇರ ಶೋಷಣೆ ಉಂಟಾಗುತ್ತದೆ.

ಸ್ಥಳೀಯ ವಹಿವಾಟು ಸ್ಥಳೀಯವಾಗಿಯೇ ನಡೆಯಬೇಕು. ಕೊನೆಯಪಕ್ಷ ಈ ವ್ಯವಸ್ಥೆ ಸಣ್ಣ ಪಟ್ಣಣ ಪ್ರದೇಶಗಳಲ್ಲಿಯಾದರೂ ಉಳಿಯಬೇಕು. ಹಾಗಿದ್ದಾಗ ಸ್ಥಳೀಯ ಆರ್ಥಿಕತೆ ಸಮತೋಲನ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬಹು ಬಂಡವಾಳದ ಸೂಪರ್‌ ಮಾರ್ಕೇಟ್ ಪರಿಕಲ್ಪನೆ ಕಾರಣದಿಂದ ಸ್ಥಳೀಯ ವ್ಯಾಪಾರ ವಹಿವಾಟು ಕ್ಷೇತ್ರ ಉಪೇಕ್ಷೆಗೊಳಗಾಗಬಹುದು. ಹಾಗಾಗಿ ಈ ಪರಿಕಲ್ಪನೆ ಗ್ರಾಹಕರಿಗೆ ಅನುಕೂಲ ಅನ್ನಿಸಿದರೂ, ಸಣ್ಣ ವಹಿವಾಟು ವ್ಯಾಪಾರಿಗಳಿಗೆ ಅನಾನುಕೂಲವೇ ಹೆಚ್ಚು. ಆದರೇ, ಇವೆಲ್ಲವೂ ಸಂದರ್ಭ, ಕಾಲ, ಸನ್ನಿವೇಶ, ಪ್ರದೇಶಗಳಿಗಳಿಂದ ನಿರ್ಧರಿಸಲ್ಪಡುತ್ತದೆ ಎಂದೇ ಹೇಳಬಹುದು.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!