spot_img
Wednesday, April 1, 2026
spot_img

‘ಇಂಡಿಯಾ’ ಮೈತ್ರಿಕೂಟದಿಂದ ಇದೀಗ ಕಾಂಗ್ರೆಸ್‌ ಪಕ್ಷವನ್ನೇ ಹೊರಹಾಕಲಾಗಿದೆ : ರಾಜ್ಯ ಬಿಜೆಪಿ ಟೀಕೆ

ಜನಪ್ರತಿನಿಧಿ (ಬೆಂಗಳೂರು ) : ‘ಇಂಡಿಯಾ’ ಎಂಬ ಹೆಸರಿನಲ್ಲಿ ಕಾಂಗ್ರೆಸ್‌ ರಚಿಸಿದ್ದ ಮೈತ್ರಿಕೂಟದಿಂದ ಇದೀಗ ಕಾಂಗ್ರೆಸ್‌ ಪಕ್ಷವನ್ನೇ ಹೊರಹಾಕಲಾಗಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಕಟ್ಟಿದ ಗೂಡಿನಿಂದ ಕಾಂಗ್ರೆಸ್ ಪಕ್ಷವೇ ಹೊರಬಿದ್ದಿದೆ. ದೆಹಲಿ ಅಸೆಂಬ್ಲಿ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಕ್ಷರಶಃ ಅಂತಿಮಯಾತ್ರೆ ಎಂಬಂತಾಗಿದೆ. ಕಾಂಗ್ರೆಸ್‌ ಸಹವರ್ತಿ ಪಕ್ಷಗಳು ಸೇರಿಕೊಂಡು ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮುಹೂರ್ತ ಫಿಕ್ಸ್‌ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.

ಇಂಡಿ ಕೂಟದೊಳಗಿನ ಕಲಹವನ್ನು ಉಲ್ಲೇಖಿಸಿ ಒಕ್ಕೂಟದ ಪ್ರಮುಖ ನಾಯಕ ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರು ಇಂಡಿಯಾ ಒಕ್ಕೂಟವನ್ನೇ ಬರ್ಖಾಸ್ತು ಮಾಡುವಂತೆ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ ರಾಜ್ಯ ಬಿಜೆಪಿ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ನಾಯಕತ್ವವನ್ನೇ ಇಂಡಿ ಒಕ್ಕೂಟದ ಮಿತ್ರ ಪಕ್ಷಗಳು ಟೀಕಿಸುತ್ತಿವೆ ಎಂದು ಹೇಳಿದೆ.

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿರುವುದು ಕಾಂಗ್ರೆಸ್ ವಿರುದ್ಧ ದೇಶದಾದ್ಯಂತ ಎದ್ದಿರುವ ಆಕ್ರೋಶದ ಅಲೆಗಳಿಗೆ ಸಾಕ್ಷಿಯಾಗಿದೆ.  ಕಾಂಗ್ರೆಸ್‌ ಚಿಂತನೆಗಳು ಈ ದೇಶಕ್ಕೆ ಮಾರಕ ಎಂಬುದನ್ನು ಕಾಂಗ್ರೆಸ್‌ ಸಹವರ್ತಿಗಳೇ ಅರಿತುಕೊಂಡಿದ್ದಾರೆ ಎಂದು ಅದು ಹೇಳಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!