spot_img
Sunday, February 15, 2026
spot_img

ಕೋಡಿ ಶ್ರೀ ಚಕ್ರಮ್ಮ ದೇವಸ್ಥಾನದ ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ ಶ್ರೀ ಚಕ್ರಮ್ಮ ಸಭಾಭವನ ಸಮಿತಿ, ಕೋಡಿ ಇದರ ಶ್ರೀ ಚಕ್ರಮ್ಮ ಸಭಾಭವನ ನಿರ್ಮಾಣಗೊಂಡಿದ್ದು ಫೆ.5ರಂದು ಬುಧವಾರ ಉದ್ಘಾಟನೆಗೊಳ್ಳಲಿದೆ. ಶ್ರೀ ಚಕ್ರಮ ಸಭಾಭವನ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು (ಜ.10ರಂದು) ದೇವಳದಲ್ಲಿ ನಡೆಯಿತು.
ಚಕ್ರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಗೋಪಾಲ ಪೂಜಾರಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಭಾಭವನ ಕಟ್ಟಡ ಸುಮಾರು ವರ್ಷಗಳ ಕನಸಾಗಿತ್ತು. ಅದನ್ನು ಮಾಧವ ಪೂಜಾರಿಯವರ ದಿವ್ಯ ಹಸ್ತದಿಂದ ಶಿಲಾನ್ಯಾಸಗೊಂಡಿತು. ಕೋರೋನಾದಿಂದ ಕಟ್ಟಡ ನಿರ್ಮಾಣ ಸ್ಪಲ್ಪ ವಿಳಂಭವಾಯಿತು. ಇದೀಗ ಬಹುದಿನಗಳ ಕನಸು ನನಸಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಭಾಭವನದ ಅಧ್ಯಕ್ಷರಾದ ಶಂಕರ ಪೂಜಾರಿ, ಪಾತ್ರಿಗಳಾದ ರಾಘವೇಂದ್ರ ಸಿ. ಪೂಜಾರಿ, ದೇವಸ್ಥಾನದ ಮಂಡಳಿಯ ಟ್ರಸ್ಟ್ ಸದಸ್ಯರುಗಳಾದ ತಿಮ್ಮಪ್ಪ ಖಾರ್ವಿ, ನಾಗೇಶ ಎಚ್ ಪುತ್ರನ್, ಲಕ್ಷ್ಮೀ ಬಾಯಿ, ಸಂಜೀವ ಆರ್ ಪೂಜಾರಿ, ಪ್ರಭಾಕರ, ಪ್ರಕಾಶ ಆಂಚನ್, ಗಂಗಾಧರ ಜಿ ಪೂಜಾರಿಯವರು ಉಪಸ್ಥಿತರಿದ್ದರು.
ನಾರಾಯಣ ಪೂಜಾರಿ, ಪಾಂಡುರಂಗ ಖಾರ್ವಿ, ವಿಠಲ ಎ ಪೂಜಾರಿ, ಜಯಪ್ರಕಾಶ ನಾಗರಾಜ ಕಾಂಚನ್, ಶಂಕರ ಕೆ ಪೂಜಾರಿ ಮಾರಿಪೂಜಾರಿಮನೆ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಸಭಾಭವನದ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!