spot_img
Monday, March 16, 2026
spot_img

ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಚೀನಾದ ಸರಕುಗಳನ್ನು ನಿಲ್ಲಿಸುವ ಧೈರ್ಯವಿಲ್ಲವೇ ? : ಕಾಂಗ್ರೆಸ್‌

ಜನಪ್ರತಿನಿಧಿ (ಬೆಂಗಳೂರು/ ನವ ದೆಹಲಿ) : ಒಂದು ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಯವರಿಗೆ ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ?! ಎಂದು ರಾಜ್ಯ ಕಾಂಗ್ರೆಸ್‌ ಖಡಕ್‌ ಆಗಿ ಪ್ರಶ್ನಿಸಿದೆ.

ಕೇವಲ ಟಿಕ್ ಟಾಕ್, ಶೇರ್ ಚಾಟ್ ನಂತಹ 59 ಚೀನಿ ಆಪ್‌ಗಳನ್ನು ಬ್ಯಾನ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ ಪ್ರಧಾನಿ ಮೋದಿಯವರು, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವುದಕ್ಕೆ ಮಾತ್ರ ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದೆ.

2013 – 14ರ UPA ಸರ್ಕಾರದ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ  $51.34 ಬಿಲಿಯನ್ ಮೌಲ್ಯದಷ್ಟು ಸರಕುಗಳು ಆಮದಾಗಿತ್ತು. ಆದರೆ 2023 – 24 ರ ಮೋದಿ ಸರ್ಕಾರದಲ್ಲಿ $101.7 ಬಿಲಿಯನ್ ಮೌಲ್ಯದಷ್ಟು ಸರಕುಗಳು ಆಮದಾಗಿವೆ. ಕೇವಲ 10 ವರ್ಷಗಳಲ್ಲಿ ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೌಲ್ಯ 100% ಹೆಚ್ಚಾಗಿದೆ!

ಚೀನಾದಿಂದ ಆಮದಾಗುತ್ತಿರುವ ಸರಕುಗಳಿಂದ ಚನ್ನಪಟ್ಟಣದ ಬೊಂಬೆ ತಯಾರಿಸುವಂತಹ ಗುಡಿ ಕೈಗಾರಿಕೆಗಳು, ಸ್ವದೇಶಿ ಉತ್ಪಾದನಾ ವಲಯಕ್ಕೆ ಹೊಡೆತ ಬಿದ್ದಿದ್ದಲ್ಲದೇ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳು ಹಾಗೂ ಅನೇಕ ಕಾರ್ಖಾನೆಗಳಿಗೆ ಬೀಗ ಬೀಳುವಂತಾಗಿದೆ ಎಂದು ದೂರಿದೆ.

ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಚೀನಾದ ಸರಕುಗಳನ್ನು ನಿಲ್ಲಿಸುವ ಧೈರ್ಯವಿಲ್ಲವೇ ? : ಕಾಂಗ್ರೆಸ್‌

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!