spot_img
Monday, March 16, 2026
spot_img

ಗಂಗೊಳ್ಳಿ ಜನರ ವಿಶ್ವಾಸ ಉಳಿಸಿಕೊಳ್ಳುತ್ತೇವೆ | ಕಲ್ಲು ಗಣಿಗಾರಿಕೆ ಪುನರಾರಂಭಕ್ಕೆ ಸಿಎಂ ಸಹಿಯೊಂದೇ ಬಾಕಿ : ಗೋಪಾಲ ಪೂಜಾರಿ

ಜನಪ್ರತಿನಿಧಿ (ಕುಂದಾಪುರ) : ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆ ಪುನರಾರಂಭಿಸುವುದಕ್ಕೆ ಗಣಿ, ಕನಿಜ ಇಲಾಖೆಯ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಜಯಪ್ರಕಾಶ್‌ ಹೆಗ್ಡೆ ಹಾಗೂ ತಾವು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇವೆ. ನಿನ್ನೆ(ಶುಕ್ರವಾರ) ರಾತ್ರಿ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಪ್ರಸ್ತಾಪವಿಟ್ಟಿದ್ದು, ಸಂಪುಟ ಸಭೆಯಲ್ಲಿ ಎನ್‌ಐಟಿಕೆ ವರದಿಯ ಆಧಾರದಲ್ಲಿ ಅನುಮತಿಸುವುದಕ್ಕೆ ತೀರ್ಮಾನ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಅಂಕಿತ ಬಾಕಿ ಇದೆ. ಮುಖ್ಯಮಂತ್ರಿಗಳು ಇಂದು ಅಥವಾ ನಾಳೆ ಅಂಕಿತ ಹಾಕಿದ ಮೇಲೆ ಡಿಸಿ ಹಾಗೂ ಎಸ್‌ಪಿ ಗಮನಕ್ಕೆ ತರುವುದರ ಮೂಲಕ ಪುರರಾಂಭಿಸುವುದಕ್ಕೆ ಅನುಮತಿಸಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೂಜಾರಿ, ಅಕ್ರಮ ಮರಳುಗಾರಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಒಳ ಒಪ್ಪಂದದ ಬಗ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಒಳ ಒಪ್ಪಂದದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಎಲ್ಲವೂ ಸ್ಥಗಿತಗೊಂಡಿವೆ. ಈ ಸಂಬಂಧಿಸಿದ ಎಲ್ಲಾ ತಿದ್ದುಪಡಿಗಳಿಗೆ ಡಿಸಿ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಾನೂನು ಇಲಾಖೆಯ ಸಚಿವರು, ಹಾಗೂ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಕೂಡ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ಮುಖ್ಯಮಂತ್ರಿಗಳ ಸಹಿ ಆದ ಬಳಿಕ ಪುನರಾಂಭಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಂಗೊಳ್ಳಿ ಪಂಚಾಯತ್‌ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸುಮಾರು ಮೂರು ದಶಕಗಳ ಕಾಲ ಗಂಗೊಳ್ಳಿ ಪಂಚಾಯಿತಿಯಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಬೆಂಬಲಿತರ ಸುದೀರ್ಘ ಅವಧಿಯ ಆಳ್ವಿಕೆಯನ್ನು ಕೊನೆಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಒಲಿದಿದ್ದಾರೆ. ಈ ಬಗ್ಗೆ ಅತೀವ ಸಂತೋಷವಿದೆ. ನಮ್ಮ ಮೈತ್ರಿ ಸರ್ಕಾರದ ಬೋರ್ಡ್‌ ರಚನೆಯಾಗುತ್ತದೆ. ಗಂಗೊಳ್ಳಿಯಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತವೆ ಎಂದರು.

ರಾಜ್ಯದ ಪ್ರಮುಖ ಬಂದರು ನಗರಿಗಳಲ್ಲಿ ಒಂದಾಗಿರುವ ಗಂಗೊಳ್ಳಿಯ ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿದ್ದರಿಂದ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಕಳೆದ ವರ್ಷಗಳಲ್ಲಿ ನಡೆಯದೆ ಇದ್ದುದರಿಂದ ಗಂಗೊಳ್ಳಿ ಪ್ರಬುದ್ಧ ಮತದಾರರು, ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಕಾಂಗ್ರೆಸ್ ಪರವಾದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಗೆಲ್ಲಿದ್ದಾರೆ. ಗಂಗೊಳ್ಳಿ ವಿಚಾರದಲ್ಲಿ ಬಿಜೆಪಿ ತೋರಿದ ನಿಲಕ್ಷ್ಯವನ್ನು ಕಾಂಗ್ರೆಸ್‌ ಖಂಡಿತ ಮಾಡುವುದಿಲ್ಲ. ಬಂದರು ಸಮಸ್ಯೆ ಹಾಗೂ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಗಂಗೊಳ್ಳಿಯಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದ ಕೆಲವರನ್ನು ಪಕ್ಷದಿಂದ ದೂರವಟ್ಟು ಸಂಘಟನಾತ್ಮಕ ಕೆಲಸ ಮಾಡಿದ್ದೇವೆ. ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟು ಮತ ಹಾಕಿದ್ದಾರೆ. ಜನರ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದರು.

ಗಂಗೊಳ್ಳಿ ಮಾದರಿಯಲ್ಲೇ ತಾಲೂಕಿನ ಎಲ್ಲಾ ಪಂಚಾಯತ್‌ಗಳಲ್ಲಿಯೂ ತಯಾರುಗುತ್ತೇವೆ. ಯುವಕರಿಗೆ ಹೆಚ್ಚಿನ ಅವಕಾಶ ನೀಡುತ್ತೇನೆ. ಎಲ್ಲಾ ಪಂಚಾಯತ್‌ಗಳಲ್ಲೂ ಕಾಂಗ್ರೆಸ್‌ ಸದೃಢಗೊಳಿಸುವ ಎಲ್ಲಾ ಥರದ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಸ್ತಾಪಿಸಿರುವ ಅವರು, ನಾನು ಪಕ್ಷದಲ್ಲಿ ಸೀನಿಯರ್ ಮೋಸ್ಟ್‌ ಲೀಡರ್‌, ನಾಲ್ಕು ಬಾರಿ ಕ್ಷೇತ್ರದಲ್ಲಿ ಎಂಎಲ್‌ಎ ಆಗಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ಡಿಕೆಶಿ ಅವರು ಪಾರ್ಟಿ ಅಧಿಕಾರಕ್ಕೆ ಬಂದರೇ, ಕೊಲ್ಲೂರು ವ್ಯವಸ್ಥಾಪನ ಸಮಿತಿಯಲ್ಲಿ ನಿಮ್ಮ ಶಿಫಾರಸ್ಸಿಗೆ ಅವಕಾಶ ಕೊಡ್ತೇನೆ ಎಂದು ಹೇಳಿದ್ದರು. ಪಾರ್ಟಿ ಅಧಿಕಾರಕ್ಕೆ ಬಂದಿದೆ. ಡಿಕೆಶಿ ಅವರೂ ಮಾತು ಉಳಿಸಿಕೊಂಡಿದ್ದಾರೆ, ನಾನೂ ಮಾತು ಉಳಿಸಿಕೊಂಡಿದ್ದೇನೆ. ಸಮಿತಿ ರಚನೆ ಆಗಿದೆ. ಸದ್ಯಕ್ಕೆ ತಡೆಹಿಡಿಯಲಾಗಿದೆ. ಈ ಬಗ್ಗೆಯೂ ಡಿಸಿ ಅವರಿಗೆ ಪತ್ರ ನೀಡಿದ್ದೇವೆ ಎಂದರು.

ಸುಕುಮಾರ ಶೆಟ್ಟಿ ಅವರಿಗೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿಯಲ್ಲಿ ಸಿಗುತ್ತಿದ್ದ ಅವಕಾಶವನ್ನು ಗೋಪಾಲ ಪೂಜಾರಿ ಅವರೇ ತಪ್ಪಿಸಿದ್ದು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಡಿಕೆಶಿ ಅವರು ಸುಕುಮಾರ ಶೆಟ್ಟಿ ಅವರಲ್ಲಿ ಖುದ್ದಾಗಿ ಕೊಲ್ಲೂರು ದೇವಸ್ಥಾನದ ವಿಚಾರದಲ್ಲಿ ಮಾತನಾಡಿದ್ದಾರೆ. ಕೊಲ್ಲೂರಿಗೋಸ್ಕರ ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಡಿಕೆಶಿ ಸುಕುಮಾರ ಶೆಟ್ಟಿ ಅವರಿಗೆ ಹೇಳಿದ್ದಾರೆ. ಸುಕುಮಾರ ಶೆಟ್ಟಿ ಅವರೂ ಅದಕ್ಕೆ ಒಪ್ಪಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಬಳಿಕೆ ಕೆಲವರ ಒತ್ತಡದಿಂದ ಕೊಲ್ಲೂರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರಬಹುದು. ಅವರೂ ಸೀನಿಯರ್‌ ಕೇಳುವ ಅವಕಾಶವಿದೆ. ತಪ್ಪಲ್ಲ. ಆದರೇ, ಆಗಿಲ್ಲ. ಸರ್ಕಾರದ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!