spot_img
Thursday, December 12, 2024
spot_img

ಸೀತೆ ಪಾತ್ರಕ್ಕಾಗಿ ಸಸ್ಯಾಹಾರ ! : ವದಂತಿಗೆ ಸಿಟ್ಟಾದ ನಟಿ ಸಾಯಿ ಪಲ್ಲವಿ | ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ : ಎಚ್ಚರಿಕೆ !

ಜನಪ್ರತಿನಿಧಿ (ಚೆನ್ನೈ) : ʼರಾಮಾಯಣʼ ಚಲನಚಿತ್ರದಲ್ಲಿ ಸೀತೆಯ ಪಾತ್ರ ನಿಭಾಯಿಸುತ್ತಿರುವ ಖ್ಯಾತ ನಟಿ ಸಾಯಿ ಪಲ್ಲವಿ, ಪೌರಾಣಿಕ ಪಾತ್ರ ನಿರ್ವಹಿಸುತ್ತಿರುವುದರಿಂದ ಸಸ್ಯಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಈ ವದಂತಿಗೆ ಆಕ್ರೋಶ ಹೊರಹಾಕಿರುವ ನಟಿ ಸಾಯಿ ಪಲ್ಲವಿ, ʼಅನಗತ್ಯ ಸುಳ್ಳುಗಳನ್ನು ಹಬ್ಬಿಸಿದರೇ ಕಾನೂನಿನ ಮೂಲಕ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಟಿ ಸಾಯಿ ಪಲ್ಲವಿ ಈ ಹಿಂದೆ ನೀಡಿರುವ ಸಂದರ್ಶನವೊಂರಲ್ಲಿ ʼನಾನೆಂದಿಗೂ ಸಸ್ಯಹಾರಿಯೇ, ಯಾವ ಪ್ರಾಣಿಗಳನ್ನೂ ಹತ್ಯೆ ಮಾಡಲು ಬಯಸುವುದಿಲ್ಲ ಎಂದು ತಮ್ಮ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು. ಅದು ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಹೀಗಿದ್ದಾಗ ಸುದ್ದಿಸಂಸ್ಥೆಯೊಂದು ಸಾಯಿ ಪಲ್ಲವಿ ಅವರು ʼರಾಮಾಯಣʼ ಚಿತ್ರದ ಸೀತೆ ಪಾತ್ರಕ್ಕಾಗಿ ಮಾಂಸಾಹಾರ ತ್ಯಜಿಸಿ ಸಸ್ಯಾಹಾರ ಸೇವನೆ ಮಾಡುತ್ತಿದ್ದಾರೆ, ಚಿತ್ರೀಕರಣಕ್ಕೆ ತೆರಳುವ ಸಂದರ್ಭದಲ್ಲಿ ಅಡುಗೆಯವರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ ಎಂದು ವರದಿ ಮಾಡಿತ್ತು ಎಂದು ಹೇಳಿತ್ತು.

ಈ ವರದಿಯ ವಿರುದ್ಧ ಕಿಡಿಕಾರಿರುವ ನಟಿ ಸಾಯಿ ಪಲ್ಲವಿ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್‌ ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡು ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ನೀಡಿದ್ದಾರೆ.

ಸುಮಾರಷ್ಟು ಬಾರಿ ನನ್ನ ವಿರುದ್ಧ ಹಬ್ಬಿಸಿರುವ ವದಂತಿಗಳಿಗೆ ನಾನು ಪ್ರತಿಕ್ರಿಯಿಸದೆ ಮೌನವಾಗಿರುತ್ತೇನೆ. ಆದರೇ ಈ ಬಾರಿ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ. ನನ್ನ ಚಲನಚಿತ್ರ ಬಿಡಿಗಡೆ, ಜಾಹೀರಾತುಗಳು, ವೃತ್ತಿಗೆ ಸೇರಿದ ಚಿಚಾರದಲ್ಲಿ ಯಾವುದೇ ಆಧಾರರಹಿತ ಸುದ್ದಿಗಳನ್ನು ಹಬ್ಬಿಸಿದರೆ, ಜನಪ್ರಿಯ ಮಾಧ್ಯಮ ಕಂಪೆನಿ ಅಥವಾ ವ್ಯಕ್ತಿ ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

Most of the times, Almost every-time, I choose to stay silent whenever I see baseless rumors’ : Sai Pallavi

I’m FOREVER VEGETARIAN, i can’t see if any life dies (She’s full Vegetarian since her childhood) : Sai Pallavi

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!