spot_img
Thursday, December 12, 2024
spot_img

ರಾಷ್ಟ್ರ ರಾಜಧಾನಿಯಲ್ಲಿ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ !

ಜನಪ್ರತಿನಿಧಿ (ನವ ದೆಹಲಿ) : ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ತೀವ್ರ ಚಳಿಯಿಂದ ರಾಜಧಾನಿ ಮಂದಿ ತತ್ತರಿಸಿದ್ದಾರೆ.

ಅಯನಗರ ಹಾಗೂ ಪುಸ ಪ್ರದೇಶದಲ್ಲಿ ಶೀತಗಾಳಿ ಇದ್ದು ಅಲ್ಲಿ ತಾಪಮಾನ ಕ್ರಮವಾಗಿ 3.8 ಹಾಗೂ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇದು ಈ ಋತುವಿನಲ್ಲಿ ದಾಖಲಾದ ಕನಿಷ್ಠ ತಾಪಮಾನ.

ನಿನ್ನೆ(ಬುಧವಾರ) ದೆಹಲಿಯ ಕನಿಷ್ಠ ತಾಪಮಾನ 4.9 ಡಿಗ್ರಿ ಸೆಲ್ಸಿಯಸ್ ಇತ್ತು. ಡಿಸೆಂಬ‌ರ್ ಆರಂಭದಲ್ಲಿ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು 14 ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಭಾರತೀಯ ಹವಾಮಾನ ಕೇಂದ್ರ ತಿಳಿಸಿದೆ.

ದತ್ತಾಂಶಗಳ ಪ್ರಕಾರ 1987 ಡಿಸೆಂಬರ್ 6 ರಂದು 4.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈವರೆಗಿನ ಕನಿಷ್ಠ.

ಬಿಸಿಲು ಏರುತ್ತಿದ್ದಂತೆಯೇ ತಿಳಿಯಾಕಾಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಗರಿಷ್ಠ ತಾಪಮಾನ 23 ಡಿಗ್ರಿ ಇರಬಹುದು ಎಂದು ಅಂದಾಜು ಮಾಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!