spot_img
Thursday, December 26, 2024
spot_img

“ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಉಳ್ಳೂರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆಯ “ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಉಳ್ಳೂರ ಅವರಿಗೆ ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ “ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ” ಕೊಯಂಬತ್ತೂರು, “ಟ್ರೆಡಿಷನಲ್ ಹೀಲಿಂಗ್ ಆಂಡ್ ಸ್ಪೀರೀಚುಯಲಿಟಿ” ಯಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರಾಘವೇಂದ್ರ ಉಳ್ಳೂರ ಅವರು ಹಲವು ವರುಷಗಳಿಂದ ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆಯ “ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸಿ, ಆಧ್ಯಾತ್ಮದ ಸಲಹೆಗಾರರಾಗಿ, ಆಧ್ಯಾತ್ಮದ ಸಮಸ್ಯೆಗಳನ್ನು ಪರಿಹರಿಸಿ, ಆಧ್ಯಾತ್ಮದ ತರಗತಿಗಳನ್ನು ಪ್ರಾರಂಭಿಸಿ ಸಮಾಜದ ಪ್ರತಿಯೊಬ್ಬರೂ ಸಂಸ್ಕಾರಯುತ ಗೌರವದ ಜೀವನ ನಡೆಸುವ ಬಗ್ಗೆ ಅಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ ಸಲಹೆ ಕೊಡುತ್ತಾ, ತಾಂತ್ರಿಕ ಕ್ರಮದಲ್ಲಿ ಪರಿಹಾರ ಸೂಚಿಸುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ನವೆಂಬರ್ ೩೦, ೨೦೨೪ ರಂದು ತಮಿಳುನಾಡು ಹೊಸೂರಿನ ಹೋಟೆಲ್ ಐಟಿಸಿ ಫಾರ್ಚೂನ್, ನಲ್ಲಿ ನೆಡೆದ ಘಟಿಕೋತ್ಸವದಲ್ಲಿ ಆಧ್ಯಾತ್ಮ ಕ್ಷೇತ್ರದ ಸಾಧನೆಗಾಗಿ “ಪಾರಂಪರಿಕ ಚಿಕಿತ್ಸೆಗಳು ಮತ್ತು ಆಧ್ಯಾತ್ಮ ಶಾಸ್ತ್ರ”ದಲ್ಲಿನ ಅಪಾರ ಅನುಭವವನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!