spot_img
Thursday, December 5, 2024
spot_img

ಹೂವಿನ ಮನಸ್ಸಿನ ಹೂವಿನ ವ್ಯಾಪಾರಿಗಳ ಸಂಘಟನೆಯಿಂದ ಸಮಾಜಮುಖಿ ಕಾರ್ಯಕ್ರಮ-ಡಾ ನಾಗೇಶ್

ಕುಂದಾಪುರ: ಸಂಘಟನೆಗಳು ಜನರಿಗೆ ಬೇಕಾದ ಮನೋರಂಜನೆ ಒದಗಿಸುವ ಜೊತೆಗೆ ಸಮಾಜಮುಖಿ ಕಾರ್ಯಕ್ರಮ ಹೇಗೆ ಮಾಡಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಹೂವಿನ ವ್ಯಾಪಾರಿಗಳ ಸಂಘ ಮಾಡಿದೆ. ಇಂದು ಅಶಕ್ತರಿಗೆ ವ್ಹಿಲ್ ಚೇರ್ ಹಾಗೂ ಕ್ಯಾನ್ಸರ್ ಪೀಡಿತರಿಗೆ ಸಹಾಯ ಹಸ್ತ ಚಾಚುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿದ ಎಲ್ಲರೂ ಅಭಿನಂದನಾರ್ಹರು ಎಂದು ರಾಜ್ಯ ಸರಕಾರಿ ಸಂಘದ ಕುಂದಾಪುರ ತಾಲ್ಲೂಕು ಅಧ್ಯಕ್ಷರಾದ ಕುಂದಾಪುರ ಸರಕಾರಿ ಆಸ್ಪತ್ರೆ ಪ್ರಮುಖ ವೈದ್ಯರಾದ ಡಾ. ನಾಗೇಶ್ ಹೇಳಿದರು.

ಅವರು ಕುಂದಾಪುರ ಹೂವಿನ ವ್ಯಾಪಾರಿಗಳ ಸಂಘದ ವತಿಯಿಂದ ನಡೆದ ಸಹಾಯ ಹಸ್ತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರಾದ ಸುಧೀರ್ ಪೂಜಾರಿ ವಹಿಸಿದ್ದರು.

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ ಮಾಜಿ ಅಧ್ಯಕ್ಷರಾದ ಶಿವ ಕುಮಾರ್ ಮೆಂಡನ್, ಸತೀಶ್ ಪೂಜಾರಿ, ಚಂದ್ರಕಾಂತ್ ಖಾರ್ವಿ, ಹಿರಿಯ ಸದಸ್ಯರಾದ ನವೀನ್ ಪೂಜಾರಿ, ಗಿರಿಜಾ ಶಂಕರ್, ಚಂದ್ರ ಮೆಂಡನ್, ಎಲ್. ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 8 ಜನ ಅರ್ಹ ಫಲಾನುಭವಿಗಳಿಗೆ ವ್ಹಿಲ್ ಚೇರ್, 6ಜನ ಕಾನ್ಸರ್ ರೋಗಕ್ಕೆ ತುತ್ತಾದವರಿಗೆ ಸಹಾಯ ಧನ ಹಾಗೂ ಅಂಗವಿಕಲ ವಿದ್ಯಾರ್ಥಿಗೆ ವಿದ್ಯಾಬ್ಯಾಸಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಟೇಬಲ್ ವಿತರಣೆ ಮಾಡಲಾಯಿತು
ಕುಮಾರ್ ಖಾರ್ವಿ ಸ್ವಾಗತಿಸಿ, ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಇದೆ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ವಿಜೇತರಾಗುವ ಮೂಲಕ  ಕುಂದಾಪುರದ ಹಿರಿಮೆ ಹೆಚ್ಚಿಸಿದ ಕ್ರೀಡಾ ಪಟುಗಳನ್ನು ಗೌರವಿಸಲಾಯಿತು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!