spot_img
Wednesday, April 1, 2026
spot_img

ವಾಟ್ಸ್ಯಾಪ್‌ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ !

ಜನಪ್ರತಿನಿಧಿ (ನವ ದೆಹಲಿ) : ಐಟಿ ನಿಯಮಗಳನ್ನು ಪಾಲಿಸದ ವಾಟ್ಸ್ಯಾಪ್‌ಗೆ ನಿಷೇಧ ಹೇರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್‌ ಹಾಗೂ ಅರವಿಂದ ಕುಮಾರ್‌ ಅವರಿದ್ದ ನ್ಯಾಯಪೀಠ ಈ ಬಗ್ಗೆ ತೀರ್ಪು ಪ್ರಕಟಿಸಿದೆ.

ಸರ್ಕಾರ ಹೊರಡಿಸಿರುವ ಐಟಿ ನಿಯಮಗಳನ್ನು ವಾಟ್ಸ್ಯಾಪ್‌ ಪಾಲಿಸುತ್ತಿಲ್ಲ. ಹೀಗಾಗಿ ಅದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರ ಓಮನ್‌ಕುಟ್ಟನ್‌ ಕೆ.ಜಿ. ಎನ್ನುವವರುಯ ಕೇರಳ ಹೈಕೋರ್ಟ್‌ ನಲ್ಲಿ ದಾವೆ ಹೂಡಿದ್ದರು.

೨೦೨೧ರಲ್ಲಿ ಕೇರಳ ಹೈಕೋರ್ಟ್‌ ಅದನ್ನು ನಿರಾಕರಿಸಿತ್ತು. ಅಲ್ಲದೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.

ವಾಟ್ಸ್ಯಾಪ್‌ ನ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಭದ್ರತೆ ಇರುವುದರಿಂದ ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ೨೦೨೧ರ ಐಟಿ ನಿಯಮಗಳಿಗೆ ಒಳಪಡುವುದಿಲ್ಲ ಎಂದು ವಾಟ್ಸ್ಯಾಪ್‌ ದೆಹಲಿ ಹೈಕೋರ್ಟ್‌ ಗೆ ನೀಡಿದ ಹೇಳಿಕೆಯನ್ನು ಅರ್ಜಿದಾರರು ಕೇರಳ ಹೈಕೋರ್ಟ್‌ ನಲ್ಲಿ ಉಲ್ಲೇಖಿಸಿದ್ದರು.

ಇದೇ ಸಂದರ್ಭದಲ್ಲಿ, ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಸಂಗ್ರಹಿಸಲಾಗುತ್ತದೆ. ಅವರ ಸಂಪರ್ಕಗಳು ಮತ್ತು ಇತರ ಮಾಹಿತಿಯನ್ನು ಪಡೆಯಲಾಗುತ್ತದೆ. ಎನ್ನುವ ವಾಟ್ಸ್ಯಾಪ್‌ ನ ಗೌಪ್ಯತಾ ನೀತಿಯ ಬಗ್ಗೆಯೂ ಕೋರ್ಟ್‌ ಗಮನಕ್ಕೆ ತಂದಿದ್ದರು.

ಮಾತ್ರವಲ್ಲದೇ, ವಾಟ್ಸ್ಯಾಪ್‌ ನಲ್ಲಿ ಭದ್ರತೆ ಕೊರತೆಯಿದೆ. ರಾಷ್ಟ್ರ ವಿರೋಧಿ, ಸುಳ್ಳು ಸುದ್ದಿ ಹಾಗೂ ಚಿತ್ರಗಳನ್ನು ಹರಡುವ ಸಮಾಜ ವಿರೋಧಿ ಅಂಶಗಳಿಂದ ತುಂಬಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ನ್ಯಾಯಾಲಯದ ಸಮನ್ಸ್‌ ಹಾಗೂ ಕಾನೂನು ನೋಟೀಸ್‌ ಗಳನ್ನು ಸಲ್ಲಿಸಲು ವಾಟ್ಸ್ಯಾಪ್‌ನಂತಹ ಸೇವೆಗಳ ಮೇಲೆ ಇಟ್ಟಿರುವ ನಂಬಿಕೆ ಅಪಾಯದಲ್ಲಿದೆ. ಇಂತವುಗಳ ನೈಜತೆ ಖಚಿತಪಡಿಸಿಕೊಳ್ಳಲಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಅರ್ಜಿದಾರರ ವಾದಕ್ಕೆ ಮನ್ನಣೆ ನೀಡದೆ, ಸುಪ್ರೀಂ ಕೋರ್ಟ್‌ ಅರ್ಜಿಯನ್ನು ನಿರಾಕರಿಸಿ ಆದೇಶಿಸಿದೆ.

(ಕೃಪೆ : ಬಾರ್‌ & ಬೆಂಚ್‌ ಮಾಹಿತಿ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!