spot_img
Wednesday, April 1, 2026
spot_img

ನ.17ರಂದು ಸಿದ್ಧಾಪುರದಲ್ಲಿ ತೊಂಬಟ್ಟು ವಿಶ್ವನಾಥ ಆಚಾರ್ಯರ ಯಕ್ಷಯಾನದ 30ರ ವಿಶ್ವ ಸಂಭ್ರಮ

ಕುಂದಾಪುರ, ನ.15 (ಜನಪ್ರತಿನಿಧಿ ವಾರ್ತೆ) ನಾನು ಯಕ್ಷಗಾನ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಕಲಾಯಾನದ 30ರ ಸಂಭ್ರಮವನ್ನು ತೊಂಬಟ್ಟು ಯಕ್ಷಯಾನದ 30ರ ವಿಶ್ವ ಸಂಭ್ರಮವನ್ನು ನನ್ನ ಗೃಹನಿರ್ಮಾಣದ ಸಹಾಯಾರ್ಥವಾಗಿ ಇದೇ ನವೆಂಬರ್ 17ರಂದು ಸಂಜೆ 6ಕ್ಕೆ ಸಿದ್ಧಾಪುರದ ರಂಗನಾಥ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಹಾಲಾಡಿ ಮೇಳದ ಪ್ರಧಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಹೇಳಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅವರ ಆಶೀರ್ವಾದದೊಂದಿಗೆ, ಮೇಳದ ಯಜಮಾನರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ. ಆ ದಿನ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗಂಗಾ ನಂದನ ಹಾಗೂ ಅಗ್ನಿ ನಂದನೆ ಎನ್ನುವ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಳೆಯಲ್ಲಿ ಸುನೀಲ್ ಭಂಡಾರಿ ಕಡತೋಕ, ಚಂಡೆಯಲ್ಲಿ ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ. ಸ್ತ್ರೀ ಭೂಮಿಕೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ್ ಉಪ್ಪೂರು, ಸಂತೋಷ್ ಕುಲಾಲ್ ಹೆಂಗವಳ್ಳಿ, ಹಾಸ್ಯದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ, ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ಕಾರ್ತಿಕ್ ಚಿಟ್ಟಾಣಿ, ವಿನಯ್ ಭಟ್ ಬೆರೊಳ್ಳಿ, ನಿರಂಜನ್ ಜಾಗನಳ್ಳಿ, ದರ್ಶನ್ ಭಟ್, ಪವನ್ ಹೆಗಡೆ ಸಾಣ್ಮನೆ ಭಾಗವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ ಸುರೇಶ ಶೆಟ್ಟಿ ಶಂಕರನಾರಾಯಣ, ವಿದ್ಯಾಧರ ರಾವ್ ಜಲವಳ್ಳಿ, ನಿಲ್ಕೋಡು ಶಂಕರ ಹೆಗಡೆ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಸತೀಶ್ ಶೆಟ್ಟಿ ಮೂಡುಬಗೆ, ಪ್ರಜ್ವಲ್ ಗುರುವಾಯನಕೆರೆ, ಕಾಡೂರು ರವಿ ಆಚಾರ್ಯ, ಶಶಾಂತ ಆಚಾರ್ಯ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಕ್ಷೀಪ್ತ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಲಾವಿದರ ಕಾಮಧೇನು ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಶಂಕರ ಐತಾಳ್ ಅಮಾಸೆಬೈಲು, ಗೈನಾಡಿ ಪ್ರಕಾಶ್ ಶೆಟ್ಟಿ, ಪ್ರಸಂಗಕರ್ತರಾದ ಪ್ರೊ.ಪವನ್ ಕಿರಣ್ ಕೆರೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ ಆಚಾರ್ಯ, ಶಿಕ್ಷಕರಾದ ತಿಮ್ಮಪ್ಪ ನಗರ, ಸಮಾಜ ಸೇವಕ ಬೆಂಕಿಮಣಿ ಸಂತೋಷ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.

ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ ಮಾತನಾಡಿ, ತೊಂಬಟ್ಟು ವಿಶ್ವನಾಥ ಆಚಾರ್ಯ ಹಾಗೂ ನಾನು ಒಟ್ಟಿಗೆ ಗೆಜ್ಜೆ ಕಟ್ಟಿದವರು, ರಂಗದಲ್ಲಿ ಹೆಸರು ಮಾಡಿದ್ದಾರೆಯೇ ಹೊರತು ಆರ್ಥಿಕವಾಗಿ ಸಶಕ್ತರಾಗಿಲ್ಲ. ಅವರು ಮನೆ ನಿರ್ಮಾಣದ ಸಹಾಯಾರ್ಥವಾಗಿ ಯಕ್ಷಗಾನ ಆಯೋಜಿಸಿದ್ದಾರೆ. ಕಲಾಭಿಮಾನಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಸುದ್ಧಿಗೋಷ್ಠಿಯಲ್ಲಿ ಧರ್ಮಸ್ಥಳ ಮೇಳದ ಸ್ತ್ರೀ ವೇಷ ಕಲಾವಿದ ಶರತ್ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!