spot_img
Thursday, December 5, 2024
spot_img

ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೋ ಅಧಿಕಾರ ಸ್ವೀಕಾರ

ಜನಪ್ರತಿನಿಧಿ (ಕುಂದಾಪುರ) : ನಾನು ಬೂತ್ ಮಟ್ಟದ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಾ ಬಂದವನು. ಪಕ್ಷ ಸೇವೆಯನ್ನು ಗುರುತಿಸಿ ಮಹತ್ವದ ಅವಕಾಶ ನೀಡಿದೆ. ಕುಂದಾಪುರ ಯೋಜನಾ ಪ್ರಾಧಿಕಾರದ ಜವಬ್ದಾರಿ ಸುಲಭವಲ್ಲ ಎನ್ನುವ ಅರಿವಿದೆ. ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಪ್ರಾಧಿಕಾರದ ಉತ್ತಮ ಸೇವೆ ನೀಡಲು ಪ್ರಯತ್ನಿಸುವುದಾಗಿ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ವಿನೋದ್ ಕ್ರಾಸ್ಟೋ ಹೇಳಿದರು.

ಅವರು ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬುಧವಾರ ಕುಂದಾಪುರ ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಸುಂದರ ನಗರದ ಪರಿಕಲ್ಪನೆಯಲ್ಲಿ ಸರ್ಕಾರ ಉತ್ತಮ ವಿನ್ಯಾಸವನ್ನು ನೀಡಿದೆ. ಪ್ರಮುಖವಾಗಿ ಎಲ್ಲಾ ಜನವಸತಿ ಸ್ಥಳಗಳಿಗೂ ಉತ್ತಮ ಸಂಪರ್ಕ ರಸ್ತೆ, ವಿದ್ಯುತ್, ಕುಡಿಯುವ ನೀರು ವ್ಯವಸ್ಥೆ ಇರಬೇಕಾಗುತ್ತದೆ. ಪ್ರಾಧಿಕಾರದ ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸಳೆದು ಸಾರ್ವಜನಿಕರಿಗೆ

ಉತ್ತಮ ಸೇವೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ನಮ್ಮ ತಂಡ ಸದಾ ಸಿದ್ಧವಿರುತ್ತದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ ವಿನೋದ್ ಕ್ರಾಸ್ಟೋ ಅವರ ತಂದೆ ತಾಯಿ ಜನಸೇವೆಯಲ್ಲಿ ಗುರುತಿಸಿಕೊಂಡವರು. ಇವರು ಕೂಡಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದವರು. ಅವರ ಸೇವೆಯನ್ನು ಪಕ್ಷ ಗುರುತಿಸಿದೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಅವರಿಗೆ ದೊರಕಿದ್ದು ಅದೃಷ್ಟದಿಂದ ಅಲ್ಲ, ಅವರ ಆರ್ಹತೆಗೆ ಸರಿಯಾದ ಸ್ಥಾನ ದೊರಕಿದೆ. ಪಕ್ಷದಲ್ಲಿ ದುಡಿದ ಎಲ್ಲರನ್ನು ಪಕ್ಷ ಗುರುತಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪಕ್ಷದ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಕೋಡಿ ಶಂಕರ ಪೂಜಾರಿ, ಬಿ. ಹೆರಿಯಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ನೂತನ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಸದಸ್ಯರಾದ ಚಂದ್ರ ಅಮೀನ್, ಚಂದ್ರಶೇಖರ ಶೆಟ್ಟಿ, ಮೊಹಮ್ಮದ್ ಅಲ್ಪಾಝ್ ಅವರನ್ನು ಅಭಿನಂದಿಸಲಾಯಿತು. ಹಿರಿಯ ನ್ಯಾಯವಾದಿ ಎ.ಬಿ ಶೆಟ್ಟಿ ಕಛೇರಿ ಉದ್ಘಾಟಿಸಿದರು.

ಪ್ರಾಧಿಕಾರದ ಸದಸ್ಯ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಚಂದ್ರ ಅಮೀನ್ ವಂದಿಸಿದರು. ವಿಜಯ ಭಂಡಾರಿ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!