spot_img
Sunday, February 15, 2026
spot_img

‘ಪುರಸಭಾ ವ್ಯಾಪ್ತಿಯಲ್ಲಿ ಕೆರೆ, ಚರಂಡಿ, ರಸ್ತೆಗಳು ಮಾಯವಾಗುತ್ತಿವೆ’ ಕುಂದಾಪುರ ಪುರಸಭೆ ಸಾಮಾನ್ಯ ಸಭೆ : ಮಾತಿನ ಚಕಮಕಿ

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ನಡೆದ ಕಳಪೆ ಕಾಮಗಾರಿಗಳು, ಹಂಪ್ಸ್ ವಿಚಾರ, ಫುಟ್‌ಪಾತ್ ಅತಿಕ್ರಮಣ, ದಾರಿದೀಪ ಸಮಸ್ಯೆ ಸಹಿತ ಹಲವು ವಿಷÀಯಗಳ ಗಂಭೀರ ಚರ್ಚೆ  ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಕುಂದಾಪುರ ಪುರಸಭೆಯ ಪ್ರಥಮ ಅಧಿವೇಶನದಲ್ಲಿ ನಡೆಯಿತು.

ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಪುರಸಭಾ ಕಾರ್ಯಾಲಯದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಪ್ರಾರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗಿರೀಶ್, ಕುಂದಾಪುರ ನಗರದಲ್ಲಿ ಬಹುತೇಕ ಕಡೆ ಕಳಪೆ ಕಾಮಗಾರಿ ನಡೆದಿದೆ. ಪುರಸಭೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳನ್ನು ಥರ್ಡ್ ಪಾರ್ಟಿ ಪರಿಶೀಲನೆ ನಡೆಸಿಯೂ ಗುತ್ತಿಗೆದಾರರಿಗೆ ತಕ್ಕಂತೆ ವರದಿ ನೀಡಲಾಗಿದೆ. ಕಾಮಗಾರಿ ಸರಿಯಾಗಿ ಸಮರ್ಪಕವಾಗಿ ನಡೆದಿದೆ ಎಂದು ವರದಿ ನೀಡಿ ಕಾಮಗಾರಿಯ ಬಿಲ್ ಪಾವತಿಸಲಾಗಿದೆ. ಆದರೆ  ಎಲ್ಲಿಯೂ ಕೂಡ ಸಮರ್ಪಕವಾಗಿ ನಡೆದಿಲ್ಲ. ಹಾಗಾಗಿ ಕಾಮಗಾರಿಗಳ ಥರ್ಡ್ ಪಾರ್ಟಿ ಪರಿಶೀಲನೆಯನ್ನು ಬೇರೆಯವರಿಗೆ ನೀಡಬೇಕು ಮತ್ತು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕುಂದಾಪುರ ನಗರದಲ್ಲಿ ರಸ್ತೆಗಳು, ಚರಂಡಿಗಳು, ಕೆರೆಗಳು ಮಾಯವಾಗುತ್ತವೆ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಪತ್ರ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯರಾದ ಆರೋಪಿಸಿದರು.

ಕುಂದಾಪುರ ನಗರದಲ್ಲಿ ಬಹುತೇಕ ಎಲ್ಲಾ ಕಟ್ಟಡಗಳು ಪಾದಚಾರಿಗಳ ಫುಟ್‌ಪಾತ್‌ನ್ನು ಅತಿಕ್ರಮಣ ಮಾಡುತಿದ್ದು ಸ್ವಲ್ಪ ದಿನ ಹೋದರೆ ಕಟ್ಟಡಗಳು ರಸ್ತೆಯ ಮಧ್ಯಭಾಗದಲ್ಲಿ ಬರುವುದರಲ್ಲಿ ಸಂಶಯವಿಲ್ಲ. ಫುಟ್‌ಪಾತ್ ಅತಿಕ್ರಮಣದಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಇನ್ನು ಮುಂದಾದರೂ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸದಸ್ಯರಾದ ಗಿರೀಶ್ ಮನವಿ ಮಾಡಿದರು.
ಪುರಸಭೆಯ ಸಭೆಯ ಕಾರ್ಯಸೂಚಿಯಲ್ಲಿ ನೆಹರು ಮೈದಾನ ಸಮಸ್ಯೆ, ಹಕ್ಕು ಪತ್ರ, ಕೋಡಿ ಬ್ಯಾಕ್ ವಾಟರ್ ಸಮಸ್ಯೆ, ಸಹಿತ ಪುರಸಭೆಯ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳ ಬಗ್ಗೆ ಪ್ರಸ್ತಾವನೆಗಳಿಲ್ಲ ಎಂದು ಸದಸ್ಯರು ಆರೋಪಿಸಿದರು.

ಕುಂದಾಪುರ ಪುರಸಭೆಯಲ್ಲಿ ಗುತ್ತಿಗೆದಾರರ ಸಭೆ ನಡೆಸಿದ ಅಧ್ಯಕ್ಷರ ನಡೆಯನ್ನು ಖಂಡಿಸಿದ ಸದಸ್ಯ ಚಂದ್ರಶೇಖರ ಖಾರ್ವಿ, ಅಧ್ಯಕ್ಷರು ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆದರೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರ ಸಭೆ ನಡೆಸುವ ಬದಲು ಗುತ್ತಿಗೆದಾರರ ಸಭೆ ನಡೆಸಿದ್ದಾರೆ. ಪುರಸಭೆಯಲ್ಲಿ ನಡೆದ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕಾಮಗಾರಿಗಳು ನಡೆಯುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಇದರಿಂದ ಕುಪಿತರಾದ ಅಧ್ಯಕ್ಷ ಮೋಹನದಾಸ ಶೆಣೈ, ಕಾಮಗಾರಿಗಳು ಒಳ್ಳೆ ರೀತಿಯಲ್ಲಿ ಆಗಬೇಕು ಎಲ್ಲರಿಗೂ ಕೆಲಸ ಸಿಗಬೇಕು ಎಂಬ ಉದ್ದೇಶದಿಂದ ಗುತ್ತಿಗೆದಾರರನ್ನು ಸಭೆ ಕರೆದು ಸೂಚನೆ ನೀಡಲಾಗಿದೆ. ಗುತ್ತಿಗೆದಾರ ಸಭೆಯಲ್ಲಿ ಎಲ್ಲಾ ಪಕ್ಷದ ಗುತ್ತಿಗೆದಾರರು ಕೂಡ ಭಾಗವಹಿಸಿದ್ದು, ಗುತ್ತಿಗೆದಾರರಿಂದ ಯಾವುದೇ ಲಾಭ ಪಡೆಯುವ ಉದ್ದೇಶ ಇಲ್ಲ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ ಮತ್ತು ಇದರಿಂದ ಪಕ್ಷಕ್ಕೂ ಯಾವುದೇ ಲಾಭವಿಲ್ಲ ಎಂದು ಅವರು ಸ್ಪಷಪಡಿಸಿದರು. ಪುರಸಭೆಗೆ ನಷ್ಟ ಉಂಟಾಗಿದೆ ಎಂಬ ಆರೋಪದ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಸಿಟ್ಟಾದರು. ಪುರಸಭೆಯಲ್ಲಿ ಅವ್ಯವಹಾರ, ಭ್ರಷ್ಟಾಚಾರ  ನಡೆದಿದ್ದರೆ ದಾಖಲೆ ನೀಡಲಿ. ಸುಖಾ ಸುಮ್ಮನೆ ಪ್ರಚಾರಕ್ಕಾಗಿ ಆರೋಪ ಮಾಡುವುದು ಸರಿಯಲ್ಲ. ಸುಳ್ಳು ಆರೋಪಗಳನ್ನ ಮಾಡುತ್ತ ಸಭೆಯಲ್ಲಿ ಕಾಲಹರಣ ಮಾಡಲು ಸರಿಯಲ್ಲ ಎಂದು ಸದಸ್ಯ ಸಂತೋಷ್, ಪ್ರಭಾಕರ, ಗಿರೀಶ್ ಮೊದಲಾದವರು ಧ್ವನಿ ಎತ್ತಿದರು.

ಈ ಬಗ್ಗೆ ತನಿಖೆಯಾಗಬೇಕು ಎಂದು ಚಂದ್ರಶೇಖರ ಖಾರ್ವಿ ಒತ್ತಾಯಿಸಿದಾಗ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಳೆದ ೧೫ ವರ್ಷಗಳಿಂದ ನಡೆದ ಯುಜಿಡಿ, ಜಪ್ತಿ ವಾಟರ್ ಸಪ್ಲೆöÊ ಸೇರಿದಂತೆ ಎಲ್ಲಾ ಕಾಮಗಾರಿಗಳ ತನಿಖೆ ನಡೆಯಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು.
ಪುರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರುಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಕಾಮಗಾರಿಗಳನ್ನು ಪರಿಶೀಲ ನಡೆಸುತ್ತಿಲ್ಲ ಎಂದು ಸದಸ್ಯ ಶ್ರೀಧರ್ ಶೇರುಗಾರ್ ಆರೋಪಿಸಿದರು.

ಕುಂದಾಪುರ ದೇವಸ್ಥಾನದ ರಥೋತ್ಸವ ಸಮಯದಲ್ಲಿ ಮುಖ್ಯರಸ್ತೆಯಲ್ಲಿ ಹಾಕಿದ ಹಂಪ್ಸ್ಗಳನ್ನು ತೆರವು ಮಾಡಿ ೮ ತಿಂಗಳು ಕಳೆದರೂ ಹಂಪ್ಸ್ ಪುನರ್ ನಿರ್ಮಿಸಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚುತ್ತಿದೆ. ಈ ಹಿಂದೆ ದೇವಸ್ಥಾನದವರೇ ಹಂಪ್ಸ್ ಹಾಕಿ ಕೊಡುತ್ತಿದ್ದರು. ಆದರೆ ಈ ವರ್ಷ ಹಂಪ್ಸ್ ಹಾಕಿಲ್ಲ ಎಂದು ಸದಸ್ಯ ಪ್ರಭಾಕರ್ ಅವರು ಆರೋಪಿಸಿದರು. ಇದೇ ವಿಚಾರದಲ್ಲಿ ವಾದ ವಿವಾದಗಳು ನಡೆಯಿತು. ಈ ಹಿಂದೆ ಹಂಪ್ಸ್ ಇದ್ದ ಕಡೆಗಳಲ್ಲಿ ಮತ್ತೆ ಪುನ: ಹಂಪ್ಸ್ ಹಾಕಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರೆ, ಅಪಘಾತ ಸ್ಥಳವನ್ನು ನೋಡಿ ಟ್ರಾಫಿಕ್ ಪೊಲೀಸರ ಸಲಹೆಗಳನ್ನು ಪಡೆದು ಅಗತ್ಯ ಇರುವ ಕಡೆ ಹಂಪ್ಸ್ಗಳನ್ನು ನಿರ್ಮಿಸಿ ಎಂದು ಕೆಲ ಸದಸ್ಯರು ಹೇಳಿದರು.

ಕುಂದಾಪುರ ಸಭೆಯ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳಲ್ಲಿ ಹಂಪ್ಸ್ ನಿರ್ಮಿಸಿ, ಇದರಿಂದ ಆಗುವ ಪರಿಣಾಮಗಳನ್ನು ಗಮನಿಸಿ ಬಳಿಕ ಮುಖ್ಯ ರಸ್ತೆಯಲ್ಲಿ ಹಂಪ್ಸ್ ಹಾಕುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸಹಮತ ವ್ಯಕ್ತವಾಗದ ಹಿನ್ನಲೆಯಲ್ಲಿ ಈಗಿರುವ ಸ್ಥಳಗಳಲ್ಲಿ ಟೆಂಡರ್ ಕರೆದು ಹಂಪ್ಸ್ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

ಕುಂದಾಪುರ ಪುರಸಭೆಯ ಹಲವೆಡೆ ಇರುವ ದಾರಿದೀಪ ಸಮಸ್ಯೆಗಳು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಿತು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!