spot_img
Wednesday, April 1, 2026
spot_img

ಡಿಜಿಟಲ್ ಯುಗದಲ್ಲಿ ಮಾಧ್ಯಮ ಸಾಕ್ಷರತೆ: ಮನಸ್ಸುಗಳನ್ನು ತಲುಪುವ ಸಾಮರ್ಥ್ಯ

ಮಾಧ್ಯಮ ಸಾಕ್ಷರತೆ ಎಂದರೆ ವಿವಿಧ ಮಾಧ್ಯಮಗಳ ತಾಣವನ್ನು ವಿಶ್ಲೇಷಿಸುವ, ಮೌಲ್ಯಮಾಪನ ಮಾಡುವ ಸಾಮರ್ಥ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವುದರಿಂದ ಯುವ ಜನತೆಗೆ ಮಾಧ್ಯಮ ಸಾಕ್ಷರತೆ ಅತ್ಯಂತ ಪ್ರಮುಖವಾಗಿದೆ.

ಸಾಂಪ್ರದಾಯಿಕ ಮಾಧ್ಯಮವಾದ ಪತ್ರಿಕೆ ಮುದ್ರಣ ಮಾಧ್ಯಮವಾದರೆ; ರೇಡಿಯೋ, ಟೆಲಿವಿಷನ್ ವಿದ್ಯುನ್ಮಾನ ಮಾಧ್ಯಮಗಳೆಂದು ಗುರುತಿಸಬಹುದು. ಈ ಎಲ್ಲಾ ಮಾಧ್ಯಮಗಳ ಮೂಲ ಉದ್ದೇಶವು ಒಂದೇ ಆಗಿದೆ; ಅದೇ ಸಮೂಹ ಸಂವಹನ. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲೀಕರಣದಿಂದಾಗಿ ಎಲ್ಲ ಮಾಧ್ಯಮಗಳ ಸ್ವರೂಪ ಸಂಪೂರ್ಣ ಬದಲಾದರೂ ಮೂಲ ಆಶಯ ಬದಲಾಗಿಲ್ಲ.

ಟುಡೇ ನ್ಯೂಸ್ ಪೇಪರ್, ಟುಮಾರೋ ವೇಸ್ಟ್ ಪೇಪರ್ ಎಂದು ಹೇಳುವ ಕಾಲವೊಂದಿತ್ತು. ಆದರೆ ಈಗ ಡಿಜಿಟಲ್ ಯುಗದಲ್ಲಿ ಇಂದಿನ ಪತ್ರಿಕೆ ವಿಷಯಗಳು ನಾಳಿನ ಡಾಕ್ಯುಮೆಂಟ್ ಗಳಾಗುತ್ತವೆ. ನೀವು ಪತ್ರಿಕೆಗಳನ್ನು ಓದಿ ಎಸೆಯಬಹುದು. ಆದರೆ ಅದರಲ್ಲಿನ ವಿಷಯವನ್ನು ಎಸೆಯಲು ಸಾಧ್ಯವಿಲ್ಲ ಅಲ್ಲವೇ? ಅವುಗಳಿಗೆ ಭವಿಷ್ಯವಿದೆ. ಪತ್ರಿಕೆ ಎಂದಿಗೂ ರದ್ದಿ ಆಗುವುದಿಲ್ಲ.

ಬೆಳಿಗ್ಗೆ ಎದ್ದ ತಕ್ಷಣ ಕೈಯಲ್ಲಿ ಕಾಫಿ ಲೋಟದ ಜೊತೆಗೆ ದಿನಪತ್ರಿಕೆಯನ್ನು ಹಿಡಿಯುವುದರೊಂದಿಗೆ ನಮ್ಮೆಲ್ಲರ ದಿನ ಪ್ರಾರಂಭವಾಗುತ್ತದೆ. ಪ್ರಪಂಚದಲ್ಲಿ ಆಗುವ ಎಲ್ಲಾ ಸುದ್ದಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪತ್ರಿಕೆಗಳು ಎಲ್ಲರಿಗೂ ಮುಖ್ಯ. ಆದರೆ ಆ ಪತ್ರಿಕೆ ಬೆಲೆ ಎಷ್ಟು ಕಡಿಮೆ ಅಲ್ವಾ??? ಅಷ್ಟು ಕಡಿಮೆ ಬೆಲೆಯಲ್ಲಿ ಪ್ರಪಂಚದಲ್ಲಿ ನಡೆಯುವ ಮುಖ್ಯ ಸಂಗತಿಗಳನ್ನು ನಮ್ಮೆಲ್ಲರ ತಲೆಯೊಳಗೆ ತುರುಕುವ ಪತ್ರಿಕೆ ಮುಂದೊಂದು ದಿನ ಪ್ರಯೋಜನಕ್ಕೆ ಬರುತ್ತದೆ. ಆದರೆ ಈ ದಿನ ಪತ್ರಿಕೆಯ ಭವಿಷ್ಯ ಎಷ್ಟು ಹೊತ್ತು ಉಳಿಯುತ್ತದೆ ಎಂದರೆ ಅದರ ಬಳಕೆದಾರರ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ಇಂದಿನ ವಿದ್ಯಾರ್ಥಿಗಳಿಂದ ಹಿಡಿದು ಹಣ್ಣು ಹಣ್ಣು ಮುದುಕರೆಲ್ಲರೂ ದಿನಪತ್ರಿಕೆಯನ್ನು ಓದಿ ದೈನಂದಿನ ವಿಷಯದ ಜ್ಞಾನಪಡೆದುಕೊಳ್ಳುತ್ತಾರೆ. ಕಲೆ, ಕ್ರೀಡೆ, ಸಾಹಿತ್ಯ, ಪ್ರಚಲಿತ ವಿದ್ಯಮಾನ, ರಾಜಕೀಯ, ಪ್ರಾಪಂಚಿಕ ಸುದ್ದಿಗಳು, ದೇಶ-ವಿದೇಶಗಳ ಘಟನೆ; ಜೊತೆಗೆ ದೈನಂದಿನ ಕುತೂಹಲಕಾರಿ ಘಟನೆಗಳು ಹೀಗೆ ಹತ್ತು ಹಲವಾರು ಉಪಯುಕ್ತ ವಿಷಯಗಳೊಂದಿಗೆ ನಮ್ಮನ್ನು ಸೇರುವ ದಿನಪತ್ರಿಕೆ ಸಾವಿರಾರು ವಿಷಯಗಳೊಂದಿಗೆ ದಿನ ನಿತ್ಯ ನಮ್ಮನ್ನು ತಲುಪುತ್ತವೆ. ಹಲವು ವಿಷಯಗಳನ್ನು ಒಳಗೊಂಡ ಈ ದಿನ ಪತ್ರಿಕೆ ದಿನ ಕಳೆದ ಬಳಿಕ ಬೆಲೆಯನ್ನೇ ಕಳೆದುಕೊಳ್ಳುತ್ತದೆ. ತೂಕಕ್ಕೆ ಹಾಕುವುದು, ಗುಜರಿ ವ್ಯಾಪಾರಿಗಳಿಗೆ ಕೊಡುವುದು, ಬಜ್ಜಿ, ಬೋಂಡಾ, ಚುರುಮುರಿ ತಿನ್ನಲು ಉಪಯೋಗಿಸಲಾಗುತ್ತದೆ. ಹಿಂದೆ ಯಾವಾಗಲೂ ಓದಿದ ವಿಷಯಗಳು ಕೆಲವೊಮ್ಮೆ ಭವಿಷ್ಯಕ್ಕೆ ಉಪಯುಕ್ತವಾಗುತ್ತವೆ. ಜ್ಞಾನ ಯಾರ ಸ್ವತ್ತು ಅಲ್ಲ. ಅಲ್ವಾ ಸ್ನೇಹಿತರೆ? ಯಾರಿಂದಲೂ ಕದಿಯಲಾಗದ ಸಂಪತ್ತು. ನಾವು ಸಾಯುವವರೆಗೂ ನಮ್ಮ ಜೊತೆಯಲ್ಲಿರುವ ಈ ಜ್ಞಾನವನ್ನು ನಮಗೆ ನೀಡುವುದು ಈ ಪತ್ರಿಕೆಗಳೇ ಅಲ್ಲವೇ???

ಈ ಮಾಧ್ಯಮಗಳು ನಮ್ಮ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಸಮೂಹ – ಸಂವಹನ ಮಾಧ್ಯಮಗಳು ಮನುಷ್ಯ ಮನುಷ್ಯರ ನಡುವೆ ಸಂಪರ್ಕ ಕಲ್ಪಿಸುವ ಸಾಧನಗಳಾಗಿ ನಮ್ಮ ಮುಂದಿದೆ. ಸುದ್ದಿ ಪತ್ರಿಕೆ ಹಾಗೂ ರೇಡಿಯೋ ಟಿವಿಯ ಮೂಲಕ ಪ್ರಾರಂಭವಾದ ಈ ಸಂವಹನ ಕ್ಷೇತ್ರ ಇಂದು ಡಿಜಿಟಲ್ ತಂತ್ರಜ್ಞಾನದೊಂದಿಗೆ ಮುಂದುವರೆಯುತ್ತಲಿವೆ. ಮೊದಲೆಲ್ಲ ಏನೇ ಘಟನೆಗಳಾದರೂ ನಮಗೆ ರೇಡಿಯೋ ವಾರ್ತೆಗಳ ಮೂಲಕ ತಿಳಿಯುತ್ತಿತ್ತು; ನಂತರ ಟಿವಿ ಮಾಧ್ಯಮಗಳಿಂದ ತಲುಪುತ್ತಿತ್ತು; ಅಕ್ಷರಸ್ಥರಾದರೆ ವಾರ್ತಾ ಪತ್ರಿಕೆಯನ್ನು ಓದಿ ತಿಳಿಯಬಹುದಾಗಿತ್ತು. ಇಂದು ಮುಂದುವರಿದ ತಂತ್ರಜ್ಞಾನದ ಬಳಕೆಯಿಂದಾಗಿ ಕೇವಲ ಒಂದೇ ಒಂದು ಕ್ಲಿಕ್ ನ ಮೂಲಕ ನಮಗೆ ಬೇಕಾದ ವಿಷಯಗಳ ಮಾಹಿತಿ ಪಡೆಯಬಹುದು. ಅದೆಷ್ಟು ಉಪಯುಕ್ತ ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನಗಳು, ಮೊಬೈಲ್ ಅಪ್ಲಿಕೇಶನ್ಸ್ ಗಳು ಕಡಿಮೆ ಸಮಯದಲ್ಲಿ ಅದೆಷ್ಟೋ ವಿಷಯಗಳು ನಮ್ಮನ್ನು ತಲುಪುವ ಹಾಗೆ ಮಾಡುತ್ತದೆ.

ಶಿಕ್ಷಣ ಕ್ಷೇತ್ರಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಪ್ರಪಂಚದಾದ್ಯಂತ ನಡೆದ ವಿವಿಧ ಘಟನಾವಳಿಗಳ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವ ಕರ್ತವ್ಯ ಮಾಧ್ಯಮಗಳದ್ದು. ಸಾಮಾಜಿಕ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅತ್ಯಂತ ಅವಶ್ಯಕ. ಈ ಮಾಧ್ಯಮಗಳ ಮೂಲಕ ಪ್ರತಿಕ್ಷಣ ತೊಡಗಿಸಿಕೊಳ್ಳುವ ನಾವು ಸುದ್ದಿ, ಮಾಹಿತಿ, ಮನೋರಂಜನೆ, ನಂಬಿಕೆ, ಆಚರಣೆ, ಮೌಲ್ಯ ಮುಂತಾದವುಗಳನ್ನು ರೂಪಿಸಲು ಮಾಧ್ಯಮ ಅತ್ಯವಶ್ಯಕವಾಗಿದೆ. ಶಿಕ್ಷಣದ ಎಲ್ಲಾ ಆಯಾಮಗಳನ್ನು ಮಾಧ್ಯಮ ಆವರಿಸಿಕೊಂಡಿದೆ. ಮಾಧ್ಯಮ ಸಾಕ್ಷರತೆ ಇಂದು ಜನ ಜೀವನದ ಭಾಗವಾಗಿದೆ.

ಮೊದಲು ಚಾಕ್ and ಟಾಕ್ ಎಂಬಂತಿದ್ದ ಶಿಕ್ಷಣ ಕ್ಷೇತ್ರ ಇಂದು ಡಿಜಿಟಲೀಕರಣಗೊಂಡಿದ್ದನ್ನು ನೋಡಿದಾಗ ಜನರು ಕೂಡ ಮಾಧ್ಯಮ ವಿಕಾಸನದೊಂದಿಗೆ ಗುರುತಿಸಿಕೊಂಡಿದ್ದು ಕಾಣಬಹುದು. ಪ್ರಸ್ತುತ ಪ್ರಜಾಪ್ರಭುತ್ವ ಸಮಾಜದಲ್ಲಿ ನಾಗರಿಕರಿಗೆ ಎಲ್ಲಾ ಕೌಶಲಗಳು ಅಂದರೆ ಮುದ್ರಣದಿಂದ ಅಂತರ್ಜಾಲದವರೆಗೆ ಬೇರೆ ಬೇರೆ ಸ್ವರೂಪಗಳಲ್ಲಿ ಮಾಧ್ಯಮ ಮಾಹಿತಿಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಸಮಾಜದಲ್ಲಿ ಎಲ್ಲರೂ ಮಾಧ್ಯಮ ಸಾಕ್ಷರರೇ.

ನಾವಿರುವ ಕಡೆಯಲ್ಲಿ ಮನರಂಜನೆಯನ್ನು ಪಡೆಯುವ ಅವಕಾಶ ದೊರೆತಿದೆ. ಇದು 21ನೆಯ ಶತಮಾನದ ಶಿಕ್ಷಣ ವಿಧಾನ. ಮೊದಲೆಲ್ಲ ನಾಟಕ ಮನರಂಜನೆ ನೀಡುತ್ತಿತ್ತು; ನಂತರ ದೂರದರ್ಶನದ ಧಾರವಾಹಿ, ಸಿನಿಮಾಗಳು ಬಂದವು. ಇಂದು ಏನೇ ಮನರಂಜನೆ ಬೇಕೆಂದರೂ ಮೊಬೈಲ್ ನೀಡುತ್ತಿವೆ. ನಾಟಕ, ಧಾರವಾಹಿ, ಸಿನಿಮಾ, ಹಾಡು, ನೃತ್ಯ ಎಲ್ಲವೂ ಇಲ್ಲೇ ಇದೆ. ಬೆರಳ ತುದಿಯಲ್ಲಿ ನಾವು ಬೇಕೆನಿಸಿದ್ದು ಪಡೆದುಕೊಳ್ಳಬಹುದು. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಮುಂತಾದ ಉನ್ನತ ಶಿಕ್ಷಣದ ಹಂತದಲ್ಲೂ ವಿದ್ಯಾರ್ಥಿ ವೃಂದ ಮಾದ್ಯಮ ಸಾಕ್ಷರತೆಯ ಭಾಗವಾಗಿದೆ. ಮಾಧ್ಯಮ ಸಾಕ್ಷರರಾಗಲು ಮಾಧ್ಯಮದ ಸಂದೇಶಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಅಂದರೆ ಭಾವನೆ, ಯೋಜನಾ ಲಹರಿ ಮತ್ತು ನಡುವಳಿಕೆಗಳನ್ನು ನಿರ್ಣಯಿಸುವ ಜವಾಬ್ದಾರಿಯನ್ನು ನಿಭಾಯಿಸುವ ಕಲೆಯನ್ನು ತಿಳಿದಿರಬೇಕು.

ಮಾಧ್ಯಮ ಸಾಕ್ಷರತೆ ಎಂದು ಕೌಶಲ, ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ. ಪ್ರತಿಕ್ಷಣ ಯುವ ಜನತೆಯನ್ನು ಸಶಕ್ತರನ್ನಾಗಿ ಮಾಡಲು ಮಾಧ್ಯಮ ಸಾಕ್ಷರತೆ ಉಪಯುಕ್ತವಾಗಿದೆ. ಇಂದು ಯಾವುದೇ ತಿಳುವಳಿಕೆ ಇಲ್ಲದ ವಿಷಯದ ಕುರಿತು ನಾವು ತಿಳಿದುಕೊಳ್ಳಬಹುದು. Google, Chatgpt, AI ಮೂಲಕ ಯಾವುದೇ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಎಲ್ಲ ಸಮಸ್ಯೆಗಳಿಗೆ ಕ್ಷಣಮಾತ್ರದಲ್ಲಿ ಪರಿಹಾರ ಕೊಡುವ ಈ ತಂತ್ರಜ್ಞಾನ – ಡಿಜಿಟಲೀಕರಣದಿಂದಾಗಿ ನಮ್ಮೆಲ್ಲರ ಬುದ್ಧಿಮತ್ತೆ ಕಡಿಮೆಯಾಗುತ್ತಿದೆ ಅನಿಸುತ್ತಿಲ್ಲವೇ? ಮೊದಲು ಕೂಡುವುದು, ಕಳೆಯುವುದು ಎಲ್ಲಾ ಎಷ್ಟು ಸುಲಭವಾಗಿತ್ತು; ಆದರೆ ಇಂದು ಕ್ಯಾಲ್ಕುಲೇಟರ್ ಇಲ್ಲದೆ ನಮಗೆ ಲೆಕ್ಕ ಮಾಡಲು ಬರುವುದೇ ಇಲ್ಲ ಎಂದು ಹೇಳುವ ಮಕ್ಕಳೂ ಇದ್ದಾರೆ.

ತಂತ್ರಜ್ಞಾನದ ಮೇಲೆ ಅತಿಯಾದ ಅವಲಂಬನೆಯು ಒಳ್ಳೆಯದಲ್ಲ. ನಮಗೆ ತಿಳಿಯದ ವಿಷಯಗಳನ್ನು ತಿಳಿಯಲು ನಮ್ಮ ಬುದ್ಧಿಮತ್ತೆಯನ್ನು ಹೆಚ್ಚಿಸಲು ಇವುಗಳ ಉಪಯೋಗವಾಗಬೇಕೇ ಹೊರತು ಇವುಗಳ ಉಪಯೋಗದಿಂದಾಗಿ ನಮ್ಮ ಯೋಚನಾ ಶಕ್ತಿಯನ್ನು ಕಳೆದುಕೊಳ್ಳಬಾರದು ಅಲ್ವಾ???

ರಶ್ಮಿ ಉಡುಪ ಮೊಳಹಳ್ಳಿ.
SKVMS GFGC Kundapura, Koteshwara

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!