spot_img
Thursday, December 5, 2024
spot_img

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ : 69ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಕಿರಿಮಂಜೇಶ್ವರ: ನವೆಂಬರ 1ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ  ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಶಿಕ್ಷಕರಾದ ಸುಬ್ರಹ್ಮಣ್ಯ ಮರಾಠಿ ಇವರು ಕನ್ನಡದ ಐತಿಹಾಸಿಕ ಹಿನ್ನೆಲೆ ಮತ್ತು ಕನ್ನಡದ ನಾಡು ನುಡಿಯ ಬಗ್ಗೆ ,ಉಳಿವು ಅಳಿವಿನ ಬಗ್ಗೆ ಮಾತನಾಡಿದರು.ಈ ಸಭೆಯ ಅಧ್ಯಕ್ಷತೆಯನ್ನು  ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಅವರು ಕನ್ನಡದ ಬಗ್ಗೆ ಇರುವ ತಾತ್ಸಾರ ಹಾಗೂ ಕನ್ನಡವನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ    ಮಾತನಾಡಿದರು.  ಈ ಕಾರ್ಯಕ್ರಮದ ಅಂಗವಾಗಿ ಜನತಾ ಚಿತ್ರ ಸಿರಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಇದರಲ್ಲಿ ವಿದ್ಯಾರ್ಥಿಗಳು ಬಿಡಿಸಿದ ವಿವಿಧ ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮೂಹ ಗಾಯನ ಮತ್ತು ಕನ್ನಡದ   ನಾಡು ನುಡಿಯನ್ನು ಬಣ್ಣಿಸುವ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಈ ಸಮಾರಂಭದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ  ಸ್ಕೂಲ್ ನ ಬೋಧಕ ಮತ್ತು ಬೋಧಿಕೇತರ  ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯಾದ ಶ್ರೀಮತಿ ಶಶಿಕಲಾ ಸ್ವಾಗತಿಸಿ, ಶ್ರೀಮತಿ ಸುಜಾತ ವಂದಿಸಿ, ಕುಮಾರಿ ಶ್ವೇತಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!