spot_img
Thursday, December 5, 2024
spot_img

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ  69ನೇ ಕನ್ನಡ ರಾಜ್ಯೋತ್ಸವ ಆಚರಣೆ

ಶಂಕರನಾರಾಯಣ :  ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಮದರ್ ತೆರೇಸಾಸ್ ಪಿ ಯು ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ  ಆಚರಿಸಲಾಯಿತು.
ಧ್ವಜಾರೋಹಣಗೈದು ಕನ್ನಡಾಂಭೆಯ ಭಾವಚಿತ್ರಕ್ಕೆ ದೀಪಬೆಳಗಿಸಿ ಪುಷ್ಪನಮನ ಸಲ್ಲಿಸಲಾಯಿತು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಧ್ವಜಾರೋಹಣ ಗೈದು ಮಾತನಾಡಿ ಕನ್ನಡ ಭಾಷೆ ಕಲಿಯಲು ಸುಲಭ, ಮಾತನಾಡಲು ಸರಳ, ಕನ್ನಡ ಲಿಪಿ ನೋಡಲು ಅಂದ, ಕನ್ನಡ ಮಾತು ಕೇಳಲು ಚೆಂದ, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಕನ್ನಡ ಭಾಷೆಯ ನೆಲೆಗಟ್ಟಿನಲ್ಲಿ ಏಕೀಕರಣಗೊಂಡ ಕನ್ನಡನಾಡು ಅತ್ಯಂತ ವಿಶಿಷ್ಟವಾದ ಸಂಸ್ಕೃತಿ ಕಲೆ ಮತ್ತು ಪರಂಪರೆಗೆ ನೆಲೆಯಾಗಿದೆ ಕರುನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪುರ್ಣಗೊಂಡಿದ್ದು ಈ *ಸುವರ್ಣ ಸಂಭ್ರಮ*ಇಡೀ ನಾಡು ಅದ್ದೂರಿಯಾಗಿ ಆಚರಿಸುತ್ತಿದೆ ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಈ ಅವಧಿಯಲ್ಲಿ ಕರ್ನಾಟಕ ತನ್ನದೇ ಆದ ಅಚ್ಚಳಿಯದ ಛಾಪನ್ನು ಒತ್ತಿದೆ ಆಡಳಿತದಿಂದ ಹಿಡಿದು ಸಿನೆಮಾದ ತನಕ, ಕ್ರೀಡೆಯಿಂದ ಹಿಡಿದು ಸಾಹಿತ್ಯದವರೆಗೆ, ವಿಜ್ಞಾನದಿಂದಹಿಡಿದು ಕೈಗಾರಿಕೆಯ ತನಕ ಕನ್ನಡನಾಡು ಇಡೀ ದೇಶ ಕಣ್ಣರಳಿಸುವ ಮಾದರಿ ಸಾಧನೆ ತೋರಿದೆ ಎಂದರು.
ಸಂಸ್ಥೆಯ ಉಪನ್ಯಾಸಕರು  ,ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.
ಶಿಕ್ಷಕಿ ವ್ಯೆಶಾಲಿ ಸ್ವಾಗತಿಸಿ,  ಶಿಕ್ಷಕಿ ಬೇಬಿ ವಂದಿಸಿ ವಿದ್ಯಾರ್ಥಿ ನಂದಶ್ರೀ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!