spot_img
Thursday, December 5, 2024
spot_img

ಭಂಡಾರ್ಕಾರ್ಸ್‌ ಕಾಲೇಜು : 49ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ | ʼಡಾ. ಹೆಚ್.‌ ಶಾಂತಾರಾಮ್‌ ಯಕ್ಷಗಾನ ಪುರಸ್ಕಾರʼ ಕಾರ್ಯಕ್ರಮ

ಜನಪ್ರತಿನಿಧಿ (ಕುಂದಾಪುರ) : ಮಹಾನ್ ವ್ಯಕ್ತಿತ್ವ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕೊಡಮಾಡುವ ಪುರಸ್ಕಾರ ಲಭ್ಯವಾಗಿರುವುದು ನನ್ನ ಅದೃಷ್ಟ ಎಂದು ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಚಂದ್ರಕಾಂತ್‌ ರಾವ್‌, ಮೂಡುಬೆಳ್ಳೆ ಹೇಳಿದರು.

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ್ ಹಾಗೂ ಕಾಲೇಜಿನ ಆವರ್ತ ಯಕ್ಷಗಾನ ಸಂಘದ ಸಂಯುಕ್ತ ಆಶ್ರಯದಲ್ಲಿ 49ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ ಕಾರ್ಯಕ್ರಮದಲ್ಲಿ ‘ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ’ವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಪುರಸ್ಕಾರಕ್ಕೆ ನನ್ನ ಆಯ್ಕೆ ನಿಮಿತ್ತ ಮಾತ್ರ. ಯಕ್ಷಗಾನಕ್ಕೆ ನಾನು ಪ್ರವೇಶಿಸುವಲ್ಲಿ ಮಹತ್ವದ ಪಾತ್ರವಹಿಸಿದ ಎಲ್ಲಾ ನನ್ನ ಗುರುಗಳಿಗೆ ಈ ಪುರಸ್ಕಾರವನ್ನು ಅರ್ಪಿಸುತ್ತೇನೆ. ಯಕ್ಷಗಾನವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಅನಿವಾರ್ಯತೆ ನನ್ನ ಬದುಕಿನಲ್ಲಿ ಬಂದಿರಲಿಲ್ಲ. ಆದರೇ, ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸುವ ಯೋಗ ನನಗೆ ದೊರಕಿತು. ಪುರಸ್ಕಾರಕ್ಕೆ ಧಕ್ಕೆ ಬಾರದಂತೆ ರಂಗದಲ್ಲಿ ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಹೆಚ್. ಶಾಂತಾರಾಮ್, ಪುರಸ್ಕಾರ ನೀಡಿ ಮಾತನಾಡಿ, ಇದು ಪ್ರೇರಕ ಸಾಧನೆ ಮಾಡಿರುವ ಉದಯೋನ್ಮುಖ ಯಕ್ಷಗಾನ ಪ್ರತಿಭೆಗಳಿಗೆ ಕೊಡುವ ಪುರಸ್ಕಾರವಷ್ಟೇ, ಇದು ಪ್ರಶಸ್ತಿ ಅಲ್ಲ. ಪುರಸ್ಕೃತರು ಯಕ್ಷಗಾನದ ಭಾಗವತಿಕೆಯಲ್ಲಿ ಇನ್ನಷ್ಟು ಪ್ರೌಢಿಮೆ ವೃದ್ಧಿಸಿಕೊಂಡು ಯಕ್ಷಗಾನ ರಂಗದಲ್ಲಿ ಹೆಸರು ಚಿರವಾಗಿ ಉಳಿಯುವ ಮುಖವಾಗಿ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ಸಾಲಿಗ್ರಾಮ ಮೇಳದ ಯಜಮಾನರು ಕಿಶನ್ ಹೆಗ್ಡೆ ಪಳ್ಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಯಕ್ಷಗಾನವನ್ನು ಕುಲಗೆಡಿಸುವುದಕ್ಕೆ ಕೆಲವು ಮಂದಿ ತಯಾರಾಗಿರುವುದರ ನಡುವೆ ಸ್ನೇಹಮಯಿ, ಸಭ್ಯ ಭಾಗವತರಾದ ಚಂದ್ರಕಾಂತ ರಾವ್ ಮೂಡುಬೆಳ್ಳೆ ಭರವಸೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ದೊರಕಿರುವುದು ಅತ್ಯಂತ ಸೂಕ್ತ ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ವಿಶ್ವಸ್ಥರಾದ ಶಾಂತಾರಾಮ ಪ್ರಭು, ಸದಸ್ಯರಾದ ಯು.ಎಸ್ ಶೆಣೈ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಪ್ರೊ. ಸತ್ಯನಾರಾಯಣ, ಆವರ್ತ ಯಕ್ಷಗಾನ ಸಂಘದ ಸಂಚಾಲಕ ಪ್ರೊ. ಶಶಾಂಕ್ ಪಟೇಲ್ ಕೆಳಮನೆ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್  ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರ ಆಚಾರ್ಯ ಪ್ರಸ್ತಾವಿಸಿ, ಸ್ವಾಗತಿಸಿದರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ. ಗೊಂಡ ಧನ್ಯವಾದ ಸಮರ್ಪಿಸಿದರು. ರೇಡಿಯೋ ಕುಂದಾಪ್ರದ ಸಂಚಾಲಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಚಂದ್ರಕಾಂತ ರಾವ್, ಮೂಡುಬೆಳ್ಳೆ ಅವರ ಭಾಗವತಿಕೆಯಲ್ಲಿ, ಎನ್.ಜಿ ಹೆಗ್ಡೆ ಹಾಗೂ ರಾಮಕೃಷ್ಣ ಮಂದಾರ್ತಿ ಅವರ ಹಿಮ್ಮೇಳನದಲ್ಲಿ ಮತ್ತು ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು ಮತ್ತು ಪವನ್ ಕಿರಣಕೆರೆ ಅವರಿಂದ ‘ಶರಸೇತು ಬಂಧ’ ಯಕ್ಷಗಾನ ತಾಳಮದ್ದಲೆ ನಡೆಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!