spot_img
Monday, March 16, 2026
spot_img

ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ NSS ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಉದ್ಘಾಟನೆ

ಮಂಗಳೂರಿನ ವಿಶ್ವವಿದ್ಯಾನಿಲಯದ ಜೊತೆಗೂಡಿ ಇಸಿಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ 2026-2027 ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ ಬಾಲಕೃಷ್ಣ ಶೆಟ್ಟಿ ಟ್ರಸ್ಟ್ ಇಸಿಆರ್ ಗ್ರೂಪ್ ಇನ್ಸ್ಟಿಟ್ಯೂಟ್ ಇವರು ವಹಿಸಿದ್ದರು. ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತುಳಸಿ ವಿದ್ಯಾಮಂದಿರದ ಸಂಚಾಲಕರಾದ ಕೃಷ್ಣರಾಯ ಶಾನುಭಾಗ್,ಶಾಲೆಯ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್, ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಜನರಲ್ ಮೇನೇಜರ್ ಆದ ಡಾ. ಹರಿ ಮೆನನ್, ನಿತ್ಯಾನಂದ ಶೆಟ್ಟಿ, ಅಸಿಸ್ಟೆಂಟ್ ಟೀಚರ್ ರಾಮ್ಸನ್ ಗವರ್ನಮೆಂಟ್ ಸ್ಕೂಲ್ ಕಂಡ್ಲೂರು, ಪ್ರೊ.ಟ್ರೆಸಾ ಒಸೆಫ್, ಪ್ರೊಫೆಸರ್ ಇಸಿಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್, ಡಾ. ಅಶೋಕ್ ಜೋಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮತ್ತು ಉಪಪ್ರಾಂಶುಪಾಲರು ಉಪಸ್ಥಿತರಿದ್ದರು.
ಹೆಚ್ ಬಾಲಕೃಷ್ಣ ಶೆಟ್ಟಿಯವರು NSS ನ ಮಹತ್ವದ ಕುರಿತು ಮಾಹಿತಿಯನ್ನು ತಿಳಿಸಿಕೊಟ್ಟರು. ಹಾಗೂ ತುಳಸಿ ಎಜ್ಯುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಕೃಷ್ಣರಾಯ ಶಾನುಬಾಗ್ ತಮ್ಮ ಜೀವನದ ಸವಿ ನೆನಪುಗಳನ್ನು ಹಾಗೂ NSS ನಿಂದ ಆಗುವ ಸುಂದರ ಅನುಭವಗಳನ್ನು ವಿವರಿಸಿದರು. ನಿತ್ಯಾನಂದ ಶೆಟ್ಟಿ ಹಾಗೂ ತುಳಸಿ ವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕಿಯಾದ ರೇಷ್ಮ ಪ್ರದೀಪ್ ರವರು ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದ ನಿರೂಪಣೆಯನ್ನು NSS ವಿದ್ಯಾರ್ಥಿಯಾದ ಗಾಯತ್ರಿಯವರು ನಡೆಸಿಕೊಟ್ಟರು. ಹಾಗೂ ಶಿಕ್ಷಕರಾದ ಸುಷ್ಮಾ ಹಾಗೂ ಸ್ಮಿತಾರವರು ಕಾರ್ಯಕ್ರಮದ ಸ್ವಾಗತ ಮತ್ತು ಧನ್ಯವಾದಗಳನ್ನು ನಿರ್ವಹಿಸಿದರು. ಅತಿಥಿಗಳೆಲ್ಲರಿಗೂ NSS ನ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!