spot_img
Tuesday, March 17, 2026
spot_img

ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಗೊಂದಲ: ವೀಕ್ಷಕರ ಆಗಮನ

ಕುಂದಾಪುರ, ಮಾ.17: ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು ಈಗಾಗಲೇ ನೇಮಕಗೊಂಡ ಅಧ್ಯಕ್ಷರ ಆಯ್ಕೆಗೆ ಪಕ್ಷದ ವತಿಯಿಂದ ತಡೆ ಬಂದಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮುಕ್ತಾಯಗೊಂಡಿದ್ದು ಹೊಸ ಅಧ್ಯಕ್ಷರಾಗಿ ವಿಕಾಸ ಹೆಗ್ಡೆ ಕೋಟ ಬ್ಲಾಕ್ ಅಧ್ಯಕ್ಷರಾಗಿ ತಿಮ್ಮ ಪೂಜಾರಿ ಆಯ್ಕೆಯಾಗಿದ್ದಾರೆ.

ಆದರೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದು ಕೋಟ ಬ್ಲಾಕ್ ಅಧ್ಯಕ್ಷರಾಗಿ ಶಂಕರ ಕುಂದರ್ ಕಾರ್ಯನಿರ್ವಹಿಸುತ್ತಿದ್ದರು. ಇವರ ಅಧ್ಯಕ್ಷವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗಿತ್ತು.
ಈ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆಬ್ರವರಿ ಒಂಬತ್ತರಂದು ನಡೆದಿತ್ತು. ಆದರೆ ಅದನ್ನು ಮಾರ್ಚ್ 4ರಂದು ಘೋಷಣೆ ಮಾಡಲಾಗಿತ್ತು. ಆದರೆ ಮಾರ್ಚ್ 5ರಂದು ತಡೆ ಬಂದಿತ್ತು. ಇದು ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು.

ಈ ಆಯ್ಕೆ ಕಗ್ಗಂಟು ರಾಜ್ಯ ಕಾಂಗ್ರೆಸ್‌ವರೆಗೂ ಹೋಗಿತ್ತು. ಕೊನೆಗೆ ಪಕ್ಷ ವೀಕ್ಷಕರ ನೇಮಕ ಮಾಡಿತ್ತು. ಮಾರ್ಚ್ ೧೭ರಂದು ಸಮಸ್ಯೆ ಬಗೆಹರಿಸಲು ವೀಕ್ಷಕರ ನೇಮಕ ಮಾಡಲಾಗಿತ್ತು. ವೀಕ್ಷಕರಾಗಿ ರಾಜ್ಯ ಕಾಂಗ್ರೆಸ್ ಮುಖಂಡರು, ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ವಿ.ಆರ್ ಸುದರ್ಶನ್ ಮತ್ತು ಪಕ್ಷದ ಮುಖಂಡರಾದ ನಾರಾಯಣ ಸ್ವಾಮಿ ಆಗಮಿಸಿದ್ದಾರೆ. ಅವರು ಪಕ್ಷದ ಮುಖಂಡರ ಅಬಿಪ್ರಾಯ ಸಂಗ್ರಹಿಸಿ ಕಾರ್ಯಾಧ್ಯಕ್ಷರಿಗೆ ನೀಡಲಿದ್ದಾರೆ.

ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ವೀಕ್ಷಕರು ಪಕ್ಷದ ಮುಖಂಡರ ಸಭೆ ಕರೆದು ವಿಸ್ತಾರವಾಗಿ ಚರ್ಚಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲಿ ಪ್ರಥಮ ಎನ್ನುವಂತೆ ಬ್ಲಾಕ್ ಕಾಂಗ್ರೆಸ್ ಆಯ್ಕೆ ಪ್ರಕ್ರಿಯೆಗೆ ವೀಕ್ಷಕರ ಆಗಮನವಾಗಿದೆ.

ಇದೀಗ ಪ್ರಸ್ತುತ ಅಧ್ಯಕ್ಷರಾಗಿರುವ ಹರಿಪ್ರಸಾದ್ ಶೆಟ್ಟಿ ಅವರು ಮುಂದುವರಿಯುತ್ತಾರಾ ಅಥವಾ ಆಯ್ಕೆಗೊಂಡ ವಿಕಾಸ ಹೆಗ್ಡೆ ಮುಂದುವರಿಯುತ್ತಾರಾ? ಅಥವಾ ನೂತನ ಅಧ್ಯಕ್ಷರ ಆಯ್ಕೆ ಆಗುತ್ತದಾ ಎಂಬುದು ಕಾದು ನೋಡಬೇಕಾಗಿದೆ. ಕುಂದಾಪುರ ಬ್ಲಾಕ್ ಕಾಂಗ್ರೆಸ್‌ನಲ್ಲಿ ಇತ್ತೀಚಿಗೆ ಎರಡು ಬಣಗಳು ಉಂಟಾಗಿದ್ದನ್ನು ಗುರುತಿಸಬಹುದು.

ಕಳೆದ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲೂ ಗೊಂದಲ ಉಂಟಾಗಿತ್ತು. ಪ್ರಸ್ತುತ ಅಧ್ಯಕ್ಷರಾದ ಅಶೋಕ ಕುಮಾರ ಕೊಡವೂರು ಬದಲಾಯಿಸಿ ಕಿಶನ್ ಹೆಗ್ಡೆ ಕೊಳ್ಕೆಬೈಲು ನೇಮಕ ಮಾಡಲಾಗಿತ್ತು. ಅದಕ್ಕೂ ತಡೆ ಬಂದಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!