spot_img
Tuesday, March 31, 2026
spot_img

ಕೋಟೇಶ್ವರ ಸಂತ ಅಂತೋನಿ ಚರ್ಚ್‌ನಲ್ಲಿ ದೀಪಾವಳಿ ಹಬ್ಬದ ಆಚರಣೆ

ಕುಂದಾಪುರ, ನ. ೧: ಕೋಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ಸರ್ವಧರ್ಮ ಸಮಿತಿಯ ನೇತೃತ್ವದಲ್ಲಿ ಧರ್ಮಕೇಂದ್ರದ ಸಮುದಾಯ ಮತ್ತು ಆಸುಪಾಸಿನ ಹಿಂದೂ ಬಾಂಧವರೊಂದಿಗೆ ಕೂಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಕೇಂದ್ರದ ಧರ್ಮಗುರು ಫಾ. ಪ್ರವೀಣ್ ಪಿಂಟೋ ‘ದೀಪಾವಳಿ ಬೆಳಕಿನ ಹಬ್ಬ, ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯತನವನ್ನು ಸಂಕೇತಿಸುತ್ತದೆ, ಅಂದರೆ ನಮ್ಮ ಹೃದಯದೊಳೊಗೆ ಇರುವ ಕತ್ತಲೆ ಮಾಯವಾಗಿ ಬೆಳಕಾಗಬೇಕು, ಈ ದೀಪಾವಳಿ ನಮ್ಮೆಲ್ಲರ ಪ್ರೀತಿ ಬಾಂಧವ್ಯದ ಹಬ್ಬವಾಗಲಿ’ ಎಂದು ಆತ್ಮೀಯ ಸಂದೇಶ ನೀಡಿ ಆಶೀರ್ವದಿಸಿ ಹೃತ್ಪೂರ್ವಕ ಶುಭಾಶಯಗಳನ್ನು ಹಂಚಿಕೊಂಡರು.

ಚರ್ಚ್‌ನ ಗಾಯನ ಮಂಡಳಿ ಸದಸ್ಯರು ಹಾಡಿನ ಮೂಲಕ ಉತ್ಸಾಹವನ್ನು ಹೆಚ್ಚಿಸಿದರು, ಸಂಭ್ರಮ ಮತ್ತು ಪ್ರತಿಬಿಂಬದ ವಾತಾವರಣವನ್ನು ಸೃಷ್ಟಿಸಿ ಆಚರಣೆಯ ಭಾಗವಾಗಿ, ಪಾಲ್ಗೊಂಡವರು ಒಟ್ಟಿಗೆ ದೀಪಗಳನ್ನು ಬೆಳಗಿಸಿದರು.

ಕಾರ್ಯಕ್ರಮದಲ್ಲಿ ಸೇವಾದರ್ಶಿ ವಂ| ಪ್ರೀತೇಶ್ ಕ್ರಾಸ್ತಾ, ಪಾಲನ ಮಂಡಳಿ ಉಪಾಧ್ಯಕ್ಷ ಸರ್ವಧರ್ಮ ಸಮಿತಿಯ ಸಂಯೋಜಕ ತಿಯೋದರ್ ಡಿಮೆಲ್ಲೊ, ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಜೆ.ಡಿ’ಕೋಸ್ತಾ, ಪಾಲನ ಮಂಡಳಿ ಸದಸ್ಯರು, ಉದ್ಯಮಿ ಉಲ್ಲಾಸ್ ಕೋಟೇಶ್ವರ್, ರಾಧಾ ಕೃಷ್ಣ, ರಾಘವೇಂದ್ರ, ರವಿ, ಚರಣ್, ರಮೇಶ್ ಉಪಸ್ಥಿತರಿದ್ದರು

ಪಾಲನಮಂಡಳಿ ಕಾರ್ಯದರ್ಶಿ ಮರಿಯಾ ಮಸ್ಕರೇನಸ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಈ ಅಂತರ್-ಧರ್ಮೀಯ ಆಚರಣೆಯ, ಈ ಕಾರ್ಯಕ್ರಮವು ಧರ್ಮಕೇಂದ್ರದ ವಿವಿಧ ಸದಸ್ಯರನ್ನು ಮತ್ತು ನೆರೆಯ ಸಮುದಾಯಗಳನ್ನು ಒಟ್ಟುಗೂಡಿಸಿತು, ವಿವಿಧ ಧರ್ಮಗಳ ನಡುವೆ ಸಾಮರಸ್ಯ ಮತ್ತು ಏಕತೆಯ ಮನೋಭಾವ ಸಾರಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!