spot_img
Tuesday, March 31, 2026
spot_img

ಪ್ರದೀಪ್ ಕುಮಾರ್ ಬಸ್ರೂರು ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ, ಅ.31 (ಜನಪ್ರತಿನಿಧಿ ವಾರ್ತೆ) ಇತಿಹಾಸ ಆಸಕ್ತ, ಶಾಸನಗಳ ಶೋಧ, ಅಧ್ಯಯನ, ಸಂರಕ್ಷಣೆ, ಸ್ವಾತಂತ್ರ್ಯ ಹೋರಾಟಗಾರರ ಮನೆ ಗುರುತಿಸುವ ಕಾರ್ಯ, ಸ್ವರಾಜ್ಯ-75 ಕಾರ್ಯಕ್ರಮದ ಪ್ರಮುಖರಾದ ಪ್ರದೀಪ್ ಕುಮಾರ ಬಸ್ರೂರು ಇವರಿಗೆ ೨೦೨೪ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರದೀಪ್ ಕುಮಾರ್ ಅವರು ಪ್ರಾಚ್ಯವಸ್ತು, ಇತಿಹಾಸದ ಆಸಕ್ತರು. ಇತಿಹಾಸದ ಕುರುಹುಗಳಾದ ಶಾಸನಗಳನ್ನು ಪತ್ತೆಹಚ್ಚಿ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ನೂರಾರು ಶಾಸನಗಳನ್ನು ಪತ್ತೆಹಚ್ಚಿ ಅದರ ಉಲ್ಲೇಖವನ್ನು ಸಮಾಜದ ಮುಂದಿಡುವ ಮಹತ್ಕಾರ್ಯ ಮಾಡಿದ್ದಾರೆ. ನೆಲದಡಿ ಭೂಗತವಾಗಿ ಹೋದ ಶಾಸನಗಳನ್ನು ಇತಿಹಾಸ ತಜ್ಞರ ಜೊತೆಗೂಡಿ ಪತ್ತೆ ಹಚ್ಚಿ ಅದರ ಬಗ್ಗೆ ಅಧ್ಯಯನ ಮಾಡಿದ್ದಾರೆ. ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಮನೆ ಭೇಟಿ ಮಾಡಿ ಪ್ರಮುಖವಾಗಿ ಉಡುಪಿ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯ ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಪುಸ್ತಕವನ್ನು ಕೂಡಾ ಪ್ರಕಟಿಸಿದ್ದಾರೆ.

ಸಮಾಜಸೇವಾ ಕೈಂಕರ್ಯದಲ್ಲೂ ಗುರುತಿಸಿಕೊಂಡಿರುವ ಇವರು ದೇವಸ್ಥಾನ ವಠಾರ ಸ್ವಚ್ಛತೆ, ಸೇರಿದಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!