spot_img
Tuesday, March 31, 2026
spot_img

ಕುಂದಾಪುರದಲ್ಲಿ ಅದ್ದೂರಿ ಕನ್ನಡ ರಥೋತ್ಸವ ಪುರ ಮೆರವಣಿಗೆ | ನಾಳೆಯಿಂದ ʼಕನ್ನಡ ಹಬ್ಬʼ ಸಪ್ತಾಹ.

ಜನಪ್ರತಿನಿಧಿ (ಕುಂದಾಪುರ) : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಕನ್ನಡ ರಥೋತ್ಸವ ಪುರ ಮೆರವಣಿಗೆ ನಡೆಯಿತು.

ನವೆಂಬರ್ 1 ರಿಂದ 7 ರ ತನಕ ನಡೆಯುವ ʼಕನ್ನಡ ಹಬ್ಬʼ ರಾಜ್ಯೋತ್ಸವ ಸಪ್ತಾಹದ ಅಂಗವಾಗಿ ಇಂದು(ಗುರುವಾರ) ʼಕನ್ನಡ ರಥೋತ್ಸವʼ ಪುರ ಮೆರವಣಿಗೆ ನಡೆಯಿತು.

ಕನ್ನಡ ರಥೋತ್ಸವಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಕನ್ನಡ ಕಟ್ಟುವ ಕೆಲಸ ಮಾಡುವ ಮನಸ್ಸನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಕನ್ನಡ ರಾಜ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಕನ್ನಡ ಈಗ ವಿಶ್ವ ಭಾಷೆಯಾಗಿದೆ. ಕನ್ನಡ ಎಲ್ಲೆಡೆ ಅನುರಣಿಸುವಂತೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ʼಕನ್ನಡ ಹಬ್ಬʼ ಸಪ್ತಾಹ ಕಾರ್ಯಕ್ರಮವನ್ನು ಕಲಾಕ್ಷೇತ್ರ ಕುಂದಾಪುರ ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಮತ್ತು ಇದೊಂದು ಮಾದರಿಯ ಕಾರ್ಯಕ್ರಮ ಎಂದರು.

ಮಾಜಿ ಶಾಸಕ ಹಾಗೂ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಶುಭಸಂಶನೆಗೈದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಸುನೀಲ್‌ ಕುಮಾರ್‌ ಕಾರ್ಕಳ, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ ಶೆಟ್ಟಿ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯ ಡಾ. ಧನಜಂಜಯ್ ಸರ್ಜಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಲಾಲಾಜಿ. ಆರ್‌. ಮೆಂಡನ್, ಮಾಜಿ ಶಾಸಕ ರಘುಪತಿ ಭಟ್‌, ಕುಂದಾಪುರ ಪುರಭೆಉ ಅಧ್ಯಕ್ಷ ಮೋಹನದಾಸ್‌ ಶೆಣೈ, ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್‌ ಪುತ್ರನ್‌‌, ಉದಯ್‌ ಕುಮಾರ್‌ ಶೆಟ್ಟಿ, ರಾಜೇಶ್‌ ಕಾವೇರಿ ಸೇರಿ ಹಲವರು ಉಪಸ್ಥಿತರಿದ್ದರು.

ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ಕುಂದಾಪುರದ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಸ್ವಾಗತಿಸಿ ಪ್ರಸ್ತಾವಿಸಿದರು. ಕಸಾಪ ತಾಲೂಕು ಘಟಕದ ದಿನಕರ ಆರ್‌ ಶೆಟ್ಟಿ ಹಾಗೂ ಶಿಕ್ಷಕ ಚಂದ್ರಶೇಖರ್‌ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭವ್ಯ ಪುರ ಮೆರವಣಿಗೆ ನಡೆಯಿತು.

ನಾಳೆ( ನವೆಂಬರ್ 1)ಯಿಂದ ನವೆಂಬರ್ 7 ರ ತನಕ ರಾಜ್ಯೋತ್ಸವದ ಪ್ರಯುಕ್ತ ʼಕನ್ನಡ ಹಬ್ಬʼ  ಸಪ್ತಾಹ ಕಾರ್ಯಕ್ರಮ ನಡೆಯಲಿದೆ.


ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!