spot_img
Tuesday, March 31, 2026
spot_img

ಉದಯಕುಮಾರ್ ಹಟ್ಟಿಯಂಗಡಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ, ಅ.31 (ಜನಪ್ರತಿನಿಧಿ ವಾರ್ತೆ) ಮೊಗವೀರ ಮಹಾಜನ ಸೇವಾ ಸಂಘದ ಕುಂದಾಪುರ ಶಾಖಾಧ್ಯಕ್ಷ, ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ ಅವರಿಗೆ ೨೦೨೪ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಉದಯ ಕುಮಾರ್ ಹಟ್ಟಿಯಂಗಡಿಯವರು ಕಾಲೇಜು ಶಿಕ್ಷಣದ ಬಳಿಕ ಸಮಾಜಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಯುವಶಕ್ತಿಗಳನ್ನು ಸಂಘಟಿಸುತ್ತಾ, ಯುವಕ ಮಂಡಳ, ಯುವತಿ ಮಂಡಳಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಯುವಜನ ಮೇಳ ಮುಂತಾದ ಯುವ ಜನಾಂಗವನ್ನು ಸಂಘಟಿಸುವ ಕಾರ್ಯಕ್ರಮಗಳಿಗೆ ಉತ್ತಮ ನಾಯಕತ್ವ ನೀಡಿದವರು. ಸಹಕಾರ ಕ್ಷೇತ್ರಕ್ಕೆ ದುಮಿಕಿದ ಇವರು ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘದ ಸದಸ್ಯರ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಕ್ಕೆ ಪ್ರತಿಷ್ಟಿತ ಎನ್.ಸಿ.ಡಿ.ಸಿ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಘ ಪ್ರಶಸ್ತಿ ಲಭಿಸುವಲ್ಲಿ ಇವರ ಪ್ರಾಮಾಣಿಕ ಶ್ರಮವಿದೆ. ಸಹಕಾರ ಕ್ಷೇತ್ರದ ವೃತ್ತಿಯ ಒತ್ತಡದ ನಡುವೆಯೂ ಸಮಾಜಸೇವೆಯಲ್ಲಿ ಸದಾ ಮಾನವೀಯ ಕರೆಗಳಿಗೆ ಸ್ಪಂದಿಸುತ್ತಾ ಬಂದವರು. ನಾಡೋಜ ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೆಗ್ಗುರುತು ಮೂಡಿಸಿದ್ದಾರೆ. ಹಲವಾರು ಯುವಕ ಮಂಡಲಗಳ ಸ್ಥಾಪನೆ, ಬೆಳವಣಿಗೆಯಲ್ಲಿ ನಿರಂತರ ಮಾರ್ಗದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಇವರು ಸ್ಥಾಪಿಸಿದ ಹಲವು ಯುವಕ, ಯುವತಿ ಮಂಡಲಗಳು ಈಗಾಗಲೇ ರಜತ ಮಹೋತ್ಸವ ಆಚರಿಸಿಕೊಂಡಿವೆ. ರಕ್ತದಾನ ಶಿಬಿರಗಳಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಇವರು, ಧಾರ್ಮಿಕ ಕ್ಷೇತ್ರದಲ್ಲಿ ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ. ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥರಾಗಿ ಹಲವಾರು ಮಹತ್ವಕಾಂಕ್ಷಿ, ಕ್ರಾಂತಿಕಾರ ಯೋಜನೆಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!