spot_img
Wednesday, April 1, 2026
spot_img

ಕೃಷಿಕ ಮುಂಬಾರು ದಿನಕರ ಶೆಟ್ಟಿಯವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ: ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಗತಿಪರ ಕೃಷಿಕ ದಿನಕರ ಶೆಟ್ಟಿ ಮುಂಬಾರು ಅವರಿಗೆ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ದಿನಕರ ಶೆಟ್ಟಿಯವರು ಕೃಷಿಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಅಡಿಕೆ, ತೆಂಗು, ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನರ್ಸರಿ ಉದ್ಯಮದಲ್ಲೂ ಕೂಡಾ ಹೆಸರು ಮಾಡಿದ್ದು ಗುಣಮಟ್ಟದ ನರ್ಸರಿ ಮೂಲಕ ಕೃಷಿಕರಿಗೆ ಉತ್ತಮ ಗುಣಮಟ್ಟದ ತೆಂಗು, ಅಡಿಕೆ ಸಸಿಗಳನ್ನು ಒದಗಿಸುತ್ತಿದ್ದಾರೆ.

ಎರಡು ದಶಕದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಬಸ್ ಸಂಪರ್ಕದ ವಿಷಯದಲ್ಲಿ ನಿರಂತರ ಹೋರಾಟ ನೀಡಿದ್ದಾರೆ. ಜನಪರವಾದ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಕೂಡಾ ತೊಡಗಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರು ಆಗಿದ್ದಾರೆ. ಇವರ ಕೃಷಿ, ಸಮಾಜಸೇವೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಲಭಿಸಿವೆ.

ಪ್ರಪುಲ್ಲಾ ಮತ್ತು ಜಗನ್ನಾಥ ಶೆಟ್ಟಿಯವರ 5ನೇ ಪುತ್ರರಾದ ಇವರು ಶಿಕ್ಷಣದ ಬಳಿಕ ಕೃಷಿಯಲ್ಲಿ ನಿರತರಾದವರು. ಪತ್ನಿ ಅಕ್ಷತಾ ಶೆಟ್ಟಿ, ಪುತ್ರಿಯರಾದ ದೀಕ್ಷಾ, ಯೋಗಪಟು ನಿರೀಕ್ಷಾ ಅವರೊಂದಿಗೆ ಕಾವ್ರಾಡಿಯ ಮುಂಬಾರುವಿನಲ್ಲಿ ನೆಲೆಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!