Thursday, November 14, 2024

ನ.3ರಂದು ಮಾರಣಕಟ್ಟೆಯಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ: ‘ಜನ್ಸಾಲೆ ಯಕ್ಷಪರ್ವ 2024’

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ, ಉಡುಪಿ ಜಲ್ಲೆ ಇದರ 2ನೇ ವರ್ಷದ ಜನ್ಸಾಲೆ ಯಕ್ಷಪರ್ವ 2024 ಪ್ರಶಸ್ತಿ ಪ್ರದಾನ, ಕಲಾ ಗೌರವ, ಆರ್ಥಿಕ ನೆರವು, ಗೌರವ ಸನ್ಮಾನ, ಯಕ್ಷಗಾನ ಮಾರಣಕಟ್ಟೆಯ ಶ್ರೀ ಮೂಕಾಂಬಿಕಾ ಕಲ್ಯಾಣ ಮಂಟಪದಲ್ಲಿ ನವಂಬರ್ 3 ಭಾನುವಾರ ಮಧ್ಯಾಹ್ನನ 2-30ರಿಂದ ನಡೆಯಲಿದೆ.

ಸಭಾ ಕಾರ್ಯಕ್ರಮ 4.30ಕ್ಕೆ ನಡೆಯಲಿದೆ. ಯಕ್ಷ ರಾಘವ ಪ್ರಶಸ್ತಿ 2024ನ್ನು ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು. ಡಾ|ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು ಇವರಿಗೆ ಕಲಾ ಕಾಮಧೇನು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷ ಸಂಘಟನಾ ಚತುರ ಪ್ರಶಸ್ತಿಯನ್ನು ಸದಾನಂದ ಆಚಾರ್ಯ ನೂರಾಳ್ ಬೆಟ್ಟು, ಹಾಗೂ ಸೂರ್ಯನಾರಾಯಣ ಭಟ್ ಸಿದ್ಧಾಪುರ ಗುಂಜುಗೂಡು ಇವರಿಗೆ ಪ್ರದಾನಿಸಲಾಗುವುದು.

ಯಕ್ಷ ರಾಘವ ಕಲಾ ಗೌರವವನ್ನು ಬಡಗುತಿಟ್ಟಿನ ಶೇಖರ ಶೆಟ್ಟಿ ಯಳಬೇರು, ಕೋಟ ಶಿವಾನಂದ, ಕ್ಯಾದಗಿ ಮಹಾಬಲೇಶ್ವರ ಭಟ್, ತೆಂಕುತಿಟ್ಟಿನ ಪ್ರಜ್ವಲ್ ಗುರುವಾಯನಕೆರೆ, ರಾಜೇಂದ್ರ ಕೃಷ್ಣ (ಚಕ್ರತಾಳ) ಇವರಿಗೆ ಪ್ರದಾನ ಮಾಡಲಾಗುವುದು.

ಪ್ರತಿಕ್ಷಾ ಪುರಸ್ಕಾರವನ್ನು ಯಕ್ಷ ಕಲಾವಿದರಾದ ವಿಶ್ವನಾಥ ಪೂಜಾರಿ ಹೆನ್ನಾಬೈಲು, ಬಸವ ಪೂಜಾರಿ ಚೌಕಳಮಕ್ಕಿ, ಪ್ರದೀಪ ನಾರ್ಕಳಿ, ಅಕ್ಷಯ ಆಚಾರ್ಯ ಬಿದ್ಕಲ್ ಕಟ್ಟೆ, ಪ್ರಜ್ವಲ್ ಮುಂಡಾಡಿ ಇವರಿಗೆ ನೀಡಲಾಗುವುದು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತರಾದ ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ಯಾಮ್ ಭಟ್, ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ ಇದರ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಸದಾಶಿವ ಶೆಟ್ಟಿ, ಕಮಲಶಿಲೆ ದೇವಸ್ಥಾನದ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಪೆರ್ಡೂರು ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟಿ, ಹುಬ್ಬಳ್ಳಿ ಬಂಟರ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ಸಿಟಿ ಲೈಪ್ ಹಾಸ್ಪಿಟಲಿಟಿ ಥಾಣೆ ಮುಂಬಯಿ ಇದರ ರತ್ನಾಕರ ಶೆಟ್ಟಿ ಮುಂಬಾಯಿ, ಮೆರಿಟ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈ ಲಿ ಮುಂಬಯಿ ಇದರ ಅಶೋಕ್ ಶೆಟ್ಟಿ ಬೆಳ್ಳಾಡಿ, ಗೋಲ್ಡನ್ ಹಾಸ್ಪಿಟಲಿಟಿ ಮುಂಬಯಿ ಇದರ ಮ್ಯಾನೆಜಿಂಗ್ ಡೈರೆಕ್ಟರ್ ಆದರ್ಶ ಶೆಟ್ಟಿ ಹಾಲಾಡಿ, ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು, ಕುಂದಾಪುರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಸಾಯಿಕೃಪಾ ಜ್ಯುವೆಲ್ಲರ್‍ಸ್ ಬಜಗೋಳಿ ಇದರ ಮಾಲಿಕರಾದ ಪ್ರಸಾದ ಸಿ.ಆಚಾರ್ಯ, ಯಕ್ಷನುಡಿಸಿರಿ ಬಳಗ ಸಿದ್ಧಾಪುರದ ಅಧ್ಯಕ್ಷ ಡಾ.ಜಗದೀಶ ಶೆಟ್ಟಿ, ಹೋಟೆಲ್ ಅಯೋಧ್ಯ ಗ್ರೂಫ್ ಬೆಂಗಳೂರು ಇದರ ನವೀನ್ ಶೆಟ್ಟಿ ಐರ್ಬೈಲು, ಚಿತ್ತೂರು ಗ್ರಾ.ಪಂ.ಅಧ್ಯಕ್ಷ ರವಿರಾಜ ಶೆಟ್ಟಿ, ಶ್ರೀ ಮೂಕಾಂಬಿಕಾ ಕಲ್ಯಾಣ ಮಂಟಪದ ಮಾಲೀಕರಾದ ಶ್ರೀನಿವಾಸ ಮಂಜ ಮಾರಣಕಟ್ಟೆ ಭಾಗವಹಿಸಲಿದ್ದಾರೆ.

ಪ್ರಸಂಗಕರ್ತ ಪ್ರೊ| ಪವನ್ ಕಿರಣಕೆರೆ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.

ಆರ್ಥಿಕ ನೆರವನ್ನು ಉಪ್ಪಿನಕುದ್ರು ಆನಂದ ರಾವ್, ನೀಲಾವರ ಕೇಶವ ಆಚಾರ್ಯ, ಅಣ್ಣಪ್ಪ ಗಾಣಿಗ ಬೀಜಮಕ್ಕಿ, ಮಂಜುನಾಥ ಕುಲಾಲ್ ಐರೋಡಿ,ಉದಯ ಕುಮಾರ್ ತಾರೆಕೊಡ್ಲು, ಗುರುಪ್ರಸಾದ ನಿರ್ಜಡ್ಡು ಇವರಿಗೆ ನೀಡಲಾಗುವುದು.

ಯಕ್ಷ ಪಂಚ ಸ್ವರ
ಬಡಗು-ತೆಂಕುತಿಟ್ಟಿನ ಪ್ರಸಿದ್ಧ ಹಿಮ್ಮೇಳ ಕಲಾವಿದರಿಂದ ಯಕ್ಷ ಪಂಚ ಸ್ವರ ನಡೆಯಲಿದೆ. ಬಡಗುತಿಟ್ಟಿನಲ್ಲಿ ಭಾಗವತರು ದಿನೇಶ ಶೆಟ್ಟಿ ಬೆಪ್ಡೆ, ಸೃಜನ್ ಗಣೇಶ್ ಹೆಗಡೆ ಸಾಗರ, ಶ್ರೀರಕ್ಷಾ ಹೆಗಡೆ, ಮದ್ದಳೆಯಲ್ಲಿ ಎನ್.ಜಿ ಹೆಗಡೆ, ಶಶಾಂಕ್ ಆಚಾರ್ಯ, ಚಂಡೆಯಲ್ಲಿ ಶ್ರೀಕಾಂತ್ ಶೆಟ್ಟಿ ಯಡಮೊಗೆ, ಶ್ರೀವತ್ಸ ಗುಡೆದಿಂಬ, ತೆಂಕು-ಭಾಗವತರು ಕಾವ್ಯಶ್ರೀ ಅಜೇರು, ಡಾ.ಪ್ರಖ್ಯಾತ್ ಶೆಟ್ಟಿ, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು ಸಾಥ್ ನೀಡಲಿದ್ದಾರೆ. ಸತೀಶ್ ಶೆಟ್ಟಿ ಮೂಡಬಗೆ ನಿರೂಪಣೆ ಮಾಡಲಿದ್ದಾರೆ.

ಯಕ್ಷಗಾನ
ಸಭಾ ಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ರತ್ನಾವತಿ ಹಾಗೂ ಕರ್ಣಪರ್ವ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಣೇಶ ಆಚಾರ್ಯ ಬಿಲ್ಲಾಡಿ, ಮದ್ದಳೆಯಲ್ಲಿ ಸುನೀಲ್ ಭಂಡಾರಿ, ಅಕ್ಷಯ ಆಚಾರ್ಯ ಬಿದ್ಕಲ್ ಕಟ್ಟೆ, ಚಂಡೆಯಲ್ಲಿ ಸುಜನ್ ಹಾಲಾಡಿ, ಪ್ರಜ್ವಲ್ ಮುಂಡಾಡಿ. ಮುಮ್ಮೇಳದಲ್ಲಿ ವಿದ್ಯಾಧರ ಜಲವಳ್ಳಿ, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರು, ಕೆ.ಜಿ ಕಾರ್ತಿಕ್, ಕಾರ್ತಿಕ್ ಕಣ್ಣಿ, ಪವನ್ ಸಾಣ್ಮನೆ, ಪುರಂದರ ಮೂಡ್ಕಣಿ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ವಿಶ್ವನಾಥ ಆಚಾರ್ಯ ತೊಂಬಟ್ಟು, ವಿಶ್ವನಾಥ ಹೆನ್ನಾಬೈಲು, ವಿನಯ ಬೆರೊಳ್ಳಿ, ರವೀಂದ್ರ ದೇವಾಡಿಗ ಕಮಲಶಿಲೆ ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಿಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!