Thursday, November 14, 2024

ಅಪ್ಪು ಮೂರನೇ ವರ್ಷದ ಪುಣ್ಯಸ್ಮರಣೆ | ಕುಟುಂಬಸ್ಥರಿಂದ ಸಮಾಧಿಗೆ ಪೂಜೆ | ಅಭಿಮಾನಿಗಳಿಂದ ನೇತ್ರದಾನ ಪ್ರತಿಜ್ಞೆ, ರಕ್ತದಾನ, ಅನ್ನದಾನ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ರತ್ನ, ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾ‌ರ್ ಅವರು ಕರುನಾಡನ್ನು, ಸಿನೆಮಾ ಕ್ಷೇತ್ರವನ್ನು, ಇಹಲೋಕವನ್ನು ಅಗಲಿ ಇಂದು(ಮಂಗಳವಾರ) ಮೂರು ವರ್ಷವಾಗಿದೆ. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ, ಅಣ್ಣ, ನಟ ರಾಘವೇಂದ್ರ ರಾಜ್‌ಕುಮಾರ್ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

2021ರ ಅ.29ರಂದು ಪುನೀತ್ ಅವರ ಅಕಾಲಿಕ ನಿಧನರಾಗಿದ್ದರು. ಪೂಜೆ ಸಲ್ಲಿಸಿದ ಬಳಿಕ ಅಶ್ವಿನಿ ಪುನೀತ್‌ ರಾಜ್‌ಕುಮಾ‌ರ್ ಹಾಗೂ ವಂದಿತಾ ಅವರು ಪುನೀತ್ ಅವರ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು.

ಪುನೀತ್‌ ಅಗಲಿ ಮೂರು ವರ್ಷಗಳು ಉರುಳಿದರೂ ಪುನೀತ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ. ನಿತ್ಯ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಸಮಾಧಿಯ ದರ್ಶನಕ್ಕಾಗಿ ಅಭಿಮಾನಿಗಳ ಸಮೂಹವೇ ಹರಿದು ಬಂದಿದೆ. ಸಾವಿರಾರು ಜನರು ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿ ತಮ್ಮ ಅಚ್ಚುಮೆಚ್ಚಿನ ನಟನನ್ನು ನೆನೆದು ಬಾವುಕರಾದರು.

ಪುಣ್ಯಭೂಮಿಯ ಆವರಣದಲ್ಲೇ ಅಭಿಮಾನಿಗಳು ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡರು. ಅನ್ನದಾನ ಮತ್ತು ರಕ್ತದಾನದ ಕಾರ್ಯಗಳೂ ನಡೆದವು. ಪುನೀತ್ ರಾಜ್‌ಕುಮಾ‌ರ್ ಹುಟ್ಟಿದ ವರ್ಷ, ನಿಧನರಾದ ವರ್ಷ ಹಾಗೂ 2024ರಲ್ಲಿ ಬಿಡುಗಡೆಗೊಂಡ ನಾಣ್ಯಗಳನ್ನು, ನೋಟ್‌ಗಳನ್ನು ಬಳಸಿಕೊಂಡು ರಚಿಸಿದ ಕಲಾಕೃತಿಗಳು ನೆರೆದವರನ್ನು ಸೆಳೆದವು.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್, ‘ಪ್ರತಿನಿತ್ಯವೂ ಅವನ ನೆನಪಿನಲ್ಲೇ ಇದ್ದೇವೆ. ದುಃಖ ಇನ್ನೂ ಇದೆ. ಜನಗಳ ಪ್ರೀತಿ ಕಮ್ಮಿ ಆಗುತ್ತಲೇ ಇಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಅವರ ಗುಣಗಳನ್ನು ನಿಮ್ಮಲ್ಲೂ ಮುಂದುವರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!