Thursday, November 14, 2024

ದೀಪಾವಳಿ ರಜೆಗೆ ಚಿಕ್ಕಮಗಳೂರು ಕಡೆಗೆ ಚಾರಣ, ಪ್ರವಾಸಕ್ಕೆ ಪ್ಲ್ಯಾನ್‌ ಮಾಡುತ್ತಿದ್ದೀರಾ ? ಹಾಗಾದ್ರೆ ಇಲ್ಲಿ ಗಮನಿಸಿ.

ಜನಪ್ರತಿನಿಧಿ (ಚಿಕ್ಕಮಗಳೂರು) : ಕನ್ನಡ ರಾಜ್ಯೋತ್ಸವ, ದೀಪಾವಳಿ, ವೀಕೆಂಡ್ಸ್‌ ಎಲ್ಲವೂ ಒಟ್ಟಿಗೆ ಬಂದಿದೆ. ಸಾಮಾನ್ಯವಾಗಿ ರಜೆಯ ಸಂದರ್ಭದಲ್ಲೇ, ಚಾರಣ, ಪ್ರವಾಸಕ್ಕೆ  ಪ್ಲ್ಯಾನ್‌ ಮಾಡುವುದು ಸಹಜ. ಆದರೇ, ಚಿಕ್ಕಮಗಳೂರು ಕಡೆಗೆ ಯಾರಾದರೂ ಪ್ರವಾಸ, ಚಾರಕ್ಕೆ ಯಾರಾದರೂ ಪ್ಲ್ಯಾನ್‌ ಮಾಡಿದ್ದರೇ, ಸ್ವಲ್ಪ ಈಕಡೆ ಗಮನವಹಿಸಿ.

ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿತಾಣಗಳಿಗೆ ಬುಧವಾರ ಬೆಳಗ್ಗೆಯಿಂದ ನವೆಂಬರ್ 1ರ ವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ, ಮಾಣಿಕಾಧಾರಾ, ಸೀತಾಳಯ್ಯನಗಿರಿ ಒಳಗೊಂಡು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬುಧವಾರ ಬೆಳಗ್ಗೆ 10 ಗಂಟೆಯಿಂದ ನವೆಂಬರ್ 1ರ ಬೆಳಗ್ಗೆ 10 ಗಂಟೆವರೆಗೆ ನಿರ್ಬಂಧ ಹೇರಲಾಗಿದೆ.

 ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವದ ಕಾರಣ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡಲಾಗುತ್ತದೆ. ಭಕ್ತರು ಮೂರು ಸಾವಿರ ಅಡಿ ಬೆಟ್ಟ ಹತ್ತಿ‌ ದೇವರ ದರ್ಶನ ಪಡೆಯುತ್ತಾರೆ. ಇದರ ಜೊತೆಗೆ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ‌ಸಂಜೆ 4 ಗಂಟೆಗೆ ಭಕ್ತರು ಬೆಟ್ಟ ಹತ್ತಲು ಅನುಮತಿ ನೀಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!