spot_img
Saturday, July 19, 2025
spot_img

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆ ಆಯ್ಕೆ.

ಜನಪ್ರತಿನಿಧಿ (ಉಡುಪಿ) : ಕಲಿಕೆಯೂ ಸೇರಿದಂತೆ ಯಕ್ಷಗಾನದ ಉಳಿವು, ಬೆಳವಣಿಗೆಗಾಗಿ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ, ರಜತ ಪರ್ವದ ಶುಭಾವಸರದಲ್ಲಿರುವ ಯಶಸ್ವೀ ಕಲಾವೃಂದ (ರಿ) ಕೊಮೆ, ತೆಕ್ಕಟ್ಟೆ  ಸಂಸ್ಥೆಯು, ಯಕ್ಷಗಾನ ಕಲಾರಂಗ ನೀಡುವ ಪ್ರತಿಷ್ಠಿತ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.

ಯಕ್ಷಗಾನ ಕಲಾರಂಗದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ಈ ವರ್ಷದಿಂದ ಪ್ರಶಸ್ತಿಯ ಮೊತ್ತವನ್ನು 1,00,000/- ರೂಪಾಯಿಗೆ ಹೆಚ್ಚಿಸಲಾಗಿದೆ. ಆರಂಭದಿಂದಲೂ ನಗದು ಪುರಸ್ಕಾರದ ಅರ್ಧಾಂಶವನ್ನು ಶ್ರೀಮಠ ಬರಿಸುತ್ತಾ ಬಂದಿದೆ. ಪ್ರಶಸ್ತಿ ಪ್ರದಾನ  ಸಮಾರಂಭ ನವೆಂಬರ್ 17, 2024 ಭಾನುವಾರ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‍ನಲ್ಲಿ ಜರಗಲಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!