spot_img
Wednesday, April 1, 2026
spot_img

ನಕಲಿ ಪರಶುರಾಮ : ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿರುವುದು ಸ್ಪಷ್ಟ | ಸಂಪೂರ್ಣ ತನಿಖೆಗೆ ಹೈಕೋರ್ಟ್‌ ಆದೇಶ

ಜನಪ್ರತಿನಿಧಿ (ಬೆಂಗಳೂರು) : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್‌ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಶಿಲ್ಪಿ ಹಾಗೂ ಕ್ರಿಷ್‌ ಆರ್ಟ್‌ ವಲ್ಡ್‌ ಮುಖ್ಯಸ್ಥ ಕೃಷ್ಣ ನಾಯಕ್‌ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿ ಆದೇಶಿಸಿದೆ.

ತೀರ್ಪಿನ ವೇಳೆ ನ್ಯಾಯಪೀಠ, ʼತರಾತುರಿಯಲ್ಲಿ ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆ ಮಾಡುವ ಉದ್ದೇಶದಿಂದ ಕಳಪೆ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆʼ ಎಂಬುವುದನ್ನು ಸೂಚ್ಯವಾಗಿ ಹೇಳಿದ್ದಲ್ಲದೇ, ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗಿದೆ ಎಂಬ ತನ್ನದೇ ಹಿಂದಿನ ಅಭಿಪ್ರಾಯವನ್ನು ಮತ್ತೆ ಪುನರುಚ್ಛರಿಸಿದೆ.

ಇದು ಐಪಿಸಿಯ ಸೆಕ್ಷನ್ 415 ಅಡಿಯಲ್ಲಿ ಬರುವ ವಂಚನೆಯಾಗಿದೆ. ಅರ್ಜಿದಾರ ಶಿಲ್ಪಿ ಕೃಷ್ಣ ನಾಯ್ಕ್‌ ಗೆ ಪಾವತಿಸಿರುವುದು ಉಡುಪಿ ನಿರ್ಮಿತಿ ಕೇಂದ್ರದ ಪ್ರಸ್ತಾವನೆ ನಿಧಿಯಾಗಲಿ ಅಥವಾ ದೂರುದಾರರ ಹಣವಾಗಲೀ ಅಲ್ಲ. ಅದು ಸಾರ್ವಜನಿಕರ ಹಣ. ಪ್ರತಿಮೆಗಾಗಿ ಶಿಲ್ಲಿ 1.80 ಕೋಟಿ ರೂ. ಅನ್ನು ಕೇಳಿದ್ದು, ನಿರ್ಮಿತಿ ಕೇಂದ್ರದ ಮೂಲಕ ಈಗಾಗಲೇ ಶಿಲ್ಪಿಗೆ 1.25 ಕೋಟಿ ಪಾವತಿಸಲಾಗಿದೆ. ಅರ್ಜಿದಾರರು ಕಳೆದ 12 ತಿಂಗಳಿಂದ ಪ್ರತಿಮೆಯನ್ನು ನವೀಕರಣಗೊಳಿಸಲು ಕೇಳುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ಅರ್ಜಿದಾರರು ಪ್ರಕರಣದ ತನಿಖೆಯಿಂದ ಮುಕ್ತರಾಗುವುದಕ್ಕೆ ಸಾಧ್ಯವಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

ಥೀಂ ಪಾರ್ಕ್‌ ಲೋಕಾರ್ಪಣೆಗೊಂಡು ಎಂಟು ತಿಂಗಳ ನಂತರ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಥೀಂ ಪಾರ್ಕ್‌ ನಲ್ಲಿದ್ದ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಯಿತು. ಆರೋಪ ಕೇಳಿಬರದೆ ಇದ್ದಿದ್ದರೇ ಪ್ರತಿಮೆಯ ನವೀಕರಣಗೊಳಿಸುವ ಸಬೂಬು ಹೇಳುತ್ತಿರಲಿಲ್ಲವೇನೋ. ಜನಸಾಮಾನ್ಯರಿಗೆ ಅಪಾಯ ಉಂಟಾಗದಿರುವುದು ಅದೃಷ್ವವೆ ಸರಿ.  ಶಿಲ್ಪಿಗೆ 1.25 ಕೋಟಿ ರೂಗಳಷ್ಟು ದೊಡ್ಡ ಮೊತ್ತ ವರ್ಗಾವಣೆಯಾಗಿದ್ದರೂ ಕಳಪೆ ಪ್ರತಿಮೆ ಮಾಡಿರುವುದು ಯಾಕೆ ? ಭಾಗಶಃ ಹಣ ವರ್ಗಾವಣೆಯಾಗಿದ್ದರೂ, ಪ್ರತಿಮೆ ನಿರ್ಮಾಣ ಮಾಡುವ ಹಂತದಲ್ಲಿ ಕಳಪೆ ಮಾಡಿರುವುದು ಯಾಕೆ ಎನ್ನುವುದು ತಿಳಿಯುತ್ತಿಲ್ಲ. ದೊಡ್ಡ ಮೊತ್ತವನ್ನು ಪಡೆದುಕೊಂಡು ಕಳಪೆ ಕಾಮಗಾರಿ ನಡೆಸಿ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿರುವುದು ನೇರವಾಗಿ ಕಾಣಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಇನ್ನು, ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಉಲ್ಲೇಖಿಸಿದ ಪ್ರಕರಣಕ್ಕೂ, ಈ ಪ್ರಕರಣಕ್ಕೂ ವ್ಯತ್ಯಾಸವಿದೆ ಎಂದು ಹೇಳಿ ಅದನ್ನು ನಿರಾಕರಿಸಿದ್ದಲ್ಲದೆ, ಎಲ್ಲಾ ದಾವೆಗಳನ್ನು ಪೀಠ ನಿಷ್ಕ್ರಿಯಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಯಾಗಬೇಕು. ತನಿಖೆಯಾದ ಬಳಿಕವೇ ಮುಂದಿನ ಕಾಮಗಾರಿ ನಡೆಸಬೇಕು ಎಂದು ಹೈಕೋರ್ಟ್‌ ನ್ಯಾಯಪೀಠ ಆದೇಶಿಸಿ ಶಿಲ್ಪಿ ಕೃಷ್ಣ ನಾಯ್ಕ್‌ ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್‌ ತೀರ್ಪು ಪರಶುರಾಮ ಮತ್ತು ಇತರ ಶಕ್ತಿಗಳ ಇರುವಿಕೆಯ ಪ್ರತೀಕ : ದಿವ್ಯ ನಾಯಕ್‌
ಪರಶುರಾಮ ಥೀಮ್ ಪಾರ್ಕ್ ಕುರಿತು ಹೈಕೋರ್ಟ್‌ನ ಇಂದಿನ ತೀರ್ಪು ಈ ತುಳುನಾಡು ಮಣ್ಣಿನಲ್ಲಿ ಪರಶುರಾಮ ಮತ್ತು ಇತರ ಶಕ್ತಿಗಳ ಇರುವಿಕೆಯ ಪ್ರತೀಕವಾಗಿದೆ. ಕೃಷ್ಣನಾಯ್ಕ್ ಕಂಚಿನ ಬದಲು ಕಳಪೆ ವಸ್ತುಗಳನ್ನು ಬಳಸಿ ದೇವರ ಹೆಸರಿನಲ್ಲಿ ಸಮಸ್ತ ತುಳುನಾಡಿನ ಜನತೆಗೆ ಮೋಸ ಮಾಡಿದ್ದಾರೆ. ಆತ ಒಬ್ಬ ಮೋಸಗಾರ ಎನ್ನುವುದನ್ನು   ಹೈಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಎಲ್ಲಾ  ದಾವೆಗಳನ್ನು ನಿಷ್ಕ್ರಿಯಗೊಳಿಸಿ   ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರವನ್ನು ನೀಡಲಾಗಿದೆ. ಪರಶುರಾಮರ ಅಸ್ಮಿತೆಯನ್ನು ಘನತೆಯನ್ನು ಘಾಸಿಗೊಳಿಸಲು ಪ್ರಯತ್ನ ನಡೆಸಿದವರ ವಿರುದ್ಧ ನಮ್ಮ ಹೋರಾಟ ನಿರಂತರ. ಇದು ಭ್ರಷ್ಟಾಚಾರದ ವಿರುದ್ಧ ನಡೆದ  ಸತ್ಯದ ಹೋರಾಟ.
-ದಿವ್ಯ ನಾಯಕ್‌

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿಯನ್ನು ಜನಪ್ರತಿನಿಧಿ ಪತ್ರಿಕೆ ಪ್ರಕಟಿಸಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!