spot_img
Wednesday, April 1, 2026
spot_img

ಬಗ್ವಾಡಿ: ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯೆ ಸುಧಾ ಮೊಗವೀರ ಅವರಿಗೆ ಗೌರವಾರ್ಪಣೆ

ಕುಂದಾಪುರ, ಅ.21: ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸುಧಾ ಮೊಗವೀರ ಇವರು ಅ.21ರಂದು ಶ್ರೀ ಕ್ಷೇತ್ರ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ, ಈ ಹಿಂದಿನ ಕೊಲ್ಲೂರು ದೇವಳದ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರತ್ನ ರಮೇಶ್ ಕುಂದರ್ ಇವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಅವರಂತೆ ಇವರು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಕಾರ್ಯದರ್ಶಿ ಪ್ರಭಾಕರ್ ಸೇನಾಪುರ, ಕೋಶಾಧಿಕಾರಿ ಸತೀಶ್ ಎಮ್ ನಾಯ್ಕ್, ಉಪಾಧ್ಯಕ್ಷರಾದ ನಾಗೇಶ್ ಪಿ ಕಾಂಚನ್, ಮತ್ತು ಜಗದೀಶ್ ಮೊಗವೀರ ಮಾರ್ಕೋಡು, ರಮೇಶ್ ಕುಂದರ್, ಕೊಲ್ಲೂರು, ರತ್ನ ರಮೇಶ್ ಕುಂದರ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ ಅಧ್ಯಕ್ಷ ದಿನೇಶ್ ಬಿ ಕಾಂಚನ್, ನಿಕಟಪೂರ್ವ ಅಧ್ಯಕ್ಷ ಲೋಹಿತಾಶ್ವ ಆರ್ ಕುಂದರ್, ದೇವಸ್ಥಾನದ ಮ್ಯಾನೇಜರ್ ವಾಸು ಜಿ ನಾಯ್ಕ್, ಆನಂದ್ ಕೆ ನಾಯ್ಕ್, ಸ್ತ್ರೀ ಶಕ್ತಿ ಸದಸ್ಯರು ಸುಮತಿ ಉದಯ್ ಕುಮಾರ್, ಬೇಬಿ ಜಿ ನಾಯ್ಕ್, ಸುಮಿತ್ರ ಆನಂದ್ ಮೊಗವೀರ ಹಾಗೂ ದೇವಸ್ಥಾನ ಸಿಬ್ಬಂದಿ ರಾಘವೇಂದ್ರ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!