Tuesday, October 22, 2024

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ 2024-25ನೇ ಸಾಲಿನ “ಎಜ್ಯುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ರ್‍ಯಾಂಕಿಂಗ್ ಪ್ರಶಸ್ತಿ

ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2024-25ನೇ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟದ ಅತ್ಯುನ್ನತ ಗೌರವವಾದ “ಎಜ್ಯುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ರ್‍ಯಾಂಕಿಂಗ್” ಪ್ರಶಸ್ತಿಗೆ ಪಾತ್ರವಾಗಿದೆ.

ದೇಶದಲ್ಲಿಯೇ ಅತ್ಯುತ್ತಮ ಸಹಶಿಕ್ಷಣದ ಜೊತೆಗೆ ಶೈಕ್ಷಣಿಕ ಹಾಗೂ ಸಹಪಠ್ಯ ಕ್ಷೇತ್ರಗಳಲ್ಲಿ ಮಾಡಿರುವ ಅಪರೂಪದ ಸಾಧನೆಗಳು ಮತ್ತು ಸಮಗ್ರ ಶಿಕ್ಷಣವನ್ನು ಒದಗಿಸುವಲ್ಲಿ ಶಾಲೆ ತೋರಿರುವ ಕಾಳಜಿ ಹಾಗೂ ಡೇ ಸ್ಕೂಲ್ ಶಾಲೆಗಳ ವಿಭಾಗದಲ್ಲಿ ಉತ್ತಮ ಶ್ರೇಯಾಂಕವನ್ನು ಹೊಂದಿರುವ ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೂರನೇ ಬಾರಿಗೆ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪದೆದುಕೊಳ್ಳುತ್ತಿರುವುದು ಗಮನಾರ್ಹವಾಗಿದೆ.

ಅಕ್ಟೋಬರ್ ೧೭, ೨೦೨೪ ರಂದು ನವದೆಹಲಿಯ ಗುರುಗ್ರಾಮ್ ನ “ಲೀಲಾ ಅಂಬಿಯೆನ್ಸ್” ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶಾಲೆಯ ಸಂಯೋಜಕರಾದ ಶ್ರೀಮಧು ಕೆ ಎಲ್ ಅವರು ಶಾಲೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರೂ ಆದ ಶರಣ ಕುಮಾರ ಅವರು ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, “ಈ ಗೌರವವು ನಮ್ಮ ಶಾಲೆಯ ಶೈಕ್ಷಣಿಕ ಸಾಧನೆಗಳು ಮತ್ತು ಸಹ-ಶಿಕ್ಷಣ ಚಟುವಟಿಕೆಗಳಿಗೆ ಸಂದ ಪ್ರಮುಖ ಪ್ರಶಸ್ತಿಯಾಗಿದೆ. ನಮ್ಮ ಆಡಳಿತ ಮಂಡಳಿಯ ಶೈಕ್ಷಣಿಕ ಕಾಳಜಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಸಾಂಘಿಕ ಪರಿಶ್ರಮವೇ ಈ ಯಶಸ್ಸಿನ ಮೂಲ ಕಾರಣವಾಗಿದೆ. ಈ ಸಾಧನೆಗೆ ಸಂಸ್ಥೆಯ ಪ್ರತಿ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಅವರು ಮುಂದುವರೆದು, “ಈ ಪ್ರಶಸ್ತಿಯು ನಮ್ಮ ಶಾಲೆಯ ಶ್ರೇಷ್ಠತೆಯ ಮೊತ್ತ ಮೊದಲ ಹೆಜ್ಜೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆಹಾಕಲು ನಮಗೆ ಪ್ರೇರಣೆ ನೀಡುತ್ತದೆ. ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ, ಹೊಸ ಹೊಸ ಶೈಕ್ಷಣಿಕ ತಂತ್ರಗಳನ್ನು ಅಳವಡಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದರು.

ಶಾಲೆಯ ಆಡಳಿತಾಧಿಕಾರಿಗಳಾದ ವೀಣಾರಶ್ಮಿ ಎಮ್ ಅವರು ಪ್ರಶಸ್ತಿಯ ಹಿನ್ನಲೆಯಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, “ನಮ್ಮ ಶಾಲೆಯ ಶೈಕ್ಷಣಿಕ ತತ್ವಗಳು ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿನ ನಿಷ್ಠೆಯು ಇನ್ನಷ್ಟು ಉತ್ತೇಜನ ಹೊಂದಲು ಇದು ಸಹಾಯಕವಾಗಲಿದೆ, ಪ್ರತಿ ವಿದ್ಯಾರ್ಥಿಯ ಸಮಗ್ರ ವಿಕಸನಕ್ಕೆ ನಮ್ಮ ಎಲ್ಲಾ ಕಾರ್ಯಚಟುವಟಿಕೆಗಳು ಪೂರಕವಾಗಲಿದೆ ಎಂದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!