spot_img
Wednesday, January 22, 2025
spot_img

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಸಹಕಾರಿ ಕ್ರೀಡಾಕೂಟ 2024-25 ಸಮಗ್ರ ಪ್ರಶಸ್ತಿ

ಮಂದಾರ್ತಿ: ಮಂದಾರ್ತಿ ಸೇವಾ ಸಹಕಾರಿ ಸಂಘ ನಿ. ಮಂದಾರ್ತಿ ಇದರ ಶತಮಾನೋತ್ಸವ ಸಂಭ್ರಮಾಚರಣೆ ಶತಸಾರ್ಥಕ್ಯ ಕಾರ್ಯಕ್ರಮದ ಪ್ರಯುಕ್ತ ಇವರ ನೇತೃತ್ವದಲ್ಲಿ ದಿನಾಂಕ ೨೦.೧೦.೨೦೨೪ರಂದು ಭಾನುವಾರ ಪ್ರೌಢಶಾಲಾ ಮೈದಾನ, ಮಂದಾರ್ತಿ ಇಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸಹಕಾರಿ ಕ್ರೀಡಾಕೂಟ 2024-25 ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಗೆ ಮುನ್ನ ನಡೆದ ಪಥ ಸಂಚಲನದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇವರೊಂದಿಗೆ ಸಂಘದ ಎಲ್ಲಾ ಸಿಬ್ಬಂದಿಯವರು ಸಮವಸ್ತ್ರ ಧರಿಸಿ ಶಿಸ್ತುಬದ್ಧವಾಗಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿರುತ್ತಾರೆ.

ತದನಂತರ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಸಂಘದ ಸಿಬ್ಬಂದಿಯವರು ಉತ್ಸಾಹದಿಂದ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ. ಮಹಿಳಾ ವಿಭಾಗದ ಹಗ್ಗ ಜಗ್ಗಾಟ, ೪*೧೦೦ ಮೀಟರ್ ರಿಲೇ ಓಟ ಮತ್ತು ಪುರುಷರ ವಿಭಾಗದ ವಾಲಿಬಾಲ್, ಹಗ್ಗ ಜಗ್ಗಾಟ, ೪*೧೦೦ ಮೀಟರ್ ರಿಲೇ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಹಿಳಾ ವಿಭಾಗದ ಗುಂಡೆಸತ, ಲೆಮನ್ ಸ್ಪೂನ್ ಓಟ, ೧೦೦ ಮೀಟರ್ ಓಟ ಮತ್ತು ೪೦೦ ಮೀಟರ್ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿದ್ದು, ಮಹಿಳಾ ವಿಭಾಗದ ೧೦೦ ಮೀಟರ್ ಓಟ, ೪೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ ಮಹಿಳಾ ವಿಭಾಗದ ೧೦೦ ಮೀಟರ್ ಓಟ ಮತ್ತು ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಪುರುಷರ ವಿಭಾಗದ ಜಾವೆಲಿನ್ ಎಸೆತ, ೪೦೦ ಮೀಟರ್ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿದ್ದು, ಪುರುಷರ ವಿಭಾಗದ ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಂಘದ ಅಧ್ಯಕ್ಷರಾದ ಡಾ| ಕೃಷ್ಣ ಕಾಂಚನ್, ನಿರ್ದೇಶಕರಾದ  ಕೆ. ಉದಯ ಕುಮಾರ್ ಶೆಟ್ಟಿ, ಜಿ. ತಿಮ್ಮ ಪೂಜಾರಿ,  ರವೀಂದ್ರ ಕಾಮತ್,  ಮಹೇಶ ಶೆಟ್ಟಿ,  ರಂಜಿತ್ ಕುಮಾರ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ  ಶರತ್ ಕುಮಾರ್ ಶೆಟ್ಟಿ ಇವರು ಕ್ರೀಡಾಕೂಟದಲ್ಲಿ ಸಂಘದ ಸಿಬ್ಬಂದಿಯವರೊಂದಿಗೆ ಉಪಸ್ಥಿತರಿದ್ದು, ಅವರಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸಿದರು.

ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸುರೇಶ ಕಾಂಚನ್ ಇವರು ಕ್ರೀಡಾಕೂಟಕ್ಕೆ ಸಂಘದ ಸಿಬ್ಬಂದಿಯವರನ್ನು ತರಬೇತುಗೊಳಿಸುವಲ್ಲಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!