spot_img
Tuesday, March 3, 2026
spot_img

ಶ್ರೀ ಮಾಸ್ತಿಯಮ್ಮ ಹೈಗುಳಿ ಸಪರಿವಾರ ದೈವಸ್ಥಾನ ಮಾರನಮನೆ ತಲ್ಲೂರು: ದಶಮ ವರ್ಧಂತ್ಯೋತ್ಸವ

ಕುಂದಾಪುರ : ಶ್ರೀ ಮಾಸ್ತಿಯಮ್ಮ ಹೈಗುಳಿ ಸಪರಿವಾರ ದೈವಸ್ಥಾನ ಮಾರನಮನೆ ತಲ್ಲೂರು ಇದರ ದಶಮ ವರ್ಧಂತ್ಯೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಶುಭ ಹಾರೈಸಿದರು. ಇದೇ ಸಂದರ್ಭ ಮಾಣಿ ರಮೇಶ ಪೂಜಾರಿ ಅವರಿಗೆ ರಾಜ್ಯ ವರ್ಷದ ಮಾರನಮನೆ ರಂಗೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಸೇವಕ ಕೋಡಿ ಅಶೋಕ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ ಅನನ್ಯ ಶೇರುಗಾರ್, ಭಕ್ತಿ ಶೆಟ್ಟಿ ಮತ್ತು ಮಾನ್ಯ ದೇವಾಡಿಗ, ದೂರದರ್ಶನ ರಾಜ್ಯ ಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಷ್ಣು ಉಪ್ಪಿನಕುದ್ರು ಅವರನ್ನು ಗೌರವಿಸಲಾಯಿತು.

ತಲ್ಲೂರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಗಿರೀಶ ನಾಯ್ಕ್, ದೈಹಿಕ ಶಿಕ್ಷಣ ಶಿಕ್ಷಕ ಕುಸುಮಾಕರ ಶೆಟ್ಟಿ, ಅಶೋಕ ಪೂಜಾರಿ ಕೋಡಿ, ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಹರ್ಕೂರು, ರಂಗೋತ್ಸವ ಸಮಿತಿ ಅಧ್ಯಕ್ಷ ಗುರುರಾಜ್ ದೇವಾಡಿಗ, ರಾಘವೇಂದ್ರ ಆರ್. ದೇವಾಡಿಗ ವಡ್ಡರ್ಸೆ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

ಚಂದ್ರ ದೇವಾಡಿಗ ಮಾರನಮನೆ ಸ್ವಾಗತಿಸಿದರು. ಸನ್ನಿಧಿ ದೇವಾಡಿಗ ಪ್ರಾರ್ಥಿಸಿದರು. ರವಿರಾಜ್ ದೇವಾಡಿಗ ಮಾರನಮನೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!