spot_img
Wednesday, March 4, 2026
spot_img

ಮಹಿಳೆಯರು ರಂಗದ ಮೇಲೂ ವಿಜೃಂಬಿಸಿದಾಗ ಮಕ್ಕಳಲ್ಲಿ ಪ್ರತಿಭೆ ಇನ್ನಷ್ಟು ಭದ್ರವಾಗುತ್ತದೆ: ಶ್ರೀನಿವಾಸ ಸೋಮಯಾಜಿ

ತೆಕ್ಕಟ್ಟೆ: ಮಾರ್ಚ್ 1: ರಂಗ ಚಟುವಟಿಕೆಯನ್ನು ನಿರ್ವಹಿಸುತ್ತಾ ಸಮಾಜ ತಿದ್ದುವ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿರಂತರ ರಂಗ ಚಟುವಟಿಕೆಯಿಂದ ಯಶಸ್ಸು ಸಾಧಿಸಿದ ಯಶಸ್ವೀ ಕಲಾವೃಂದ ಮಹಿಳೆಯರ ತಂಡವಾಗಿಸಿಕೊಂಡು ವರ್ಷದಿಂದ ವರ್ಷಕ್ಕೆ ಬೆಳೆಯುವುದನ್ನು ನೋಡುವಾಗ ನಿಜಕ್ಕೂ ಸಂತೋಷವಾಗುತ್ತದೆ. ಮಹಿಳೆಯರು ರಂಗದ ಮೇಲೂ ವಿಜೃಂಬಿಸಿದಾಗ ಮಕ್ಕಳಲ್ಲಿ ಪ್ರತಿಭೆ ಇನ್ನಷ್ಟು ಭದ್ರವಾಗುತ್ತದೆ. ಮಹಿಳಾ ದಿನಾಚರಣೆಯನ್ನು ಉತ್ಸುಕತೆಯನ್ನು ಬಹಳ ಮುಂಚೆಯೇ ಆಚರಿಸಿ ಸಂಭ್ರಮಿಸಿದ್ದು ಶ್ಲಾಘ್ಯ ಯೋಗ್ಯ ವಿಚಾರ. ವಿವಿಧ ಕಲಾ ಪ್ರಕಾರವನ್ನು ಒಂದೇ ದಿನದಲ್ಲಿ ವೇದಿಕೆಯಲ್ಲಿ ತಂದು ಹಬ್ಬವಾಗಿಸಿದ ಮಹಿಳಾ ತಂಡ ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ನಿವೃತ್ತ ಹಿಂದಿ ಉಪನ್ಯಾಸಕರಾದ ಶ್ರೀನಿವಾಸ ಸೋಮಯಾಜಿ ಶುಭ ಹಾರೈಸಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಮಾರ್ಚ್ 1ರಂದು ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಸಹಕಾರದೊಂದಿಗೆ ಯಶಸ್ವಿ ಕಲಾವೃಂದ ಮಹಿಳಾ ತಂಡದ ಕಾರ್ಯಕ್ರಮದ ಸಂದರ್ಭ ಶ್ರೀನಿವಾಸ ಸೋಮಯಾಜಿ ಮಾತನ್ನಾಡಿದರು.
ಹಿರಿಯ ತಾಳಮದ್ದಳೆ ಅರ್ಥದಾರಿ ಮೀರಾ ವಿ. ಸಾಮಗ, ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ, ನರಸಿಂಹ ತುಂಗರನ್ನು ಸಮ್ಮಾನಿಸಲಾಯಿತು. ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಂಘಟಕಿ ಭಾರತಿ ಮೈಯ್ಯ, ಸಂಗೀತ ಆಚಾರ್, ಸುಧಾ ಮಣೂರು ಉಪಸ್ಥಿತರಿದ್ದರು. ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಶಸ್ವೀ ಮಹಿಳೆಯರಿಂದಲೇ ನೃತ್ಯ, ಹಾಡು, ನಾಟಕ, ಯಕ್ಷಗಾನ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!