spot_img
Thursday, March 5, 2026
spot_img

ವಿಧಾನ ಪರಿಷತ್‌ ಉಪ ಚುನಾವಣೆ : ಆಲೂರು ಗ್ರಾ.ಪಂ ನ ಒಂಬತ್ತು ಸದಸ್ಯರಿಂದ ಚುನಾವಣಾ ಬಹಿಷ್ಕಾರ !

ಜನಪ್ರತಿನಿಧಿ (ಕುಂದಾಪುರ) : ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ಆಲೂರು ಗ್ರಾ.ಪಂ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಆಲೂರು ಗ್ರಾಮ ಪಂಚಾಯತ್‌ ನಲ್ಲಿ ಒಟ್ಟು ಹದಿನಾಲ್ಕು ಮಂದಿ ಸದಸ್ಯರಿದ್ದು, ಅವರಲ್ಲಿ ಒಂಬತ್ತು ಮಂದಿ ಚುನಾವಣಾ ಬಹಿಷ್ಕರಿಸಿದ್ದಾರೆ. ಅಧ್ಯಕ್ಷರಾದ ರಾಜೇಶ್‌ ಎನ್‌ ದೇವಾಡಿಗ, ಉಪಾಧ್ಯಕ್ಷ ರವಿ ಶೆಟ್ಟಿ, ಸದಸ್ಯರಾದ ಸುಧಾಕರ ಶೆಟ್ಟಿ, ಜಲಜ ಶೆಡ್ತಿ, ರಾಘವೇಂದ್ರ, ಜಯಲಕ್ಷ್ಮೀ, ಮಂಜುಳಾ, ಸಿಂಗಾರಿ, ರಾಜೇಂದ್ರ ಅವರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆಂದು ತಿಳಿದು ಬಂದಿದೆ.

ಆಲೂರು ಗ್ರಾಂ ಪಂಚಾಯತ್‌ ಕಸ್ತೂರಿ ರಂಗನ್ ವರದಿಗೆ ಒಳಪಡುವ ಗ್ರಾಮಗಳಲ್ಲಿ ಒಂದು. ಕಸ್ತೂರಿ ರಂಗನ್‌ ವರದಿಯಿಂದ ಆಲೂರು ಗ್ರಾಮವನ್ನು ಕೈ ಬಿಡುವಂತೆ ಗ್ರಾಮ ಪಂಚಾಯತ್‌ ಸದಸ್ಯರು ಒತ್ತಾಯಿಸಿದ್ದರು. ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆಂದು ಎಚ್ಚರಿಕೆ ನೀಡಿದ್ದರು. ಅಂತೆಯೇ ಇಂದು ನಡೆದ ಚುನಾವಣೆಯನ್ನು ಪಂಚಾಯತ್‌ ನ ಒಂಬತ್ತು ಮಂದಿ ಸದಸ್ಯರು ಬಹಿಷ್ಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!