spot_img
Wednesday, April 1, 2026
spot_img

ವಿಧಾನ ಪರಿಷತ್‌ ಉಪ ಚುನಾವಣೆ : ಕೆರಾಡಿ, ಚಿತ್ತೂರು ಗ್ರಾ.ಪಂಚಾಯತ್‌ ಸದಸ್ಯರಿಂದ ಚುನಾವಣಾ ಬಹಿಷ್ಕಾರ

ಜನಪ್ರತಿನಿಧಿ (ಕುಂದಾಪುರ) : ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ಕೆರಾಡಿ ಮತ್ತು ಚಿತ್ತೂರು ಗ್ರಾ.ಪಂ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಕೆರಾಡಿ ಗ್ರಾಪಂ. ನಲ್ಲಿ ಹದಿನಾಲ್ಕು ಮಂದಿ ಚುನಾಯಿತ ಪ್ರತಿನಿಧಿಗಳಿದ್ದು ಅಷ್ಟೂ ಮಂದಿ ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಅಧ್ಯಕ್ಷರಾದ ಸುದರ್ಶನ್‌ ಶೆಟ್ಟಿ, ಉಪಾಧ್ಯಕ್ಷರಾದ ಕುಸುಮಾ ಪೂಜಾರಿ, ಸದಸ್ಯರಾದ ಸುಜಾತ, ರಾಘವೇಂದ್ರ ಕೊಠಾರಿ, ಗೋವಿಂದ ಪೂಜಾರಿ, ಶಶಿಕಲಾ, ಸಂದೀಪ್‌ ಕುಮಾರ್‌ ಶೆಟ್ಟಿ, ಸುಜಾತ ನಾಯ್ಕ್‌, ದಿನೇಶ್‌, ನಾರಾಯಣ ಶೆಟ್ಟಿ, ಲಕ್ಷ್ಮೀ, ಮಂಜು ಕೊಠಾರಿ, ಗಿರಿಜಾ ಶೆಡ್ತಿ, ಜ್ಯೋತಿ ವಿಟ್ಟಿ ಚುನಾವಣಾ ಬಹಿಷ್ಕರಿಸಿದ್ದಾರೆ.

ಇನ್ನು, ಚಿತ್ತೂರು ಗ್ರಾಪಂ ನಲ್ಲಿ ಒಟ್ಟು ಎಂಟು ಮಂದಿ ಸದಸ್ಯರಿದ್ದು, ಅವರಲ್ಲಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಸುಬ್ಬು, ಸದಸ್ಯರಾದ ದಿವಾಕರ ಆಚಾರ್ಯ, ಶ್ರೀಮತಿ ಜಯಂತಿ ಪೂಜಾರಿ, ಮಂಜುನಾಥ್‌ ದೇವಾಡಿಗ,ಚಂದ್ರ ಶೆಟ್ಟಿ ಸೇರಿ ಒಟ್ಟು ಆರು ಮಂದಿ ಚುನಾವಣಾ ಬಹಿಷ್ಕರಿಸಿದ್ದಾರೆ.

ಕೆರಾಡಿ ಹಾಗೂ ಚಿತ್ತೂರು ಗ್ರಾಂ ಪಂಚಾಯತ್‌ ಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡುತ್ತಿವೆ. ತಮ್ಮ ಗ್ರಾಮಗಳನ್ನು ಈ ವರದಿಯಿಂದ ಕೈಬಿಡುವಂತೆ ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದರು. ಜನಪ್ರತಿನಿಧಿಗಳು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸದಕ್ಕೆ ಪ್ರತಿಕಾರವಾಗಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!