spot_img
Monday, June 23, 2025
spot_img

ವಿಧಾನ ಪರಿಷತ್‌ ಉಪ ಚುನಾವಣೆ : ಜಡ್ಕಲ್ ಗ್ರಾಪಂ ಸದಸ್ಯರಿಂದ ಚುನಾವಣಾ ಬಹಿಷ್ಕಾರ

ಜನಪ್ರತಿನಿಧಿ(ಜಡ್ಕಲ್‌) : ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ಜಡ್ಕಲ್ ಗ್ರಾ.ಪಂ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಜಡ್ಕಲ್ ಗ್ರಾಪಂನಲ್ಲಿ 18 ಸದಸ್ಯೆಯರಿದ್ದು, ಅಧ್ಯಕ್ಷೆ ಪಾರ್ವತಿ ಸೇರಿದಂತೆ ಉಪಾಧ್ಯಕ್ಷೆ ಭಾರತಿ ಶೆಟ್ಟಿ, ಸದಸ್ಯರಾದ ದೇವದಾಸ್‌ ವಿ.ಜೆ, ಸೂಲ್ಯ ಭೋವಿ, ಚಂದ್ರಮೋಹನ್‌, ಸುಂದರ ನಾರಾಯಣ ಭೋವಿ, ಲಕ್ಷ್ಮಣ ಶೆಟ್ಟಿ, ನಾರಾಯಣ ಶೆಟ್ಟಿ, ವನಜಾಕ್ಷಿ ಶೆಟ್ಟಿ, ಸುನಿತಾ, ಪಾರ್ವತಿ, ಶ್ರೀಮತಿ ಮಂಜು, ಶ್ರೀನಿವಾಸ್‌, ಲಕ್ಷ್ಮೀ ಚಂದನ್‌, ಸವಿತಾ ನಾಯ್ಕ್‌, ಶ್ರೀಮತಿ ನಾಯ್ಕ್, ವಿದ್ಯಾವತಿ ಕನ್ನಂತ, ನಾಗೇಶ್‌ ನಾಯ್ಕ್‌ ಅವರು ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ.

(ಚುನಾವಣೆ ಬಹಿಷ್ಕರಿಸಿದ ಜಡ್ಕಲ್‌ ಗ್ರಾಪಂ ಸದಸ್ಯರು)

ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಗಳು ಮತದಾರರು ಮತಗಟ್ಟೆ ಕಡೆಗೆ ಸುಳಿಯದೆ ಇದ್ದಿದ್ದರಿಂದ ವಾಪಾಸ್‌ ತೆರಳುವಂತಾಗಿದೆ.

ಜಡ್ಕಲ್ ಗ್ರಾಪಂನ ಜಡ್ಕಲ್ ಮತ್ತು ಮುದೂರು ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡುತ್ತಿವೆ. ತಮ್ಮ ಗ್ರಾಮಗಳನ್ನು ಈ ವರದಿಯಿಂದ ಕೈಬಿಡುವಂತೆ ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದರು. ಪ್ರತಿಭಟನೆಯನ್ನೂ ಕೂಡ ಮಾಡಿದ್ದರು. ಚುನಾವಣಾ ಪೂರ್ವದಲ್ಲಿಯೂ ಜನಪ್ರತಿನಿಧಿಗಳು ತಮ್ಮೊಂದಿಗೆ ಕೈಜೋಡಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಬೈಂದೂರು ತಹಿಶೀಲ್ದಾರರು, ಕುಂದಾಪುರ ಸಹಾಯಕ ಆಯುಕ್ತರು ಹಾಗೂ ಅಪರ ಜಿಲ್ಲಾಧಿಕಾರಿಗಳು ಸದಸ್ಯರನ್ನು ಮನವೊಲಿಸುವ ಪ್ರಯತ್ನದಲ್ಲಿ ವಿಫಲರಾದರು. ಕಾಂಗ್ರೆಸ್‌ ಹಾಗೂ ಬಿಜೆಪಿ ಉಭಯ ಪಕ್ಷದವರು ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.  ಜನಪ್ರತಿನಿಧಿಗಳು ಸೂಕ್ತವಾಗಿ ತಮ್ಮ ಬೇಡಿಕೆಗೆ ಸ್ಪಂದಿಸದೆ ಇರುವ ಕಾರಣ ಇಂದು ಜಡ್ಕಲ್‌ ಗ್ರಾಮ ಪಂಚಾಯತ್‌ ಸದಸ್ಯರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!