Friday, October 18, 2024

ರಾಮ ದೇವಾಡಿಗರಿಗೆ ರಾಜ್ಯಮಟ್ಟದ “ಅಪರ್ಣ ನಿರೂಪಣಾ ರತ್ನ” ಪ್ರಶಸ್ತಿ ಪ್ರದಾನ

ಬೆಂಗಳೂರು: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಇವರಿಗೆ ರಾಜ್ಯಮಟ್ಟದಲ್ಲಿ ನೀಡಲಾಗುವ “ಅಪರ್ಣಾ ನಿರೂಪಣಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ನಿರೂಪಕಿಯಾಗಿದ್ದ ದಿ. ಅಪರ್ಣಾ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ನೀಡಲಾಗುತ್ತಿದ್ದು, ಅ.15ರಂದು ಬೆಂಗಳೂರಿನ ಇಂಡೋ ಗ್ಲೋಬೋ ಕಾಲೇಜಿನಲ್ಲಿ ನಡೆದ ೨೦೨೪ರ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಸೂರ್ಯ ಫೌಂಡೇಶನ್, ಬೆಂಗಳೂರು, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ಹಾಗೂ ಸ್ಪಾರ್ಕ್ ಅಕಾಡೆಮಿ, ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದವು. ರಾಜ್ಯದ ನಾಲ್ಕು ವಿಭಾಗಗಳಿಂದ ಆಯ್ಕೆಯಾದ ಶ್ರೇಷ್ಠ ನಿರೂಪಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೊದಲ ಸುತ್ತಿನ ಸ್ಪರ್ಧೆಯಲ್ಲಿ ೭೪೮ ಕ್ಕೂ ಹೆಚ್ಚು ನಿರೂಪಕರು ಭಾಗವಹಿಸಿದ್ದರು.

ಇವರ ಜೊತೆಯಲ್ಲಿ ಎಮ್. ಪ್ರದೀಪ್ ಕುಮಾರ್ (ಕಲಬುರ್ಗಿ ವಿಭಾಗ), ರಾಮಪ್ಪ ಮಿರ್ಚಿ (ಬೆಳಗಾವಿ ವಿಭಾಗ), ಹೇಮಲತಾ ವೈ. ಎಸ್. (ಬೆಂಗಳೂರು ವಿಭಾಗ) ಇವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪರಿಷತ್ತಿನ ಅಧ್ಯಕ್ಷರಾದ ಪಿ. ಮಹೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ರಾಮ ದೇವಾಡಿಗ ಅವರ ವಿಶಿಷ್ಟ ನಿರೂಪಣಾ ಕೌಶಲ್ಯವನ್ನು ಗುರುತಿಸಿ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ, ಅವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಛಾಪನ್ನು ಮೂಡಿಸಲಿ ಎಂದು ಹಾರೈಸಿ, ಇಂತಹ ಶ್ರೇಷ್ಠ ನಿರೂಪಕರಿಗೆ ಅಪರ್ಣಾ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ, ರಾಜ್ಯದ ನಾಲ್ಕು ವಿಭಾಗಗಳಿಂದ ಅತ್ಯುತ್ತಮ ನಿರೂಪಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!