spot_img
Wednesday, April 1, 2026
spot_img

ನೂಜಾಡಿ ಬಗ್ವಾಡಿ ಕ್ರಾಸ್ ನಲ್ಲಿ ಧರಣಿ ಹೆಲ್ತ್ ಕೇರ್ ಶುಭಾರಂಭ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಕುಂದಾಪುರ ತಾಲೂಕು ನೂಜಾಡಿ ಸಮೀಪದ ಬಗ್ವಾಡಿ ಕ್ರಾಸ್‌ನಲ್ಲಿ ಧರಣಿ ಹೆಲ್ತ್ ಕೇರ್ ಅಕ್ಟೋಬರ್ 11ರಂದು ಶುಭಾರಂಭಗೊಂಡಿತು.

ಪ್ರೇರಣ ಹೆಲ್ತ್ ಕೇರ್ ವೈದ್ಯಾಧಿಕಾರಿಗಳು, ಉಪನ್ಯಾಸಕರು ಆದ ಡಾ.ಸುಬ್ರಹ್ಮಣ್ಯ ಭಟ್ ನೂತನ ವೈದ್ಯಕೀಯ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಸೇವಾ ಮನೋಭಾವ ಹೊಂದಿರಬೇಕು. ರೋಗಿಯೇ ದೇವರು. ಮನುಷ್ಯತ್ವದ ನೆಲೆಯಲ್ಲಿ ಕೆಲಸ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಬಹಳ ಮುಖ್ಯ. ಹೀಗೆ ಮಾಡಿದಲ್ಲಿ ಯಶಸ್ವಿಯಾಗುವುದು ಖಂಡಿತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೇ.ಮೂ.ಕೃಷ್ಣ ಭಟ್ ನೂಜಾಡಿ ಶುಭ ಹಾರೈಸಿ ಮಾತನಾಡಿ ಈ ಭಾಗದಲ್ಲಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವ ವೈದ್ಯರಾದ ಡಾ.ಶರಧಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ರಾಜೀವ ಶೆಟ್ಟಿ ಬಗ್ವಾಡಿ, ಅನಂದ ಶೆಟ್ಟಿ ಉಳ್ಳೂರು, ಸದಾಶಿವ ಶೆಟ್ಟಿ ಹೊಸಾಡು, ಅನಂದ ಶೆಟ್ಟಿ ನೂಜಾಡಿ, ಲಯನ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

ಡಾ| ಶರಧಿ ಶೆಟ್ಟಿಯವರು ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ|ಕಿಶೋರ್ ಕುಮಾರ್ ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು ಬಿ.ಎ ಎಂ.ಎಸ್ ಪದವಿಯನ್ನು ಸುಳ್ಯದ ಕೆವಿಜೆ ಕಾಲೇಜಿನಲ್ಲಿ  ಪಡೆದಿದ್ದಾರೆ. ಬೇರೆ, ಬೇರೆ ಕಡೆ ಸೇವೆ ಸಲ್ಲಿಸಿ ತನ್ನ ಸ್ವಂತ ಊರಿನಲ್ಲಿ ಸೇವೆಯನ್ನು ಆರಂಭಿಸಿದ್ದಾರೆ.

ಆಗಮಿಸಿದ ಎಲ್ಲ ಗಣ್ಯರನ್ನು ಡಾ| ಶರಧಿ ಶೆಟ್ಟಿ ಸ್ವಾಗತಿಸಿದರು. ಡಾ|ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!