spot_img
Saturday, August 15, 2026
spot_img

ತ್ರಾಸಿ: ನವೀಕೃತ ಅಂಬಾ ಟಿ.ವಿ ಸೆಂಟರ್ ಶುಭಾರಂಭ

ತ್ರಾಸಿ: (ಜನಪ್ರತಿನಿಧಿ ವಾರ್ತೆ) ಇಲೆಕ್ಟ್ರಾನಿಕ್ ಉಪಕರಣ ಮತ್ತು ಫರ್ನಿಚರ್‍ಸ್ ಮಾರಾಟ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಮನೆ ಮಾತಾಗಿರುವ ಅಂಬಾ ಟಿ.ವಿ ಸೆಂಟರ್ ಮತ್ತು ಹೋಮ್ ಅಪ್ಲಾಯನ್ಸಸ್ ಸಂಸ್ಥೆ ನವೀಕೃತಗೊಂಡು ಅಕ್ಟೋಬರ್ 11ರಂದು ಶುಭಾರಂಭಗೊಂಡಿತು.
ರಾಷ್ಟ್ರೀಯ ಹೆದ್ದಾರಿ ತ್ರಾಸಿ ಬಳಿ ಇರುವ ಅಂಬಾ ಟವರ್‍ಸ್ ನಲ್ಲಿರುವ ನವೀಕೃತ ಅಂಬಾ ಟಿ.ವಿ ಸೆಂಟರ್ ಮತ್ತು ಹೋಮ್ ಅಪ್ಲಾಯನ್ಸಸನ್ನು ಪ್ರಸಿದ್ಧ ಡಿವೈನ್ ಗ್ರೂಫ್‌ನ ಡೀಲರಾದ ಜಾನ್ ವಿಲ್ಸನ್ ಉದ್ಘಾಟಿಸಿ ಶುಭ ಹಾರೈಸಿದರು.
ವಿಶಾಲವಾದ ಈ ಮಳಿಗೆಯಲ್ಲಿ ಬಹು ಆಯ್ಕೆಯ ವಿವಿಧ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ವಸ್ತುಗಳ ಮಾರಾಟವಾಗುತ್ತಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಸುಧಾಕರ ಎಸ್ ಶೆಟ್ಟಿ, ತಾಯಿ ಚಣಕಮ್ಮ ಶೆಟ್ಟಿ, ಪತ್ನಿ ಶ್ಯಾಮಲ, ಪುತ್ರಿ ಸುರಕ್ಷ, ಪುತ್ರ ಸಾತ್ವಿಕ್ ಅತಿಥಿಗಳನ್ನು ಬರಮಾಡಿಕೊಂಡರು.
ಮಾರಾಟ ನಂತರ ಉತ್ತಮ ಸೇವೆಗೆ ಹೆಸರಾದ ಸಂಸ್ಥೆ ಇದೀಗ ಹೊಸತನದೊಂದಿಗೆ ಶುಭಾರಂಭಗೊಂಡಿದೆ. ಬೈಂದೂರು ಕ್ಷೇತ್ರದ ಹಳ್ಳಿಹಳ್ಳಿಗಳಿಗೂ ಸೇವೆ ನೀಡುತ್ತಿರುವ ಈ ಸಂಸ್ಥೆ ವಿಶಾಲ ಸ್ಥಳದಲ್ಲಿ ನವೀಕೃತಗೊಂಡು ಶುಭಾರಂಭಗೊಂಡಿದೆ.
ಈ ಸಂದರ್ಭದಲ್ಲಿ ಗ್ರಾಹಕರು, ಗಣ್ಯರು ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!